ಜಿಮ್‌ ಮಾಡಿ ಹೊರಬಂದ ಬಳಿಕ ಹೃದಯಾಘಾತವಾಗಿ ಜೆಡಿಎಸ್ ಯುವ ಮುಖಂಡ ಸಾವು

ಹೃದಯಾಘಾತದಿಂದ  ಜೆಡಿಎಸ್ ಯುವ ಮುಖಂಡ ಮೃತ ಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.  ಜಿಮ್ ಮಾಡಿ ಹೊರ ಬಂದ ಐದು ನಿಮಿಷದ ಬಳಿಕ ವಾಂತಿ ಆಗಿತ್ತು. ಬಳಿಕ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

JDS leader dies of a heart attack in Tumakuru gow

ತುಮಕೂರು (ಜ.28): ಹೃದಯಾಘಾತದಿಂದ 32 ವರ್ಷದ ಜೆಡಿಎಸ್ ಯುವ ಮುಖಂಡ ಮೃತ ಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕುಣಿಗಲ್ ತಾಲ್ಲೂಕಿನ ನೀಲತ್ತಹಳ್ಳಿ ಗೇಟ್ ನಿವಾಸಿ ಎಂ.ಜಿ ಶ್ರೀನಿವಾಸ್(32) ಮೃತ ದುರ್ದೈವಿ. ಜಿಮ್ ಮಾಡಿ ಹೊರ ಬಂದ ಐದು ನಿಮಿಷದ ಬಳಿಕ ವಾಂತಿ ಆಗಿತ್ತು. ಬಳಿಕ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ಕುಣಿಗಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಜೆಡಿಎಸ್‌ ಅಭ್ಯರ್ಥಿಗೆ ಮಕ್ಕಳ ಮೂಲಕ ಜನರಿಂದ ಹಣ
ವಿಧಾನಸಭಾ ಚುನಾವಣೆ ಸಮೀಪ ಇರುವ ಬೆನ್ನಲ್ಲೇ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಡಿಎಸ್‌ ಅಭ್ಯರ್ಥಿ ಮನೆಗೆ ಮಕ್ಕಳ ಕೈಯಲ್ಲಿ ಜನರೇ ಹಣ ಕಳುಹಿಸುತ್ತಿರುವ ಘಟನೆ ನಡೆದಿದೆ. 

ಕಳೆದ ಒಂದು ವಾರದಿಂದ ಸುಮಾರು 1 ಲಕ್ಷ 13 ಸಾವಿರ ರು. ಗಳನ್ನು ಮಕ್ಕಳ ಕೈಯಲ್ಲಿ ಜನರೇ ಕಳುಹಿಸಿದ್ದಾರೆ. ಈವರೆಗೆ 6 ಬಾರಿ ಸ್ಪರ್ಧಿಸಿ 3 ಬಾರಿ ಗೆದ್ದು 3 ಬಾರಿ ಸೋತಿರುವ ಸುರೇಶಬಾಬು ಅವರಿಗೆ ಹಣಕಾಸಿನ ತೊಂದರೆ ಇದೆ ಎಂಬ ಯಾರದೋ ಮಾತು ಕೇಳಿ ಅವರಿಗೆ ಸಹಾಯ ಮಾಡಲು ಈಗ ಜನರೇ ಮುಂದಾಗಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಟಿಕೆಟ್‍ಗಾಗಿ ವಾರ್: ಶೃಂಗೇರಿ ಶಾರದಾಂಬೆ ಮೊರೆ ಹೋದ್ರಾ ರೇವಣ್ಣ ದಂಪತಿ

ಮೊದಲ ಬಾರಿ 50 ಸಾವಿರ ರು.ಗಳನ್ನು ಇವರ ಮನೆಯಲ್ಲಿ ಮಕ್ಕಳು ಇಟ್ಟು ಹೋಗಿದ್ದರಂತೆ, ಬಳಿಕ ಎರಡು ದಿವಸ ಬಿಟ್ಟು ಮತ್ತೆ 50 ಸಾವಿರ ರು. ಕೊಟ್ಟು ಹೋಗಿದ್ದಾರೆ. ಎರಡು ದಿವಸದ ಹಿಂದೆ 13 ಸಾವಿರ ರು.ಗಳನ್ನು ಕಳುಹಿಸಿದ್ದಾರೆ. ಶುಕ್ರವಾರ ಕೂಡ ಹಣ ನೀಡಿ ಹೋಗಿದ್ದಾರೆ. ಈ ಸಂಬಂಧ ಮಾತನಾಡಿರುವ ಜೆಡಿಎಸ್‌ ಅಭ್ಯರ್ಥಿ ಸುರೇಶಬಾಬು ನನಗೆ ಗೊತ್ತಾಗದ ಹಾಗೆ ಹಣವನ್ನು ಕೊಟ್ಟು ಕಳುಹಿಸುತ್ತಿದ್ದಾರೆ.

ಜೆಡಿಎಸ್‌ಗೆ ಈಗ ವೀರಶೈವರ ಮೇಲೆ ಎಲ್ಲಿಲ್ಲದ ಪ್ರೀತಿ: ಸುರೇಶ್‌ ವ್ಯಂಗ್ಯ

ಎಲೆಯಡಿಗೆ ಜೊತೆಯಲ್ಲಿ 500 ರು. 200, 100ರು, 10, 20 ರು. ಹೀಗೆ ಕೂಲಿ ಕೆಲಸದಲ್ಲಿ ಉಳಿಸಿದ್ದ ಹಣವನ್ನೆಲ್ಲಾ ನನಗೆ ಕಳುಹಿಸುತ್ತಿದ್ದಾರೆ ಎಂದು ಭಾವುಕರಾದರು. ಒಂದು ಬಾರಿ ನಮ್ಮ ಮನೆಯವರ ಕೈಯಲ್ಲೇ ಕೊಟ್ಟು ಹೋಗಿದ್ದಾರೆ. ಚುನಾವಣೆಗೆ ನನ್ನ ಬಳಿ ಹಣವಿಲ್ಲವೆಂದು ಜನರೇ ಹೀಗೆ ಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios