ಶಿರಾ (ಸೆ.28): ಶಿರಾ ಕ್ಷೇತ್ರ ಜೆಡಿಎಸ್‌ ಭದ್ರಕೋಟೆ ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಹೋರಾಡಿ ಗೆಲ್ಲುತ್ತೇವೆ ಜೆಡಿಎಸ್‌ ರಾಜ್ಯ ರೈತ ದಳದ ಅಧ್ಯಕ್ಷರಾದ ಚೈತ್ರಾ ಗೌಡ ತಿಳಿಸಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯ ಮಾತನಾಡಿದ ಅವರು ವಿಧಾನಸಭೆ ಉಪಚನಾವಣೆ ಘೋಷಣೆಯಾದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಜೆಡಿಎಸ್‌ ವರಿಷ್ಠರು ಯಾರಿಗೆ ಟಿಕೇಟ್‌ ನೀಡಿದರೂ ಒಗ್ಗಟ್ಟಿನಿಂದ ಹೋರಾಡುವುದಾಗಿ ತಿಳಿಸಿದರು.

ಶಿರಾ ಉಪಚುನಾವಣೆ ಮೇಲೆ ತ್ರಿಪಕ್ಷಗಳ ಕಣ್ಣು! ನಡೆದಿದೆ ರಣತಂತ್ರ

ಕೊರೊನಾ ಮಾಫಿಯಾ:

ಕೋವಿಡ್‌-19 ವೈರಸ್‌ನ ಹಾವಳಿಯಿಂದ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಕೊರೊನಾ ಹೆಸರಲ್ಲಿ ಆಸ್ಪತ್ರೆಯಲ್ಲಿ 5 ರಿಂದ 10 ಲಕ್ಷದವರೆಗೆ ಬಿಲ್‌ ಮಾಡಿ ಜನರನ್ನು ಹಿಂಸಿಸುತ್ತಿವೆ. ಕೊರೊನಾಗೆ ಔಷ​ಯೇ ಇಲ್ಲ ಅಂದಾಗ ಯಾವ ರೀತಿಯಲ್ಲಿ ಇವರು ಇಷ್ಟುಬಿಲ್‌ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಇದನ್ನು ಮಾಫಿಯಾ ಮಾಡಿಕೊಂಡಿದೆ ಎಂದು ಟೀಕಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಉಗ್ರೇಶ್‌ ಮಾತನಾಡಿ ಶಿರಾ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ತಾಲ್ಲೂಕಿನಿಂದ ಸುಮಾರು 500 ಮುಖಂಡರು ಬೆಂಗಳೂರಿಗೆ ಕರೆಸಿಕೊಂಡು ಚರ್ಚಿಸಿದ್ದಾರೆ. ಪಕ್ಷದಲ್ಲಿ ಯಾರಾರ‍ಯರು ಟಿಕೇಟ್‌ ಆಕಾಂಕ್ಷಿಗಳಿದ್ದೀರ ಅವರು ತಾಲ್ಲೂಕಿನಾದ್ಯಂತ ಪಕ್ಷ ಸಂಘಟನೆ ಮಾಡಿ ಎಂದು ತಿಳಿಸಿದ್ದಾರೆ. ಪಕ್ಷ ಯಾರಿಗೆ ಟಿಕೇಟ್‌ ನೀಡಿದರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಗಿಡಗನಹಳ್ಳಿ ಶಿವಣ್ಣ, ಪ್ರಕಾಶ್‌ ಗೌಡ, ಕೊಲ್ಲಾರಪ್ಪ, ಶ್ರೀರಂಗ, ಕೋಟೆ ಮಹದೇವ್‌, ಹರೀಶ್‌ ಸೇರಿದಂತೆ ಹಲವರು ಹಾಜರಿದ್ದರು.