ಚುನಾವಣೆಯಲ್ಲಿ ಸೋಲು ಗೆಲುವು ಎನ್ನುವುದು ಎಲ್ಲರ ಜೀವನದಲ್ಲಿದೆ ಅಯ್ಯೋ ಅವರು ಸೋಲದೇ ಇಲ್ಲ, ಗೆಲ್ತಾನೆ ಇರ್ತಾರೆ ಅಲ್ವಾ ಸುಮಲತಾ ಕುರಿತು ಎಚ್ ಡಿ ಕುಮಾರಸ್ವಾಮಿ ಲೇವಡಿ

ಮಂಡ್ಯ (ಜು.09): ಚುನಾವಣೆಯಲ್ಲಿ ಸೋಲು ಗೆಲುವು ಎನ್ನುವುದು ಎಲ್ಲರ ಜೀವನದಲ್ಲಿದೆ. ಅಯ್ಯೋ ಅಯ್ಯೋ ಅವರು ಸೋಲದೇ ಇಲ್ಲ, ಗೆಲ್ತಾನೆ ಇರ್ತಾರೆ ಅಲ್ವಾ.. ನೋಡೋಣ ಎಂದು ಸುಮಲತಾ ಕುರಿತು ಎಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದರು. 

ಮಂಡ್ಯದ ಭಾರತೀನಗರದಲ್ಲಿ ಗುರುವಾರ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮನ್‌ಮುಲ್‌ ಹಾಗೂ ಮೈಷುಗರ್ ವಿಷಯದಲ್ಲಿ ಮಂಡ್ಯ ಜನರಿಗೆ ಮೋಸ ಆಗಲು ಬಿಡುವುದಿಲ್ಲ. ಕೆಲವರು ಬೇರೆ ಬೇರೆ ಕಥೆ ಕಟ್ಟಿ ನಮ್ಮ ವರ್ಚಸ್ಸು ಹಾಳು ಮಾಡಲು ಹೊರಟಿದ್ದಾರೆ ಎಂದರು. 

ಮತ್ತೆ ಅಂಬರೀಶ್ ಹೆಸರು ಹೇಳಿ ಸುಮಲತಾ ವಿರುದ್ಧ ಎಚ್‌ಡಿಕೆ ಗುಟುರು ..

ಮನ್‌ಮುಲ್‌ನಲ್ಲಿ ಎಷ್ಟು ವರ್ಷದಿಂದ ಹಾಲಿಗೆ ನೀರು ಬೆರೆಸುವ ಅವ್ಯವಹಾರ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೊಸ ಆಡಳಿತ ಮಂಡಳಿ ಅವ್ಯವಹಾರ ಬಯಲು ಮಾಡಿದೆ. ಬಯಲು ಮಾಡಿದ ಆಡಳಿತ ಮಂಡಳಿಯೇ ಸೂಪರ್ ಸೀಡ್ ಆಗಬೇಕೆನ್ನುವುದು ಕೆಲವರ ಆಸೆ. ಹಳೆ ಅವ್ಯವಹಾರ ಮುಚ್ಚಿಹಾಕಲು ಕೆಲವರು ಸೂಪರ್ ಸೀಡ್ ಮಾಡಿ ಎನ್ನುತ್ತಿದ್ದಾರೆ. ನಾವು ತನಿಖೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ ಎಂದು ಸಮರ್ಥನೆ ನೀಡಿದರು. 

ನಾನು ಸುಮ್ಮನೆ ಕೂರಲ್ಲ, ಏನು ಮಾಡ್ತೀನೋ ನೋಡುತ್ತಿರಿ: ಸುಮಲತಾ ಚಾಲೆಂಜ್! .

ರೈತರ ಪರವಾಗಿ ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಡಿ ಎಂದು ಸಿಎಂ ಬಳಿ ಹೋಗಿ ಚರ್ಚಿಸಿದ್ದೇನೆ. ಆದರೆ ಮನ್‌ಮುಲ್ ತನಿಖೆ ಮಾಡಬೇಡಿ ಎನ್ನಲು ಸಿಎಂ ಭೇಟಿ ಮಾಡಿದ್ದೆ ಎನ್ನುತ್ತಾರೆ ಎಂದರು.