ಚನ್ನರಾಯಪಟ್ಟಣ (ನ.11): ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಎನ್ ಬಾಲಕೃಷ್ಣ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಳೆದ ನಾಲ್ಕು ದಿನಗಳಿಂದ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ  ಸೋಮವಾರ ಸಂಜೆಯೇ  ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ  ಕೋವಿಡ್ ಪರೀಕ್ಷೆ ನಡೆಸಿದ್ದಾರೆ. 

ವರದಿ ನೆಗೆಟಿವ್ ಇದ್ದು, ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್ ಸಹ ಮಾಡಲಾಗಿದೆ. 

ಕೈಯಲ್ಲಿದ್ದ ಶಿರಾ ಕ್ಷೇತ್ರ ಬಿಜೆಪಿಗೆ ‘ತ್ಯಾಗ’ ಮಾಡಿದ ಜೆಡಿಎಸ್ ...

ವಿವಿಧ ಪರೀಕ್ಷೆಗಳಿಗೆ ಒಳಪಡಿಸಿರುವ ವೈದ್ಯರು ಕೆಮ್ಮಿಗೆ ಚಿಕಿತ್ಸೆ ಅಗತ್ಯವಿದ್ದು ಸಾಕಷ್ಟು ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿ ಕೆಲ ದಿನಗಳು ಆಸ್ಪತ್ರೆಯಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿದ ಅವರು ಆದಷ್ಟು ಬೇಗ ಗುಣಮುಖರಾಗುವುದಾಗಿ ಹೇಳಿದ್ದಾರೆ.