Mysur : ಚುನಾವಣೆಯಲ್ಲಿ ಎಲ್ಲಾ ಸ್ಥಾನಕ್ಕೂ ಜೆಡಿಎಸ್‌ ಬೆಂಬಲಿತರ ಆಯ್ಕೆ

  ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ 12 ಸ್ಥಾನಗಳಿಗೆ ಚುನಾವಣೆ ನಡೆದು ಎಲ್ಲಾ ಸ್ಥಾನಗಳಿಗೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

 JDS supporters Victory  for all seats in the Milk Production Association election snr

  ಬೆಟ್ಟದಪುರ (ಅ.25):  ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ 12 ಸ್ಥಾನಗಳಿಗೆ ಚುನಾವಣೆ ನಡೆದು ಎಲ್ಲಾ ಸ್ಥಾನಗಳಿಗೂ ಜೆಡಿಎಸ್‌ (JDS)  ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಇವರಲ್ಲಿ ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ದೇವರಾಜು ಎಂಬವರು ಅವಿರೋಧವಾಗಿ ಆಯ್ಕೆಯಾದರೆ, ಉಳಿದ 11 ಸ್ಥಾನಗಳಿಗೆ ಚುನಾವಣೆ (Election)  ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ. ಪ್ರಸಾದ್‌ ತಿಳಿಸಿದ್ದಾರೆ.

6 ಸಾಮಾನ್ಯ ಸ್ಥಾನಗಳಿಗೆ ರೆಹಮತ್‌ ಉಲ್ಲಾ, ಸೈಯದ್‌ ಹಾಫೀಜ  ಪಯಾಜ್‌ ಪಾಷ, ಅನ್ವರ್‌ ಅಹಮದ್‌, ಶೇಖ್‌ ಯೂನಸ್‌, ನೂರುಲ್ಲಾ ಷರೀಫ್‌, ಜಾವೀದ್‌ ಪಾಷ, ಮಹಿಳಾ ಮೀಸಲು ಸ್ಥಾನಕ್ಕೆ ಫರ್ಜನ್‌ ಬಾನು, ಲಲಿತಮ್ಮ, ಪ.ಜಾತಿ ಮೀಸಲು ಸ್ಥಾನಕ್ಕೆ ಅಣ್ಣಯ್ಯ ಹಾಗೂ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಉಬೇದುಲ್ಲಾ ಆಯ್ಕೆಯಾಗಿದ್ದಾರೆ.

ಆರೋಪ: ಚುನಾವಣೆ ಹಿನ್ನೆಲೆ ಪರಾಜಿತ ಅಭ್ಯರ್ಥಿಗಳು ಚುನಾವಣೆಗೆ ಮತದಾರರ ಪಟ್ಟಿಯನ್ನು ಸಹಕಾರ ಸಂಘಗಳ ಬೈಲಾ ರೀತಿ ಪಟ್ಟಿಮಾಡದೆ ಬೇಕಾಗಿರುವವರಿಗೆ ಪಟ್ಟಿಮಾಡಿ ಚುನಾವಣೆ ನಡೆಸಿದ್ದಾರೆ. ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು ಎಂದು ವಕೀಲರಿಂದ ಸಂಘಕ್ಕೆ, ಮೈಮೂಲ್‌ ಅಧ್ಯಕ್ಷರಿಗೆ ಹಾಗೂ ಸಹಕಾರ ಇಲಾಖೆಗೆ ತಿಳಿವಳಿಕೆ ಪತ್ರ ರವಾನಿಸಲಾಗಿದೆ.

ಚುನಾವಣೆ ದಿನವೇ ವಿವಾಹವಾದ ಮದುವೆ ಗಂಡು ಜಾವೀದ್‌ ಪಾಷ ಸಂಘದ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿರುವುದು ವಿಶೇಷ. ಈ ವೇಳೆ ಗ್ರಾಮದ ಹಲವು ಜೆಡಿಎಸ್‌ ಮುಖಂಡರು ಹಾಗೂ ಯುವಕರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಆಯ್ಕೆಯಾದ ನೂತನ ನಿರ್ದೇಶಕರು ಹಾಗೂ ಮುಖಂಡರು ವಿಜಯೋತ್ಸವದಲ್ಲಿ ಪಾಲ್ಗೊಂಡರು.

ಪಿರಿಯಾಪಟ್ಟಣ :  ಅಭಿವೃದ್ಧಿ ಕಾರ್ಯ ಹಾಗೂ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಜೆಡಿಎಸ್‌ ಸೇರ್ಪಡೆಯಾಗುವವರಿಗೆ ಸದಾ ಸ್ವಾಗತ ಎಂದು ಶಾಸಕ ಕೆ. ಮಹದೇವ್‌ ಹೇಳಿದರು.

ತಾಲೂಕಿನ ಚೌತಿ ಗ್ರಾಮದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಶಾಸಕನಾದ ಬಳಿಕ ನಾನು ಹಾಗೂ ನನ್ನ ಮಗ ಪಿ.ಎಂ. ಪ್ರಸನ್ನ ಮೈಮುಲ… ಅಧ್ಯಕ್ಷರಾದ ಬಳಿಕ ತಾಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಅನ್ಯ ಪಕ್ಷಗಳನ್ನು ತೊರೆದು ವಿವಿಧ ವರ್ಗಗಳ ಮುಖಂಡರು ಜೆಡಿಎಸ್‌ ಸೇರ್ಪಡೆಗೊಳ್ಳುತ್ತಿರುವುದು ಶ್ಲಾಘನೀಯ, ಚೌತಿ ಗ್ರಾಮದ ಅಭಿವೃದ್ಧಿಗೆ ಸಾಕಷ್ಟುಅನುದಾನ ನೀಡಿದ್ದು, ಮುಂಬರುವ ದಿನಗಳಲ್ಲಿಯೂ ಮತ್ತಷ್ಟುಅನುದಾನ ನೀಡುವುದಾಗಿ ಅವರು ತಿಳಿಸಿದರು. ಜೆಡಿಎಸ್‌ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ

ಸಿ.ಎನ್‌. ರವಿ, ಗ್ರಾಪಂ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಲಕ್ಷ್ಮಣ… ಪಟೇಲ…, ಮಾಜಿ ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ಸದಸ್ಯರಾದ ಸ್ವಾಮಿ, ಶೇಖರ್‌, ರಾಮೇಗೌಡ, ಕಾಂತರಾಜ್‌, ಮುಖಂಡ ರಾಮೇಗೌಡ ಇದ್ದರು

ಜೆಡಿಎಸ್ ಗಾಳ :  ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯಮಿ ಕೆಜಿಎಫ್‌ ಬಾಬು (ಯೂಸುಫ್‌ ಷರೀಫ್‌) ಅವರನ್ನು ಜೆಡಿಎಸ್‌ನತ್ತ ಸೆಳೆಯುವ ಪ್ರಯತ್ನ ಆರಂಭವಾಗಿದ್ದು, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಖುದ್ದು ಬಾಬು ಅವರ ಮನೆಗೆ ಹೋಗಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.

ಕೆಜಿಎಫ್ ಬಾಬು ಮನೆ ಮೇಲೆ ಇಡಿ ದಾಳಿ ಅಂತ್ಯ: ಸತತ 18 ಗಂಟೆ ಶೋಧ, ಹಲವು ದಾಖಲೆ ವಶ

ಈ ಬಗ್ಗೆ ಇಬ್ರಾಹಿಂ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೆಜಿಎಫ್‌ ಬಾಬು, ‘ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್‌ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ, ಯೋಚಿಸಿ ಹೇಳುತ್ತೇನೆ, ಸಮಯಾವಕಾಶ ಕೊಡಿ ಎಂದು ಹೇಳಿದ್ದೇನೆ. ಈ ಬಗ್ಗೆ ಯಾವುದೇ ನಿರ್ಧಾರ ತಿಳಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ನನಗೆ ಟಿಕೆಟ್‌ ನಿರಾಕರಿಸಿಲ್ಲ. 350 ಕೋಟಿ ರು.ಗಳನ್ನು ಕ್ಷೇತ್ರದ ಬಡವರಿಗಾಗಿ ವೆಚ್ಚ ಮಾಡುತ್ತೇನೆ ಎಂದು ಹೇಳಿದ್ದೇನೆ. ಇದಕ್ಕೆ ಕಾಂಗ್ರೆಸ್‌ ಮುಖಂಡ ಆರ್‌.ವಿ. ದೇವರಾಜ್‌ ಹಾಗೂ ಶಾಸಕ ಉದಯ್‌ ಗರುಡಾಚಾರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಚಿಕ್ಕಪೇಟೆ ಕ್ಷೇತ್ರದ ಜನರ ಋುಣ ನನ್ನ ಮೇಲಿದೆ. ಆ ಋುಣವನ್ನು ತೀರಿಸುವುದರಿಂದ ನನ್ನನ್ನು ಯಾರೂ ತಡೆಯಲಾಗುವುದಿಲ್ಲ. ನಾನು ಯಾವುದೇ ಪಕ್ಷದಲ್ಲಿದ್ದರೂ ಕ್ಷೇತ್ರದ ಜನರಿಗಾಗಿ 350 ಕೋಟಿ ರು. ಖರ್ಚು ಮಾಡುವುದು ಸತ್ಯ. ಇದಕ್ಕೆ ಹೈಕೋರ್ಚ್‌ ಅನುಮತಿಯನ್ನೂ ಪಡೆಯುತ್ತೇನೆ ಎಂದು ಹೇಳಿದರು.

ಎರಡೂ ಪಕ್ಷದ ಟಿಕೆಟ್‌ ಸಿಗುತ್ತದೆ:

ನನಗೆ ಕಾಂಗ್ರೆಸ್‌ ಪಕ್ಷವೂ ಟಿಕೆಟ್‌ ನೀಡುತ್ತದೆ. ಜೆಡಿಎಸ್‌ ಪಕ್ಷವೂ ಟಿಕೆಟ್‌ ನೀಡುತ್ತದೆ. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಕ್ಷೇತ್ರಕ್ಕೆ 350 ಕೋಟಿ ರು. ಖರ್ಚು ಮಾಡುವುದು ನಿಶ್ಚಿತ. ಬಡವರಿಗೆ 3 ಸಾವಿರ ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳಿರುವ ಮಾತು ಉಳಿಸಿಕೊಳ್ಳುತ್ತೇನೆ. ಇದರಿಂದ ನನ್ನನ್ನು ಯಾರೂ ತಡೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಮೀರ್‌ಗೆ ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಕಾಂಗ್ರೆಸ್‌ ನಾಯಕ ಕೆಜಿಎಫ್ ಬಾಬು!

ಸಮಾಜ ಸೇವೆಗೆ ಅಡ್ಡಿಯಿಲ್ಲ- ಇಬ್ರಾಹಿಂ:

ಕೆಜಿಎಫ್‌ ಬಾಬು ಹಣ ವೆಚ್ಚ ಮಾಡಲು ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ನಾವೂ ಚುನಾವಣೆಗೆ 350 ಕೋಟಿ ರು. ಖರ್ಚು ಮಾಡುವುದನ್ನು ಒಪ್ಪುವುದಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಬೇರೆ ಸಮಯದಲ್ಲಿ ಅವರಿಗೆ ಸೇವೆ ಮಾಡಬೇಕು ಎನಿಸಿದರೆ ಅದನ್ನು ತಡೆಯಲು ಆಗುವುದಿಲ್ಲ. ಅವರು ದುಡಿದಿರುವ ಹಣ ಖರ್ಚು ಮಾಡಲು ಅವರು ಸಂಪೂರ್ಣ ಸ್ವತಂತ್ರರು. ಅದಕ್ಕೆ ನಾವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆಜಿಎಫ್‌ ಬಾಬು ಅವರು ಸೋತ ಬಳಿಕ ಚಿಕ್ಕಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಲಿ, ಬಿಡಲಿ ನಾನು ಸ್ಪರ್ಧಿಸುವುದು ಖಚಿತ ಎಂದಿದ್ದರು. ಇದಕ್ಕೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್‌ ಸಹ ನೀಡಿತ್ತು. ಇದಕ್ಕೆ ಕ್ಷಮೆ ಯಾಚಿಸಿದ್ದರು.

 

Latest Videos
Follow Us:
Download App:
  • android
  • ios