Asianet Suvarna News Asianet Suvarna News

ನನ್ನ ಗೆಲ್ಲಿಸಿದ್ದೆ ಅವರು :ರಮೇಶ್ ಕುಮಾರ್ ಹಾಡಿ ಹೊಗಳಿದ ಜೆಡಿಎಸ್ ಶಾಸಕ

  • ನಾನು ಚುನಾವಣೆಯಲ್ಲಿ ಬಹುಮತದ ಅಮತರದಿಂದ ಗೆಲ್ಲಲು ಕಾರಣವೇ ಇವರು
  • ಸಾಯುವವರೆಗೂ ರಮೇಶ್ ಕುಮಾರ್‌ ಅವರನ್ನೇ ಎಂಎಲ್‌ಎ ಆಗಿ ಆರಿಸಬೇಕು
  • ಕೋಲಾರದಲ್ಲಿ ಜೆಡಿಎಸ್ ಶಾಸಜ ಶ್ರೀನಿವಾಸ್ ಗೌಡ ಹೊಗಳಿಕೆ ಮಹಾಪೂರ
JDS MLA Srinivas gowda praises Congress leader ramesh kumar snr
Author
Bengaluru, First Published Aug 3, 2021, 2:09 PM IST
  • Facebook
  • Twitter
  • Whatsapp

ಕೋಲಾರ (ಆ03): ಕಳೆದ ಚುನಾವಣೆಯಲ್ಲಿ ನಾನು 46 ಸಾವಿರ ಮತಗಳ ಅಂತರದಿಂದ ಶಾಸಕನಾಗಿ ಅಯ್ಕೆಯಾಗಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೇ ಕಾರಣ. ಮುತ್ಸದ್ದಿ ರಾಜಕಾರಣಿಯಾದ ಅವರನ್ನು ಪಕ್ಷ ಪಂಗಡ ನೋಡದೇ ಅವರು ಸಾಕು ಎನ್ನುವವರೆಗೂ ಅವರನ್ನ ಶಾಸಕರನ್ನಾಗಿ ಆಯ್ಕೆ ಮಾಡಬೇಕು ಎಂದು ಶಾಸಕ ಶ್ರೀನಿವಾಸ ಗೌಡ ಹೇಳಿದರು.

ಭಾನುವಾರ ಇಡೀ ದಿನ ತಮ್ಮ ಹೋಬಳಿಯ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಶಾಸಕ ರಮೇಶ್ ಕುಮಾರ್‌ ಜೊತೆಗೆ  ಭಾಗವಹಿಸಿ ಮಾತನಾಡಿದ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ  ರಮೇಶ್ ಕುಮಾರ್‌ ಸಾಯುವವರೆಗೂ ಅವರನ್ನೇ ಎಂಎಲ್‌ಎ ಮಾಡಬೇಕೆಂದರು. 

'ಶೀಘ್ರ ಜೆಡಿಎಸ್ ಶಾಸಕ ಕಾಂಗ್ರೆಸ್‌ ಸೇರ್ಪಡೆ : ದಳಕ್ಕ ಸಂಕಷ್ಟ'

ಹೋಳೂರು ಮತ್ತು ಹುತ್ತೂರು ಇರುವವರೆಗೆ ನಾನು ಸೋಲೆ ಕಂಡಿರಲಿಲ್ಲ.  ಕ್ಷೇತ್ರ ವಿಂಗಡಣೆಯಲ್ಲಿ ನನ್ನ ಗುರು ಬೈರೇಗೌಡ ಕ್ಷೇತ್ರ ಚನ್ನಾಗಿದೆ ಎಂದು ಭಾವಿಸಿದ್ದೆ. ಆದರೆ ಎರಡು ಸಲ ಮಣ್ಣು ಮುಕ್ಕಿದೆ ಎಂದರು. 

ಮೂರನೇ ಬಾರಿ ನಾನು ಗೆಲ್ಲಬೇಕಾದರೆ ರಮೇಶ್ ಕುಮಾರ್‌ ಎಸ್‌ ಸಿ ಎಸ್‌ಟಿ ಜನಾಂಗ ಒಂದುಗೂಡಿಸಿ 46 ಸಾವಿರ ಲೀಡ್ ಬರುವಂತೆ ಮಾಡಿದರು ಎಂದರು.

Follow Us:
Download App:
  • android
  • ios