ಮಳವಳ್ಳಿ (ಮಾ.07):  ಪ್ರತಿ ಸಾರಿ ತಾಲೂಕಿಗೆ ಆಗಮಿಸುವಾಗ ತಾನು ಮಳವಳ್ಳಿ ಸೊಸೆ ಎನ್ನುವ ಹೆಮ್ಮೆ ಇದೆ. ಅಲ್ಲದೆ ಜಿಲ್ಲೆಯಲ್ಲಿ ಚುನಾವಣೆ ಮೊದಲು ಇದ್ದ ತೊಂದರೆ ಈಗಲೂ ಮುಂದುವರಿದಿದೆ. ಆದರೂ ಯಾವುದೇ ಭಯಪಡದೇ ಅನುದಾನ ತರಲು ಮುಂದಾಗಿದ್ದೇನೆ ಎಂದು ಸಂಸದೆ ಎ.ಸುಮಲತಾ ಅಂಬರೀಷ್‌ ಹೇಳಿದರು.

ತಾಲೂಕಿನ ಗಟ್ಟಿಕೊಪ್ಪಲು ಗ್ರಾಮದಲ್ಲಿ ಸಂಸದರ ಅನುದಾನದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹಿಂದುಳಿದ ಕೊರಮ ಸಮುದಾಯದ ಮಹಿಳೆ ಬಂಡೂರು ಗ್ರಾಪಂ ಅಧ್ಯಕ್ಷರಾಗಿ ದಡದಪುರ ಮುತ್ತಮ್ಮ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.

ಎಂಪಿ ನಿಧಿ ಬಳಕೆ: ಪ್ರತಾಪ್‌ ನಂ.1, ಸುಮಲತಾ ನಂ.2 ...

ಜಿಲ್ಲೆಯ ಆಡಳಿತ ವರ್ಗದಲ್ಲಿ ಮಹಿಳೆಯರೇ ಹೆಚ್ಚು ಇರುವುದು ಎಂಬುವುದಕ್ಕೆ ತಾವು ಸಂಸದೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಬಹುತೇಕ ಮಂದಿ ಮಹಿಳೆಯರೇ ಅಧಿಕಾರ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ದಡದಪುರ ಶಿವಣ್ಣನ ಸಹಕಾರ ನೆನೆದ ಸಂಸದೆ:

ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್‌.ಶಿವಣ್ಣ ಸಾಕಷ್ಟುಸಲಹೆ-ಸಹಕಾರ ನೀಡಿದ್ದು, ಅವರ ಮಾರ್ಗದರ್ಶನ ಮುಂದಿನ ದಿನಗಳಲ್ಲೂ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್‌.ಶಿವಣ್ಣ ಇದ್ದರು.