Asianet Suvarna News Asianet Suvarna News

Council Election Karnataka : ಕೈ, ಕಮಲ ನೆಂಟಸ್ತಿಕ ರಾಜಕಾರಣದಿಂದ ಸೋಲು : ಈಗ ಜೆಡಿಎಸ್‌ಗೆ ಗೆಲುವು ಖಚಿತ

  •  ಕೈ, ಕಮಲ ನೆಂಟಸ್ತಿಕ ರಾಜಕಾರಣದಿಂದ ಸೋತೆವು : ಈಗ ಜೆಡಿಎಸ್‌ಗೆ ಗೆಲುವು
  • - ಲೋಕಸಭಾ ಚುನಾವಣೆ ಸೋಲು ಆಕಸ್ಮಿಕ: ಸಿ.ಎಸ್‌.ಪುಟ್ಟರಾಜು
  • - ಈಗ ಜೆಡಿಎಸ್‌ ಗೆಲುವನ್ನು ತಡೆಯಲು ಸಾಧ್ಯವೇ ಇಲ್ಲ
JDS Will  win in in Karnataka Council Election Mandya says CS Puttaraju snr
Author
Bengaluru, First Published Dec 1, 2021, 7:41 AM IST
  • Facebook
  • Twitter
  • Whatsapp

 ಮಂಡ್ಯ (ಡಿ.01): ಲೋಕಸಭಾ ಚುನಾವಣೆಯಲ್ಲಿನ (Loksabha Election ) ಸೋಲು ಆಕಸ್ಮಿಕ. ಕಾಂಗ್ರೆಸ್‌-ಬಿಜೆಪಿ ನೆಂಟಸ್ತಿಕೆ ರಾಜಕಾರಣ ಮಾಡಿ ಪಕ್ಷದ ಸೋಲಿಗೆ ಕಾರಣವಾಯಿತು. ವಿಧಾನ ಪರಿಷತ್‌ ಚುನಾವಣೆಯಲ್ಲಿ(MLC  Election ) ಜೆಡಿಎಸ್‌ (JDS) ಗೆಲುವು ನಿಶ್ಚಿತ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು (CS Puttaraju) ವಿಶ್ವಾಸದಿಂದ ನುಡಿದರು.  ಮೇಲುಕೋಟೆ ವಿಧಾನಸಭಾ (Assembly Constituency) ಕ್ಷೇತ್ರದ ದುದ್ದ ಗ್ರಾಮದಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯ (MLC Election) ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಒಬ್ಬ ನಾಯಕನಾಗಿ ಬೆಳವಣಿಗೆ ಕಾಣಬೇಕಾದರೆ ಮೊದಲು ಸೋಲಬೇಕು. ರಾಜ್ಯ ನಾಯಕರಾಗಿ ಬೆಳವಣಿಗೆ ಕಾಣಬೇಕಾದರೆ, ನಾಳಿನ ಗೆಲುವನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಸೋಲನ್ನು ಸಹಿಸಿಕೊಳ್ಳಬೇಕು ಎಂದು ನಿಖಿಲ್‌ (Nikil) ಅವರಿಗೂ ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು.

ಜಿಲ್ಲೆಯ ಗ್ರಾಪಂಗಳಲ್ಲಿ 2546ಕ್ಕೂ ಹೆಚ್ಚು ಜೆಡಿಎಸ್‌ (JDS) ಮತಗಳಿವೆ. ಅದರ ಮೇಲೂ ಮತಗಳನ್ನು ಪಡೆಯುವುದಕ್ಕೆ ಶ್ರಮ ಹಾಕುತ್ತಿದ್ದೇವೆ. ದುದ್ದ ವ್ಯಾಪ್ತಿಯ 11 ಗ್ರಾಪಂಗಳೂ ನಮ್ಮ ಹಿಡಿತದಲ್ಲೇ ಇವೆ. ಹಾಗಾಗಿ ಅಪ್ಪಾಜಿ ಗೌಡರ (Appaji Gowda) ಗೆಲುವು ಶತಸ್ಸಿದ್ಧ ಎಂದು ಖಚಿತವಾಗಿ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಿದ್ಧನಿದ್ದೇನೆ. ಅಪ್ಪಾಜಿ ಗೌಡರ ಗೆಲುವಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಪರಿಷತ್‌ ಅಭ್ಯರ್ಥಿ ಎನ್‌.ಅಪ್ಪಾಜಿ ಗೌಡ ಮಾತನಾಡಿ, ನಾನು ನಾಗಮಂಗಲ (Nagamangala) ವಿಧಾನಸಭಾ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ನಾನು ಈ ಬಾರಿ ಬೇರೆಯವರಿಗೆ ಅವಕಾಶ ಕೊಟ್ಟು ನನಗೆ ವಿಧಾನ ಸಭೆಗೆ ಸ್ಪರ್ಧಿಸಲು ಅನುಕೂಲ ಮಾಡಿಕೊಡುವಂತೆ ಕೋರಿದ್ದೆ. ಬೇರೆ ಬೇರೆ ಕಾರಣದಿಂದ ವರಿಷ್ಠರು ಈ ಬಾರಿಯೂ ವಿಧಾನ ಪರಿಷತ್ತಿನಿಂದಲೇ ಸ್ಪರ್ಧಿಸುವಂತೆ ಸೂಚಿಸಿದರು. ಅವರ ಸೂಚನೆ ಮೇರೆಗೆ ಸ್ಪರ್ಧಿಸಿದ್ದೇನೆ. ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂಬುದು ನಮಗೆ ಗೊತ್ತಿದೆ. ನಮ್ಮೆಲ್ಲಾ ಶಾಸಕರು, ಕಾರ‍್ಯಕರ್ತರು, ಮುಖಂಡರ ಬೆಂಬಲದಿಂದ ಚುನಾವಣೆಯನ್ನು ಎದುರಿಸುತ್ತಿದ್ದೇನೆ. ಇದರಲ್ಲಿ ಭಯಪಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ 2015ರಲ್ಲಿ ಪರಿಷತ್‌ ಚುನಾವಣೆ (MLC Election) ಟಿಕೆಟ್‌ ಸಿಕ್ಕಾಗ ಶಾಸಕರೆಲ್ಲರೂ ನನ್ನ ಬೆಂಬಲಕ್ಕೆ ನಿಂತರು. ನಾನು ನಿರೀಕ್ಷಿಸದ ರೀತಿಯಲ್ಲಿ ಬೆಂಬಲ ಕೊಟ್ಟು ಗೆಲ್ಲಿಸಿದರು. 6 ವರ್ಷಗಳ ಕಾಲ ಎಲ್ಲ ಶಾಸಕರೊಂದಿಗೆ ಸೌಹಾರ್ದ ಸಂಬಂಧ ವನ್ನಿಟ್ಟುಕೊಂಡು ಮುನ್ನಡೆದಿದ್ದೇನೆ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು, ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಚುನಾವಣೆಯಲ್ಲಿ ಶಾಸಕ ಸಿ.ಎಸ್‌.ಪುಟ್ಟರಾಜು ನೇತೃತ್ವದಲ್ಲಿ ಚುನಾವಣೆ (Election) ಎದುರಿಸಿ ಗೆಲುವು ಸಾಧಿಸಿದ್ದೆ. ಆ ಸಮಯದಲ್ಲಿ ನಾನು ಎಲ್ಲರ ಜೊತೆ ನಿಂತು ಕೈಮುಗಿದದ್ದು ಅಷ್ಟೇ. ಅಂದು ನಿರೀಕ್ಷೆಗೂ ಮೀರಿದ ಬೆಂಬಲ ದೊರಕಿತು. ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ತಿರಸ್ಕೃತಗೊಂಡ ಮತಗಳಲ್ಲಿ 200ಕ್ಕೂ ಹೆಚ್ಚು ಮತಗಳು ನನ್ನ ಪರವಾಗಿದ್ದವು. ಹಾಗಾಗಿ ಮತದಾನ ಮಾಡುವ ಸಮಯದಲ್ಲಿ ಮತದಾರರು ಜಾಗೃತಿ ವಹಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌, ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಜೆಡಿಎಸ್‌ (JDS) ಮುಖಂಡರಾದ ಯೋಗೇಶ್‌ ಸೇರಿದಂತೆ ಇತರರಿದ್ದರು.

ಕೊನೆಯವರೆಗೂ ಜೆಡಿಎಸ್‌ನಲ್ಲೇ ಉಳಿಯುವೆ: ಸಿ.ಎಸ್‌.ಪುಟ್ಟರಾಜು:  ನಾನು ಜೆಡಿಎಸ್‌ ಬಿಡುತ್ತೇನೆ ಎನ್ನುವುದೆಲ್ಲಾ ಊಹಾಪೋಹ. ನನ್ನ ಕೊನೆಯುಸಿರು ಇರುವವರೆಗೆ ಜೆಡಿಎಸ್‌ನಲ್ಲೇ ಉಳಿಯುತ್ತೇನೆ ಎಂದು ಮೇಲುಕೋಟೆ ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಜೆಡಿಎಸ್‌ನಲ್ಲಿ. ಆ ಪಕ್ಷದಲ್ಲೇ ಅಂತ್ಯವೂ ಆಗುತ್ತದೆ. ಬೇರೆ ಪಕ್ಷಗಳಿಗೆ ಹೋಗುವ ಯೋಚನೆಯನ್ನೂ ನಾನು ಮಾಡಿಲ್ಲ. ಅದರ ಅಗತ್ಯವೂ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷ ನನಗೆ ಅಧಿಕಾರ ಕೊಟ್ಟಿದೆ. ರಾಜಕೀಯ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಪಕ್ಷದಲ್ಲಿ ನೆಮ್ಮದಿಯಿಂದ ಇದ್ದೇನೆ. ಪಕ್ಷ ಬಿಡುವಂತಹ ಯಾವುದೇ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ಜೆಡಿಎಸ್‌ ಬೆಳವಣಿಗೆ ಸಹಿಸದವರು ವದಂತಿ ಹಬ್ಬಿಸುತ್ತಿದ್ದಾರೆ. ಅವುಗಳಿಗೆ ಕಿವಿಗೊಡಬೇಡಿ ಎಂದರು.

Follow Us:
Download App:
  • android
  • ios