ಹಾಸನ [ಜ.13]: ಜಿಲ್ಲೆಯ ಸ್ಥಳೀಯ ಅಧಿಕಾರಿಗಳ ವಿರುದ್ಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಫುಲ್ ಗರಂ ಆಗಿದ್ದಾರೆ. 

ಹಾಸನದ ನಗರಸಭೆ 35ನೇ ವಾರ್ಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರ ಸಮಸ್ಯೆ ಆಲಿಕೆ ಸಭೆಗೆ ಗೈರಾಗಿರುವುದಕ್ಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಸಭೆಗೆ ತಹಸೀಲ್ದಾರ್, ನಗರಸಭೆ ಆಯುಕ್ತರು ಆಗಮಿಸದಿರುವ ಹಿನ್ನೆಲೆಯಲ್ಲಿ ಕೆಂಡಾಮಂಡಲರಾಗಿದ್ದು, ಇದೇ ರೀತಿಯ ನಿರ್ಲಕ್ಷ್ಯ ಭಾವನೆ ಮುಂದುವರಿದರೆ ಸರಿಯಾಗಲ್ಲ ಎಂದರು. 

ಸರ್ಕಾರದಿಂದಲೇ ದ್ವೇಷದ ಬೀಜ ಬಿತ್ತನೆ : ಕುಮಾರಸ್ವಾಮಿ...

ನಾನು ಯಾವ ಕೆಸಲ ಇಲ್ಲದೇ ಇಲ್ಲಿಗೆ ಬಂದಿಲ್ಲ. ಜನರ ಸಮಸ್ಯೆ ಕೇಳಿ ಬಗೆಹರಿಸಬೇಕಾದ ಅಧಿಕಾರಿಗಳೇ ಸಭೆಗೆ ಗೈರಾದರೆ, ಗಮನ ಹರಿಸೋರು ಯಾರು..? ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡುವೆ ಎಂದರು. 

ವಿದ್ಯುತ್ ಶಾಕ್ ತಪ್ಪಿಸಿಕೊಳ್ಳಲು ಆನೆಗಳ ಹೊಸ ಟೆಕ್ನಿಕ್ !...

ಅಲ್ಲದೇ ಯಾವ ಅಧಿಕಾರಿ ಯಾರ ಪ್ರಭಾವ, ಕೃಪಾಕಟಾಕ್ಷದಿಂದಲಾದರೂ ಬಂದಿರಲಿ. ಜನಪ್ರತಿನಿಧಿಗಳು ಎಲ್ಲರನ್ನೂ ಒಂದೇ ಎಂದು ಕಾಣಬೇಕು ಎಂದು ಪ್ರಜ್ವಲ್ ರೇವಣ್ಣ ಹೇಳಿದರು.