ಮಾಗಡಿ (ನ.01): ಸಂಸದ ಡಿ.ಕೆ.ಸುರೇಶ್‌ ಬಗ್ಗೆ ಮಾತನಾಡುವಷ್ಟುನಾನು ದೊಡ್ಡವನಲ್ಲ. ಅವರು ಏನೇ ಮಾತ​ನಾ​ಡಿ​ದರೂ ಅದೆ​ಲ್ಲ​ವನ್ನು ಆಶೀ​ರ್ವಾ​ದ​ವಾಗಿ ಸ್ವೀಕ​ರಿ​ಸು​ತ್ತೇ​ನೆ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್‌ ನಮಗೆ ಹಿರಿಯರಿದ್ದು, ಯಾವ ರೀತಿ ಮಾರ್ಗದರ್ಶನ, ದಾರಿ ತೋರಿಸುತ್ತಾರೆ. ಆ ರೀತಿಯಲ್ಲಿ ನಡೆಯುವ ಇಚ್ಛೆ ಹೊಂದಿ​ದ್ದೇನೆ. ಅವರ ವಿಚಾರದಲ್ಲಿ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ. ನನ್ನ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಸಂಬಂಧವನ್ನು ಯಾರೂ ಸಹ ಅಳಿಸಲು ಸಾಧ್ಯವಿಲ್ಲ. ಅದನ್ನು ಬ್ರೇಕ್‌ ಮಾಡುತ್ತೀನಿ ಎನ್ನುವುದು ಮೂರ್ಖತನದ ಪರಮಾವಧಿ ಎಂ​ದರು.

ಅವರು ನಂಗೆ ಬುದ್ದಿ ಹೇಳೋದು ಬೇಡ : ಅದನ್ನ ಹೇಳೋಕೆ ರೇವಣ್ಣ ಇದ್ದಾರೆ ...

ಮೈತ್ರಿ ಸರ್ಕಾ​ರ​ದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಹಲವಾರು ಗ್ರಾಮಗಳಲ್ಲಿ ಆಗಬೇಕಿರುವ ಕಾಮಗಾರಿಗಳ ಪಟ್ಟಿಯನ್ನು ಕೊಟ್ಟಿದ ಹಿನ್ನಲೆಯಲ್ಲಿ ಅನುದಾನವನ್ನು ಮಂಜೂರು ಮಾಡಿಸಿದ್ದರು. ಬಿಜೆಪಿ ಸರ್ಕಾರ ಬಂದ ನಂತರ ಸ್ವಲ್ಪ ತಡ​ವಾ​ಗಿತ್ತು. ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥ ನಾರಾ​ಯಣ ಅವರ ಸಹಕಾರದಿಂದ ಸರ್ಕಾ​ರದ ಮೇಲೆ ಒತ್ತಡ ತಂದು ಅನುದಾನವನ್ನು ಬಿಡುಗಡೆ ಮಾಡಿಸಿ ಶಂಕು ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಪಂ ಸದಸ್ಯೆ ದಿವ್ಯ, ತಾಪಂ ಸದಸ್ಯ ಶಿವರಾಜ್, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ರಾಮಣ್ಣ, ಯುವ ಘಟಕದ ಅಧ್ಯಕ್ಷ ವಿಜಯ್‌ ಕುಮಾರ್‌ , ಅರುಂಧತಿ ಚಿಕ್ಕಣ್ಣ, ಶಿವರಾಮ್ಯ, ಉಮೇಶ್‌, ಬಿಜೆಪಿ ಮುಖಂಡ ಶ್ರೀ​ಧರ್‌ ಹಾಜ​ರಿ​ದ್ದರು.