JDS ತೊರೆದು ಕಾಂಗ್ರೆಸ್ ಸೇರಿದ ಮುಖಂಡರು : ಎಂದಿಗೂ ಕೈ ಬಿಡಲ್ಲವೆಂದ ನಾಯಕ
- ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ತವರು ಮನೆ ಸೇರಿದಂತಾಗಿದೆ ಎಂದ ಮುಖಂಡ
- ಕೆಪಿಸಿಸಿ ಕಾರ್ಯದರ್ಶಿ ನೇತೃತ್ವದಲ್ಲಿ ಪಕ್ಷಕ್ಕೆ ಮರು ಸೇರ್ಪಡೆ
ವಿಜಯಪುರ (ಜು.16): ಪ್ರಾರಂಭದಿಂದಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ನಾವು ಹಾಗೂ ನಮ್ಮ ಬೆಂಬಲಿಗರು ಮತ್ತೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ತವರು ಮನೆ ಸೇರಿದಂತಾಗಿದೆ ಎಂದು ಜೆಡಿಎಸ್ ಹೋಬಳಿ ಉಪಾಧ್ಯಕ್ಷರಾಗಿದ್ದ ಸದಾಶಿವ ರೆಡ್ಡಿ ತಿಳಿಸಿದರು.
ವಿಜಯಪುರ ಪಟ್ಟಣದ ತಮ್ಮ ನಿವಾಸದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಸಿ ಶ್ರೀನಿವಾಸ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾದರು.
ಕಾಂಗ್ರೆಸ್ ಸೇರಿದ ಬಿಜೆಪಿ ನೂರಾರು ಕಾರ್ಯಕರ್ತರು
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಬಿ. ಚೇತನ್ ಗೌಡರವರು ಮಾತನಾಡಿ ತಮ್ಮ ತಂದೆಯವರಾದ ಆರ್ ಬಚ್ಚೇಗೌಡರು ತಾಲೂಕಿನಲ್ಲಿ ಕಟ್ಟಿ ಬೆಳೆಸಿರುವ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಹೋಗುವುದಿಲ್ಲವೆಂದು ನನ್ನನ್ನು ನಂಬಿ, ನನ್ನನ್ನು ಬೆಳೆಸಿರುವವರನ್ನು ತೊರೆದು ಎಲ್ಲಿಗೂ ಹೋಗಲ್ಲವೆಂದರು.
ಜಿಪಂ ಮಾಜಿ ಸದಸ್ಯರಾದ ಕೆ ಸಿ ಮಂಜುನಾಥ್ ಶಾಂತಕುಮಾರ್, ಜಿಲ್ಲಾ ಎಸ್ ಸಿ ಘಟಕದ ಮಾಜಿ ಅಧ್ಯಕ್ಷ ಚಿನ್ನಪ್ಪ ನಾರಾಯಣಪುರ ಬಚ್ಚೇಗೌಡ ಮತ್ತಿತರರಿದ್ದರು. ಈ ವೇಳೆ ಸದಾಶಿವರೆಡ್ಡಿ ಅವರೊಂದಿಗೆ ಲಕ್ಷ್ಮಣ, ಸೀನಪ್ಪ, ಬಸವರಾಜು ಮತ್ತಿತರರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.