ಹಾಸನ (ಆ.25): ಮಹಾಮಾರಿ ಕೊರೋನಾ ಇದೀಗ ಹಾಸನ ಶಾಸಕರಿಗೂ ತಟ್ಟಿದೆ. 

ಹಾಸನ ಶಾಸಕ ಶಿವಲಿಂಗೇಗೌಡರಿಗೆ  ಟೆಸ್ಟ್ ವೇಳೆ ಕೊರೋನಾ ಪಾಸಿಟಿವ್ ಬಂದಿದೆ. 

ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

8 ದಿನ ಕ್ವಾರಂಟೈನ್ ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ. ಶಿವಲಿಂಗೇಗೌಡರ ಸಂಪರ್ಕದಲ್ಲಿದ್ವರಿಗೂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ. 

ಕಲಬುರಗಿ: ಸಂಸದ ಡಾ.ಜಾಧವ್‌ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು...

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಕೊರೋನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈಗಾಗಲೇ ಹಲವು ರಾಜಕೀಯ ಮುಖಂಡರಿಗೆ ಕೊರೋನಾ ಮಹಾಮಾರಿ ತಟ್ಟಿದ್ದು, ಹಲವರು ಗುಣಮುಖರಾಗಿ ಮರಳಿದ್ದಾರೆ. 

ಮುಂಡರಗಿ: ಕೊರೋನಾ ವಾರಿಯರ್‌ ವೈದ್ಯನ ನೆರವಿಗೆ ಧಾವಿಸಿದ ಸರ್ಕಾರ...

ಸಿಎಂ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಅವರಿಗೂ ಕೊರೋನಾ ತಟ್ಟಿ ಗುಣಮುಖರಾಗಿದ್ದಾರೆ.