ಮಂಡ್ಯ(ಜೂ.11): ಕಾಂಗ್ರೆಸ್‌ ಶಾ​ಸಕ ಜ​ಮೀರ್‌ ಅ​ಹ​ಮ​ದ್‌ ಉಲ್ಟಾ ಮತ್ತು ಪಲ್ಟಿ ಗಿ​ರಾಕಿ ಎಂದು ನಾ​ಗ​ಮಂಗಲ ಕ್ಷೇ​ತ್ರದ ಶಾ​ಸಕ ಕೆ.​ಸು​ರೇ​ಶ್‌​ಗೌಡ ಟೀ​ಕಿ​ಸಿ​ದ್ದಾರೆ. 

ನಾ​ಲಿಗೆ ಕು​ಲ​ವನ್ನು ಹೇ​ಳು​ತ್ತದೆ. ಅ​ವರು ಯಾವ ಸಂಸ್ಕೃ​ತಿ​ಯಿಂದ ಇ​ವ​ರೆಲ್ಲಾ ಬಂದ​ರು, ಯಾ​ರಿಂದ ಬಂದರು ಎ​ನ್ನು​ವು​ದನ್ನು ಸ್ವ​ಲ್ಪ ಆ​ತ್ಮಾ​ವ​ಲೋ​ಕನ ಮಾ​ಡಿ​ಕೊ​ಳ್ಳ​ಬೇಕು ಎಂದು ನಾ​ಗ​ಮಂಗ​ಲ​ದಲ್ಲಿ ಸು​ದ್ದಿ​ಗಾ​ರ​ರಿಗೆ ತಿ​ಳಿ​ಸಿ​ದರು.

ಹಾಲಿಗೆ ನೀರು ಪ್ರಕರಣ : ಮನ್ ಮುಲ್ ಡೈರಿಗೆ ಸಚಿವ ಸೋಮಶೇಖರ್ ಭೇಟಿ

ರಾ​ಜ್ಯ​ದಲ್ಲಿ ಡಾ.​ರಾ​ಜ್‌​ಕು​ಮಾರ್‌ ಬಿ​ಟ್ಟರೆ ಅಣ್ಣ ಎಂದು ಕ​ರೆ​ಯು​ವುದು ಕು​ಮಾ​ರ​ಣ್ಣ​ನನ್ನು ಮಾತ್ರ. ಅ​ವರು ನಿ​ಮ್ಮಿಂದ ಕ​ಲಿ​ಯು​ವುದು ಏನೂ ಇಲ್ಲ ಎಂದು ತಿರುಗೇಟು ನೀಡಿದರು. ನಿಮ್ಮ ವ​ರ್ತನೆ ಇದೇ ರೀತಿ ಮುಂದು​ವ​ರೆ​ದರೆ ನೀವು ಹೋದ ಕ​ಡೆ​ಗ​ಳಲ್ಲಿ ನಿ​ಮಗೆ ಯಾವ ರೀತಿ ಗೌ​ರವ ಕೊ​ಡ​ಬೇಕು, ಯಾವ ರೀತಿ ಸ್ವಾ​ಗ​ತಿ​ಸ​ಬೇಕು ಎ​ನ್ನು​ವು​ದನ್ನು ಜ​ನರೇ ತೀ​ರ್ಮಾ​ನಿ​ಸು​ತ್ತಾರೆ ಎಂದು ಕ​ಟ​ಕಿ​ಯಾ​ಡಿ​ದರು.