ಶ್ರೀರಂಗಪಟ್ಟಣ (ಅ.01) :  ಶ್ರೀರಂಗಪಟ್ಟಣ ವ್ಯವಸಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್‌ ) ಅಧಿಕಾರದ ಚುಕ್ಕಾಣಿ ಜೆಡಿಎಸ್‌ ಪಾಲಾಗಿದೆ.

ಬುಧವಾರ ನಡೆದ ಚುನಾವಣೆಯಲ್ಲಿ ಎಲ್ಲಾ 8 ಸ್ಥಾನಗಳಲ್ಲಿ ಜೆಡಿಎಸ್‌ ಬೆಂಬಲಿತರು ಆಯ್ಕೆಯಾಗುವ ಮೂಲಕ ಶಾಸಕರು ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಸಾಧಿಸಿದ್ದಾರೆ.

ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ತಮ್ಮ ಬೆಂಬಲಿಗರನ್ನು ಜಯಶಾಲಿಗಳಾಗಿ ಮಾಡುವ ಮೂಲಕ ಕಳೆದ 3 ಅವಧಿಯಲ್ಲೂ ಅಧಿಕಾರದ ಚುಕ್ಕಾಣೆ ಹಿಡಿದಿದ್ದ ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ಬೆಂಬಲಿಗರಿಗೆ ಹಿನ್ನಡೆಯುಂಟು ಮಾಡಿದ್ದಾರೆ.

ಶಿರಾ ಜೆಡಿಎಸ್‌ ಅಭ್ಯರ್ಥಿ ಆಯ್ಕೆ : 2 ದಿನದಲ್ಲಿ ಘೋಷಣೆ ...

ಎ-ತರಗತಿಯ ಸಹಕಾರ ಕ್ಷೇತ್ರದಿಂದ ಕೆ.ಕೃಷ್ಣ (15 ಮತಗಳು), ಎಂ.ಸಿ.ಮೋಹನ್‌ ಕುಮಾರ್‌ (15 ಮತಗಳು), ಎಸ್.ಎಲ್.ರಾಮಲಿಂಗೇಗೌಡ (15 ಮತಗಳು) ಹಾಗೂ ಎಂ.ಎನ್.ವಿಜಯ್‌ ಕುಮಾರ್‌ (15 ಮತಗಳು) ಆಯ್ಕೆಯಾಗಿದ್ದಾರೆ.

ಬಿ-ತರಗತಿಯ ಷೇರುದಾರರ ಕ್ಷೇತ್ರದಲ್ಲಿ ಎಸ್ ವಿ.ಕಾಂತಾಮಣಿ, (ಸಾಮಾನ್ಯ ಮಹಿಳಾ ಮೀಸಲು 819ಮತಗಳು), ವಿ.ಜಯರಾಜ್ (ಹಿಂದುಳಿದ ವರ್ಗ ಎ, 777 ಮತಗಳು), ಎಸ್‌.ಎಲ್‌.ದಿವಾಕರ್‌ (ಸಾಮಾನ್ಯ, 926 ಮತಗಳು), ನಾಗರಾಜು (ಪರಿಶಿಷ್ಟಪಂಗಡ, 697 ಮತಗಳು) ಎಂ.ನಂದೀಶ್‌, (ಸಾಮಾನ್ಯ, 879 ಮತಗಳು), ಜಿ.ಪಿ. ಲಕ್ಷ್ಮಣ್‌ (ಪರಿಶಿಷ್ಟಜಾತಿ, 758 ಮತಗಳು), ಲಕ್ಷ್ಮಿದೇವಮ್ಮ (ಸಾಮಾನ್ಯ ಮಹಿಳೆ ಮೀಸಲು, 802 ಮತಗಳು), ಶ್ರೀಕಂಠ (ಹಿಂದುಳಿದ ವರ್ಗ, 741 ಮತಗಳು) ಜಯಗಳಿಸಿದ್ದಾರೆ.