ಮಂಡ್ಯ (ಮಾ.08): ಎಚ್.ಡಿ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ದಿಂಡಿಗಲ್ನಿಂದ ಕನಕಪುರ  ಮಾರ್ಗವಾಗಿ ಮಳವಳ್ಳಿಯವರೆಗೆ ರೈಲ್ವೆ ಸರ್ವೆಯಾಗಿತ್ತು. ಈ ಬಗ್ಗೆ ಸಂಸತ್‌ನಲ್ಲಿ ಗಮನ ಸೆಳೆದು ಮೊದಲು ಮಳವಳ್ಳಿಗೆ ರೈಲು ಯೋಜನೆ ತರಬೇಕು ಎಂದು ಶಾಸಕ ಡಾ.ಕೆ.ಅನ್ನದಾನಿ ಸಂಸದೆ ಸುಮಲತಾ ಅವರಿಗೆ ಸಲಹೆ ನೀಡಿದರು. 

ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ  ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ  ಮಾತನಾಡಿದ ಅವರು ನಾನು ಶಾಸಕನಾಗಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನಗಳ ಮೂಲಕ  ರಸ್ತೆ ಕುಡಿಯುವ ನೀಡು ಪಶು ಆಸ್ಒತ್ರೆ ಸೇರಿದಂತೆ ಅನೇಕ ಯೋಜನೆ ತಂದಿದ್ದೇನೆ ಎಂದರು. 

'ಕಾಂಗ್ರೆಸ್ ನಾಯಕ ಶಿವಣ್ಣ ಲೋಕಸಭಾ ಚುನಾವಣೆಯಲ್ಲಿ ಸಹಕಾರ ನೀಡಿದ್ದರು'

ಶಾಸಕರು, ಸಂಸದರ ಅನುದಾನದ ಬಗ್ಗೆ ನನಗೆ ತಿಳಿದಿದೆ. ನಾನು ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ. ಬಿಎಂಜೆಎಸ್‌ವೈ ಯೋಜನೆಯ ರಸ್ತೆ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ಇಬ್ಬರ ಪಾಲಿದೆ. ಕ್ಷೇತ್ರದ ಜನರ ದಿಕ್ಕು ತಪ್ಪಿಸವೇಡಿ. ನೀವು ಮೊದಲು  ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ  ವಿಶೇಷ ಅನುದಾನ ತನ್ನು. ಕ್ಷೇತ್ರದ ಜನರಿಗೆ ಅನುಕೂಲ ಆಗಲು ಬಹು ವರ್ಷಗಳ  ನಿರೀಕ್ಷಿತ ರೈಲ್ವೆ ಯೋಜನೆ ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು. 

ರಾಜ್ಯದಲ್ಲಿ ಬಿಜೆಪಿ ಸಂಸದರು 25 ಮಂದಿ ಇದ್ದರೂ ಕೂಡ ರಾಜ್ಯಕ್ಕೆ  ಏನು ಕೊಡುಗೆ ನೀಡಿಲ್ಲ. ಕೇಂದ್ರ ಸರ್ಕಾರ ಸಮರ್ಪಕ ಅನುದಾನ ನೀಡುವಲ್ಲಿಯೂ ವಿಫಲವಾಗಿದೆ ಎಂದರು.