ಪಿರಿಯಾಪಟ್ಟಣ[ಆ.29]: ತಾಲೂಕಿನ ಪಂಚವಳ್ಳಿ ಹಾಗೂ ಕಂಪಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವುದರ ಮುಖಾಂತರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸೋಲುಣಿಸಿದ್ದಾರೆ.

ಪಂಚವಳ್ಳಿ ಪಿಎಸಿಸಿಎಸ್‌ನಲ್ಲಿ ಜೆಡಿಎಸ್‌ನ 12 ಬೆಂಬಲಿತ ಅಭ್ಯರ್ಥಿಗಳಾದ ಎಸ್.ವಿ. ತಿಮ್ಮೇಗೌಡ, ಮಂಜುನಾಥೇಗೌಡ, ಕೆ. ರಾಜು, ವಿರೇಂದ್ರಕುಮಾರ್, ಪರ ಮೇಶ, ಪಾಷಲಾಲ್, ಮಂಗಳಮ್ಮ, ಸಿದ್ದಮ್ಮ, ತಿಮ್ಮನಾಯಕ, ಯೋಗಾವತಿ, ಶಶಿಕಲಾ ಹಾಗೂ ಪವನ್‌ಕುಮಾರ್ ಆಯ್ಕೆಯಾದರು.

ಕಂಪಲಾಪುರ ಪಿಎಸಿಸಿಎಸ್‌ನಲ್ಲಿ ಜೆಡಿಎಸ್‌ನ 12 ಬೆಂಬಲಿತ ಅಭ್ಯರ್ಥಿಗಳಾದ ಕೆ. ಕುಮಾರ್, ಕೆ.ಎನ್. ಜಯಣ್ಣ, ರಾಜೇಗೌಡ, ಕೆ.ಆರ್. ಸಂತೋಷ್, ಮಹೇಶ್, ಸಣ್ಣಮ್ಮ, ಸಾಕಮ್ಮ, ಸತ್ಯನಾರಾಯಣ, ಲೋಕೇಶ್, ಕೆಂಪಯ್ಯ, ಕೆ.ಜಿ. ರವಿ ಹಾಗೂ ಪಕ್ಷೇತರವಾಗಿ ಜೆಡಿಎಸ್ ಬೆಂಬಲದಿಂದ ಸ್ಪರ್ಧಿಸಿದ್ದ ಕೆ.ಎಂ. ಲಕ್ಷ್ಮಣ್ ಆಯ್ಕೆಯಾದರು. 

ಮುಂದಿನ ದಿನಗಳಲ್ಲಿ ಕೆ.ಎಂ. ಲಕ್ಷ್ಮಣ್ ಅವರು ಶಾಸಕ ಕೆ. ಮಹದೇವ್ ನೇತೃತ್ವದ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಾಪಂ ಸದಸ್ಯರಾದ ಈರಯ್ಯ ಹಾಗೂ ಆರ್.ಎಸ್. ಮಹದೇವ್ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ, ರೈತರಿಗೆ ಸಹಕಾರ ಸಂಘಗಳ ಮುಖಾಂತರ ಸಿಗುವ ಸೌಲಭ್ಯಗಳನ್ನು ಪಾರದರ್ಶಕವಾಗಿ ನಮ್ಮ ಪಕ್ಷದ ನಿರ್ದೇಶಕರು ಒದಗಿಸಿ ರೈತರ ಅಭಿವೃದ್ದಿಗೆ ಸಹಕರಿಸುತ್ತಾರೆ ಎಂಬ ಭರವಸೆ ನೀಡಿದರು.

ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಶಾಸಕ ಕೆ. ಮಹದೇವ್ ಹಾಗೂ ನೂತನ ನಿರ್ದೇಶಕರಿಗೆ ಜೈಕಾರ ಕೂಗಿದರು. ಮುಖಂಡರಾದ ಸಂತೋಷ್, ಅಪೂರ್ವ ರವಿ, ಗ್ರಾಪಂ ಸದಸ್ಯ ಮುತ್ತು, ಕಾರ್ಯಕರ್ತರು ಇದ್ದರು.