Asianet Suvarna News Asianet Suvarna News

ಜೆಡಿಎಸ್ ಮುಖಂಡ ಎಚ್.ಡಿ ರೇವಣ್ಣರಿಂದ ಗಂಭೀರ ಆರೋಪ

ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ವಿರುದ್ಧ ರೇವಣ್ಣ ಆರೋಪಿಸಿದ್ದು, ಹಾಸನ ಅಭಿವೃದ್ಧಿಗೆ ತಡೆ ನಿಡಲಾಗಿದೆ ಎಂದಿದ್ದಾರೆ.

JDS Leader HD Revanna Allegations Against Karnataka Govt
Author
Bengaluru, First Published Jan 9, 2020, 8:39 AM IST
  • Facebook
  • Twitter
  • Whatsapp

ಹಾಸನ [ಜ.09]:  ಹೇಮಾವತಿ ಯೋಜನೆ, ಕಾವೇರಿ ಕಣಿವೆ ಸೇರಿದಂತೆ ಹಾಸನ ಜಿಲ್ಲೆಗೆ ಸಂಬಂಧಿಸಿದ ಅನೇಕ ನೀರಾವರಿ ಯೋಜನೆಗಳ ಸುಮಾರು  5 ಸಾವಿರ ಕೋಟಿ ರು.  ಕಾಮಗಾರಿಗಳನ್ನು ಸರ್ಕಾರ ತಡೆ ತಡೆಹಿಡಿದಿದೆ. 

ಈ ಮೂಲಕ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಈ ಹಿಂದೆ ಅನುಮೋದನೆ ದೊರೆತಿದ್ದ ಅನೇಕ ಯೋಜನೆಗಳಿಗೆ ತಡೆ ಹಿಡಿದಿದೆ ಎಂದು ತಿಳಿಸಿದರು.

'ಶೋಭಾ ಹೇಳಿದ್ರು ಅಂಥ ಕೊಟ್ಟಿದ್ದೆಲ್ಲ ವಾಪಸ್ ತಗೋತಿರಾ BSY'...

ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಬಿಡುಗಡೆ ಮಾಡಲಾಗಿದ್ದ ಅನುದಾನಗಳನ್ನೂ ತಡೆ ಹಿಡಿಯಲಾಗಿದೆ. ಸುವರ್ಣ ಕರ್ನಾಟಕ ಮಾಡುತ್ತೇವೆ ಎಂದು ಹೊರಟ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಅವರೇ ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios