ಸಕಲೇಶಪುರ (ಫೆ.17):  ಕಾಡಾನೆಗಳ ಸಮಸ್ಯೆ ಬಗ್ಗೆ ಸಕಲೇಶಪುರದ ಟೌನ್‌ಹಾಲ್‌ನಲ್ಲಿ  ನಡೆದ ಸಮಾಲೋಚನೆ ಸಭೆಯಲ್ಲಿ ಮಾಜಿ ಶಾಸಕ ವಿಶ್ವನಾಥ್‌ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ಮಧ್ಯೆ ಆನೆ ಮತ್ತು ಮದುವೆ ತಮಾಷೆ ನಡೆಯಿತು.

ಹೊಳೆನರಸೀಪುರಕ್ಕೆ ಹತ್ತು ಆನೆಗಳನ್ನು ಬಿಟ್ಟರೆ ಆಗ ಕಾಡಾನೆಗಳ ಸಮಸ್ಯೆಗೆ ಬೇಗ ಪರಿಹಾರ ಸಿಗುತ್ತೆ ಎಂದು ಮಾಜಿ ಶಾಸಕ ವಿಶ್ವನಾಥ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಕಾಲೆಳೆದರು. ಆಗ ಪ್ರಜ್ವಲ್‌ ಪ್ರತಿಕ್ರಿಯಿಸಿ, ಆ ಹತ್ತು ಆನೆಗಳನ್ನೂ ಹುಲ್ಲೋ, ಮೇವೋ ಹಾಕಿ ನಾನೇ ಸಾಕುತ್ತಿದ್ದೆ. ಆದರೆ, ನನ್ನ ತಂದೆ ಮೊದಲು ಮದುವೆ ಆಗು ಅಂತ ಹೇಳಿದ್ದಾರೆ. ಇಲ್ಲವಾದರೆ ಆನೆಗಳನ್ನು ನಾನೇ ಸಾಕ್ತಿದ್ದೆ ಎಂದು ಚಟಾಕಿ ಹಾರಿಸಿದರು.

ಮೂರ್ಖರು ಅರ್ಥ ಮಾಡಿಕೊಳ್ಳಲಿ: ಪ್ರಜ್ವಲ್‌

ಸಂಸದ ಪ್ರಜ್ವಲ್‌ ರೇವಣ್ಣ ಸಂಸತ್‌ನಲ್ಲಿ ಮಾತನಾಡದಿರುವುದಕ್ಕೆ ಹಾಸನ ಜಿಲ್ಲೆಗೆ ಕೇಂದ್ರ ಬಜೆಟ್‌ನಲ್ಲಿ ಏನು ಸಿಕ್ಕಿಲ್ಲ ಎಂದು ಮೂರ್ಖರು ಹೇಳಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೆಸರನ್ನು ಹೇಳದೆ ಮೂರ್ಖ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಜರಿದರು.

ದರ್ಪಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ್ರೆ ರಾಜಕಾರಣ ಮಾಡಬಹದು : ಪ್ರಜ್ವಲ್ ...

ಸಕಲೇಶಪುರ ಟೌನ್‌ಹಾಲ್‌ನಲ್ಲಿ ನಡೆದ ಕಾಡಾನೆಗಳ ಸಮಸ್ಯೆ ಬಗ್ಗೆ ಸಮಾಲೋಚನೆ ಸಭೆಯಲ್ಲಿ ಕಾಡಾನೆ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರುವ ವೇಳೆ ಹರಿಹಾಯ್ದ ಅವರು, ಸಂಸದನಾಗಿ ನಾವು ಧ್ವನಿ ಎತ್ತಬಹುದು. ಸಮಸ್ಯೆ ಬಗ್ಗೆ ಬಿಂಬಿಸಬಹುದು. ಆದರೆ ರಾಜ್ಯ ಸರ್ಕಾರ ಮನವಿ ಮಾಡದೇ ಕೆಲಸ ಆಗಲ್ಲ. ಇದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಟೀಕಿಸಿದರು.