ಚಿಕ್ಕಬಳ್ಳಾಪುರ : ಸಂಪೂರ್ಣ ಜೆಡಿಎಸ್ ವಶಕ್ಕೆ ಪಡೆಯಲು ಪ್ಲಾನ್
- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರನ್ನು ಗೆಲ್ಲಿಸುವುದೇ ಗುರಿ
- ಜಿಲ್ಲೆಯಾದ್ಯಂತ ಯುವಕರನ್ನು ಬಳಸಿಕೊಂಡು ಪಕ್ಷ ಸಂಘಟನೆಗೆ ಒತ್ತು
ಚಿಕ್ಕಬಳ್ಳಾಪುರ (ಅ.24): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Assembly Election) ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ (JDS) ಪಕ್ಷದ ಶಾಸಕರನ್ನು ಗೆಲ್ಲಿಸುವುದೇ ಜೆಡಿಎಸ್ ಯುವ ಘಟಕದ ಪರಮಗುರಿಯಾಗಿದ್ದು ಆ ನಿಟ್ಟಿನಲ್ಲಿ ಜಿಲ್ಲಾದ್ಯಂತ ಯುವಕರನ್ನು ಬಳಸಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದೆಂದು ಯುವ ಘಟಕದ ನೂತನ ಜಿಲ್ಲಾಧ್ಯಕ್ಷ ಗೋಪಲ್ಲಿ ರಘುನಾಥರೆಡ್ಡಿ (Gopalli Raghunath Reddy) ತಿಳಿಸಿದರು.
ನಗರದ ಜಿಲ್ಲಾ ಜೆಡಿಎಸ್ (JDS) ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಬಿಜೆಪಿ (BJP) ಸರ್ಕಾರಗಳ ಆಡಳಿತದ ವೈಫಲ್ಯಗಳ ಬಗ್ಗೆ ಜಿಲ್ಲೆಯ ಮತದಾರರಲ್ಲಿ ಅರಿವು ಮೂಡಿಸುವ ಕೆಲಸವನ್ನು ಜೆಡಿಎಸ್ ಯುವ ಘಟಕ ಸಂಘಟನಾತ್ಮಕವಾಗಿ ಮಾಡಿ ಆ ಮೂಲಕ ಜಿಲ್ಲಾದ್ಯಂತ ಸಾರ್ವತ್ರಿಕ ಚುನಾವಣೆಗೆ (Election) ಪಕ್ಷ ಸಂಘಟನೆ ಮಾಡಲಾಗುವುದೆಂದರು.
ಕುಮಾರಸ್ವಾಮಿಯಿಂದ ಅತ್ಯಾಪ್ತ ಶಾಸಕರು ದೂರ-ದೂರ, ದಳದಲ್ಲಿ ದಳವಾಯಿ ಅಂತರ್ ಯುದ್ಧ
ಈಗಾಗಲೇ ಜೆಡಿಎಸ್ ಯುವ ಘಟಕದಿಂದ (JDS Youth Wing) ಜಿಲ್ಲೆಯ ಎಲ್ಲಾ ತಾಲೂಕುಗಳ ಘಟಕಗಳ ರಚನೆ ಮಾಡಲಾಗಿದ್ದು ಬೂತ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ಸದಸ್ಯತ್ವ ಅಭಿಯಾನ ಶುರು ಮಾಡಲಾಗಿದೆ. ಜಿಲ್ಲೆಯಲ್ಲಿ ಯುವಕರನ್ನು ಸೆಳೆದು ಪಕ್ಷ ಸಂಘಟನೆ ಮಾಡಲಾಗುವುದು. ಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲೂ ಕೂಡ ಪಕ್ಷ ಉತ್ತಮ ಸಾಧನೆ ಮಾಡಲು ಯುವಶಕ್ತಿ ಕೆಲಸ ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ಕಾರ್ಯಾಧ್ಯಕ್ಷ ರಾಮಚಂದ್ರರೆಡ್ಡಿ, ಉಪಾಧ್ಯಕ್ಷರಾದ ಚೇತನ್, ಭಾಸ್ಕರ್, ಶ್ರೀನಿವಾಸ್ ಯಾದವ್, ವರುಣ್‌ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯರ್ಶಿ ಮುನಿಯಪ್ಪ, ನಂದನ್, ಖಜಾಂಚಿ ಜಿ.ಆರ್.ವೆಂಕಟೇಶ್, ಕಾರ್ಯದರ್ಶಿ ವಿಜಯಕುಮಾರ್, ಕೇತನಹಳ್ಳಿ ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಿಂದಗಿಯಲ್ಲಿ ಜೆಡಿಎಸ್ - ಬಿಜೆಪಿ ಹೋರಾಟ
ಹಾನಗಲ್ (Hanagal), ಸಿಂದಗಿ (Sindagi) ಚುನಾವಣಾ ಕಣ (Election) ಮೂರು ಪಕ್ಷದ ನಾಯಕರ ಭರ್ಜರಿ ಪ್ರಚಾರದಿಂದ ರಂಗೇರಿದೆ. ಇಂದು ಹಾನಗಲ್‌ನಲ್ಲಿ ಬಸವರಾಜ್ ಬೊಮ್ಮಾಯಿ (Basavaraj Bommai), ಬಿಎಸ್ ಯಡಿಯೂರಪ್ಪ (BS Yediyurappa) ಜಂಟಿಯಾಗಿ ಪ್ರಚಾರ ನಡೆಸಿದರು. ಇನ್ನು ಸಿಂದಗಿಯಲ್ಲಿ ಎಚ್‌ಡಿಕೆ (HD Kumaraswamy) ಪ್ರಚಾರ ನಡೆಸಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.'ಸಿಂದಗಿಯಲ್ಲಿ ಕಾಂಗ್ರೆಸ್‌ಗೆ ಬೇಸ್ ಇಲ್ಲ. ಇಲ್ಲೇನಿದ್ರೂ ಬಿಜೆಪಿ-ಜೆಡಿಎಸ್ ನಡುವೆ ಹೋರಾಟ. ಕಾಂಗ್ರೆಸ್ ಏನೇ ಅಪಪ್ರಚಾರ ಮಾಡಿದರೂ ನಮ್ಮ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಹಾನಗಲ್‌ನಲ್ಲಿ ಕಮಲ ಅರಳಿಸಲು ಬಿಜೆಪಿ ಸರ್ಕಸ್, ಮತದಾರರ ಮುಂದೆ ಹೊಸ ಸ್ಟ್ರಾಟಜಿ
ಆರ್‌ಎಸ್ಎಸ್ (RSS) ಬಗ್ಗೆ ಸದ್ಯಕ್ಕೆ ಟೀಕೆಯನ್ನು ನಿಲ್ಲಿಸುವುದಿಲ್ಲ. ಆರ್‌ಎಸ್‌ಎಸ್ ಸೂರ್ಯನಷ್ಟೇ ಬೆಳಗುತ್ತಿದೆ ಎಂದು ಆ ಪಕ್ಷದವರು ಹೇಳುತ್ತಾರೆ. ಸೂರ್ಯನೂ ಸಂಜೆಯಾದ ಮೇಲೆ ತೆರೆಮರೆಗೆ ಹೋಗಬೇಕು' ಎಂದು ಎಚ್‌ಡಿಕೆ ಹೇಳಿದ್ದಾರೆ.