'ಕಾಂಗ್ರೆಸ್‌, ಬಿಜೆಪಿಯಿಂದ ರೈತರ ಬೆನ್ನು ಮುರಿಯುವ ಕೆಲಸ'

*  ದಿನದಿನಕ್ಕೂ ದಿನಬಳಕೆ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಲೇ ಇವೆ
*  ರೈತ ಬೆಳೆದ ಬೆಳೆಗಳು ಮಾತ್ರ ಅಷ್ಟೇ ದರಕ್ಕೆ ಮಾರಾಟ
*  ಪಂಚಸೂತ್ರಗಳ ಮೂಲಕ ರಾಜ್ಯ ಅಭಿವೃದ್ಧಿಪಡಿಸುವ ದೂರದೃಷ್ಟಿ ಹೊಂದಿರುವ ಹೆಚ್‌ಡಿಕೆ
 

JDS Leader N Somappa Slams on BJP Congress grg

ಸಂಡೂರು(ಅ.06): ಬಿಜೆಪಿ(BJP) ಹಾಗೂ ಕಾಂಗ್ರೆಸ್‌(Congress) ಪಕ್ಷಗಳು ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರ ಬೆನ್ನು ಮುರಿಯುವ ಕೆಲಸ ಮಾಡಿವೆ ಎಂದು ಜೆಡಿಎಸ್‌(JDS) ತಾಲೂಕು ಅಧ್ಯಕ್ಷ ಎನ್‌. ಸೋಮಪ್ಪ ಆರೋಪಿಸಿದ್ದಾರೆ. 

ತಾಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ಪಕ್ಷದ ಸಂಘಟನಾ ಸಭೆಯಲ್ಲಿ ಮಾತನಾಡಿ, ದಿನದಿನಕ್ಕೂ ರಸಗೊಬ್ಬರ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಲೇ ಇವೆ. ಆದರೆ ರೈತ ಬೆಳೆದ ಬೆಳೆಗಳು ಮಾತ್ರ ಅಷ್ಟೇ ದರಕ್ಕೆ ಮಾರಾಟವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ಕುಮಾರಸ್ವಾಮಿ(HD Kumaraswamy) ಮುಖ್ಯಮಂತ್ರಿಯಾಗಿದ್ದಾಗಿನ ಅವಧಿಯು ಅನೇಕ ಯೋಜನೆಗಳ ಅನುಷ್ಠಾನಕ್ಕೆ ಸಾಕ್ಷಿಯಾಯಿತು. ರೈತರ ಸಾಲಮನ್ನಾ, ಲಾಟರಿ ನಿಷೇಧ, ವಿವಿಧ ಭದ್ರತಾ ವೇತನಗಳ ಹೆಚ್ಚಳ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಗ್ರಾಮ ವಾಸ್ತವ್ಯದಂತಹ ಯಶಸ್ವಿ ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದಾರೆ. ಮುಂದಿನ ಬಾರಿಯೂ ಆರೋಗ್ಯ, ಶಿಕ್ಷಣ, ಕೃಷಿ, ಮಹಿಳಾ ಸಬಲೀಕರಣ ಹಾಗೂ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೇರಿದಂತೆ ಪಂಚಸೂತ್ರಗಳ ಮೂಲಕ ರಾಜ್ಯವನ್ನು ಅಭಿವೃದ್ಧಿಪಡಿಸುವ ದೂರದೃಷ್ಟಿ ಹೊಂದಿದ್ದಾರೆ ಎಂದರು.

ಉಪಚುನಾವಣಾ ಕದನ: ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲೋದು, ಸಿಎಂ ಬೊಮ್ಮಾಯಿ

ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ದೊಡ್ಡಮನೆ ಹುಸೇನ್‌ ಪೀರಾ, ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಸೇನೆ ಸಂಸ್ಥಾಪಕ ಅಧ್ಯಕ್ಷ ಕೆ.ಆರ್‌. ಕುಮಾರ ಸ್ವಾಮಿ, ರಹಮತ್‌, ರೈತ ಬಡಗುಳಿ ಹುಚ್ಚಪ್ಪ ಇತರರು ಮಾತನಾಡಿದರು. ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಖಾಜಾ ಹುಸೇನ್‌ ಹಾಗೂ ತಂಡದವರು ಎನ್‌. ಸೋಮಪ್ಪ ಅವರನ್ನು ಸನ್ಮಾನಿಸಿದರು.

ರೈತ ಸಂಘದ ಧರ್ಮನಾಯಕ್‌, ಜಿಲ್ಲಾ ಯುವ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಲಾಲ್‌ ಸ್ವಾಮಿ, ತಿಮ್ಮಪ್ಪ, ಶಬ್ಬೀರ್‌ ಸಾಬ್‌, ಶಫೀವುಲ್ಲಾ, ಫಯಾಜ್‌, ಪ್ರವೀಣ್‌, ರಾಮಾಂಜಿನಿ, ಸುಭಾನ್‌ ಸೇರಿದಂತೆ ಇತರರು ಭಾಗವಹಿಸಿದ್ದರು.
 

Latest Videos
Follow Us:
Download App:
  • android
  • ios