ಹಾಸನ [ಜ.09]: ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಆನೆಗಳ ನಿಯಂತ್ರಣಕ್ಕೆ ಯಾವ ಪ್ಲಾನ್ ಮಾಡಿದರೂ ವಿಫಲವಾಗುತ್ತಿದೆ. 

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ರೈತರು ಯಾವ ಟೆಕ್ನಿಕ್ ಬಳಸಿದರೂ ತಮ್ಮ ಬೆಳೆ ಉಳಿಸಿಕೊಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ. 

ಆನೆಗಳ ಹಾವಳಿ ತಡೆಗೆ ಸೋಲಾರ್ ಬೇಲಿಗಳನ್ನು ಹಾಕಿದ್ದು, ಆದರೆ ಸೋಲಾರ್ ಬೇಲಿಗಳನ್ನು ದಾಟಲೂ ಕೂಡ ಆನೆಗಳು ಟೆಕ್ನಿಕ್ ಬಳಸುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿದ್ಯುತ್ ಸಂಪರ್ಕವಿರುವ ತಂತಿಗಳ ಮೇಲೆ ಮರ ಮುರಿದು ಹಾಕಿ ಬೇಲಿ ದಾಟುತ್ತಿವೆ. ವಿದ್ಯುತ್ ಸಂಪರ್ಕ ತಪ್ಪಿಸಿ  ಚಾಣಾಕ್ಷತೆಯಿಂದ ವಿದ್ಯುತ್ ಶಾಕ್ ತಪ್ಪಿಸಿಕೊಂಡು ಹೊಲಗಳಿಗೆ ನುಗ್ಗುತ್ತಿವೆ.

ಹಾಸನದಲ್ಲಿ ಫೆ.20ರಿಂದ ಸಕ್ಕರೆ ಕಾರ್ಖಾನೆ ಆರಂಭ...

ಯಾವುದೇ ರೀತಿಯ ತಂತ್ರ ಬಳಸಿದರೂ ಕೂಡ ಆನೆಗಳ ಉಪಟಳ ತಡೆಯಲು ಸಾಧ್ಯವಾಗದೇ ಕೊನೆಯ ಯತ್ನವಾಗಿ ಮಾಡಿದ್ದ ಸೋಲಾರ್  ವಿದ್ಯುತ್ ಸಂಪರ್ಕದ ಬೇಲಿಯನ್ನೂ ಲೆಕ್ಕಿಸದೇ ಆನೆಗಳು  ಉಪಟಳ ಮುಂದುವರಿಸಿದೆ.