Bidadi Project: ಇತ್ತೀಚೆಗೆ ಅಂಡಮಾನ್‌ಗೆ ಹೋಗಿ ವೀಡಿಯೋ ಮಾಡಿದ್ದ ರಾಹುಲ್‌ಗಾಂಧಿ ಇಲ್ಲಿನ ಪರಿಸರ ಚೆನ್ನಾಗಿದೆ, ಹಸಿರು ಉಳಿಸಿ. ಗ್ರೀನ್ ಅವರ್ ಗ್ರೀಡ್ ಎಂದೆಲ್ಲಾ ಹೇಳಿದ್ದರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ (ಜೂ.15): ಇತ್ತೀಚೆಗೆ ಅಂಡಮಾನ್‌ಗೆ ಹೋಗಿ ವೀಡಿಯೋ ಮಾಡಿದ್ದ ರಾಹುಲ್‌ಗಾಂಧಿ ಇಲ್ಲಿನ ಪರಿಸರ ಚೆನ್ನಾಗಿದೆ, ಹಸಿರು ಉಳಿಸಿ. ಗ್ರೀನ್ ಅವರ್ ಗ್ರೀಡ್ ಎಂದೆಲ್ಲಾ ಹೇಳಿದ್ದರು. ಹಾಗಾಗಿ ನಾನು ಕನ್ನಡಿಗರ ಪರವಾಗಿ ಬಿಡದಿ ಪರಿಸರ ಉಳಿಸುವಂತೆ ರಾಹುಲ್ ಗಾಂಧಿಗೆ ಪತ್ರ ಬರೆಯುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರ, ನಿಮ್ಮದೇ ಸಿಎಂ ಇದ್ದಾರೆ. ದಯಮಾಡಿ ಕರ್ನಾಟಕದ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಅಂಡಮಾನ್‌ನಲ್ಲಿ ಪರಿಸರ ಸಂರಕ್ಷಣೆ ಮಾಡುವವರು ಕರ್ನಾಟಕದ ಪರಿಸರ ಯಾಕೆ ಹಾಳು ಮಾಡ್ತಿದ್ದೀರಿ?. ನಿಮ್ಮ ಸಿಎಂ ಕನಕಪುರದಲ್ಲಿ ರೈತರಿಗೆ ಭೂಮಿ ಕೊಡಬೇಡಿ ಅಂತಾರೆ. ಬಿಡದಿಯಲ್ಲಿ ರೈತರ ಭೂಮಿ ಕಿತ್ತುಕೊಳ್ಳುತ್ತಿದ್ದಾರೆ, ಯಾಕೆ ಈ ಮಲತಾಯಿ ಧೋರಣೆ.? ಈ ಎಲ್ಲಾ ವಿಚಾರಗಳನ್ನೂ ಪತ್ರ ಬರೆದು ರಾಹುಲ್ ಗಾಂಧಿಗೆ ಮನವರಿಕೆ ಮಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಇದು ದಪ್ಪ ಚರ್ಮದ ಸರ್ಕಾರ. ಆದರೆ, ಅವರ ಉದ್ಧಟತನ ಮಣಿಸೋದಕ್ಕೆ ನಾವು ತಯಾರಾಗಿದ್ದೇವೆ. ರೈತರನ್ನ ಹೆದರಿಸಲು ಒಂದಷ್ಟು ಜನ ಏಜೆಂಟರನ್ನು ತಯಾರು ಮಾಡಿದ್ದಾರೆ. ಜನರನ್ನ ಭಯಪಡಿಸಲು ವ್ಯವಸ್ಥಿತ ಸಂಚು ಮಾಡಲಾಗುತ್ತಿದೆ. ಅದಕ್ಕಾಗಿ ದೊಡ್ಡ ಗ್ಯಾಂಗ್ ನಿರ್ಮಾಣ ಮಾಡಿಕೊಂಡಿದ್ದಾರೆ. ರೈತರು ಯಾವುದೇ ಕಾರಣಕ್ಕೂ ಭಯಪಡಬೇಡಿ. ಕಾನೂನಿನ ಅಡಿಯಲ್ಲಿ ಎಲ್ಲಾ ರೀತಿಯ ಹೋರಾಟ ಮಾಡಿ ಯೋಜನೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತೇವೆ ಎಂದು ಧೈರ್ಯ ಹೇಳಿದರು.

ಸಂಪೂರ್ಣ ಬೆಂಬಲ

ಯೋಜನೆ ಬಗ್ಗೆ ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ‌. ಜೂ. 21ರಂದು ಯೋಜನೆ ವ್ಯಾಪ್ತಿಯ ಹಳ್ಳಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. 26 ಗ್ರಾಮಗಳಲ್ಲಿ ಪಾದಯಾತ್ರೆ ಮಾಡಲು ನಿರ್ಧರಿಸಿ ದ್ದೇವೆ. ಬಳಿಕ ವಿಧಾನಸೌಧ ಮುತ್ತಿಗೆ ಹಾಕಲು ಸಹ ಸಿದ್ಧರಿದ್ದೇವೆ ಎಂದರು.