ಕಾರವಾರ [ಡಿ.13]:  ರಾಜ್ಯದಲ್ಲಿ ಕಾಂಗ್ರೆಸ್ ಸೋಲಲು ರಾಹುಲ್ ಗಾಂಧಿ ಕಾರಣ ಎಂದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಹೇಳಿದ್ದಾರೆ. 

ಕಾರವಾರದಲ್ಲಿಂದು ಮಾತನಾಡಿದ ಮಾಜಿ ಸಚಿವ ಜೆಡಿಎಸ್ ಮುಖಂಡ ಆನಂದ್ ಆಸ್ನೋಟಿಕರ್, ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನ ಪಡೆಯಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಾರಣ ಅಲ್ಲ. ರಾಹುಲ್ ಗಾಂಧಿ ಮೇಲಿರುವ ಯುವಕರ ಮನಸ್ಥಿತಿಯು ಈ ಸೋಲಿಗೆ ಕಾರಣ ಎಂದು ಹೇಳಿದರು. 

ಇನ್ನು ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ಜೆಡಿಎಸ್ ಸೋಲಿಗೆ ಕಾರಣವಾಯ್ತು. ಇನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷಗಳ ನಡುವಿನ ಮೈತ್ರಿಯು ದೊಡ್ಡ ಏಟು ನೀಡಿತು ಎಂದು ಆಸ್ನೋಟಿಕರ್ ಹೇಳಿದರು. 

ನಡೆಯಲ್ಲ ಲಾಲಿಪಾಪ್ ತಂತ್ರ! ಮಂತ್ರಿ ಹುದ್ದೆ ನವಗ್ರಹ ಪರೀಕ್ಷೆ ಪಾಸಾದವರಿಗೆ ಮಾತ್ರ...

ನಾನು ಸದ್ಯ ಬಿಜೆಪಿಯಲ್ಲಿ ಇದ್ದಿದ್ದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದೆ. ಈಗಿನ ಪರಿಸ್ಥಿತಿಯಲ್ಲಿ ಜನತಾದಳಕ್ಕೆ ಸಾಕಷ್ಟು ಶಕ್ತಿ ತುಂಬುವ ಅವಶ್ಯಕತೆ ಇದೆ. ಹಿರಿಯರು ಸ್ಪಂದಿಸಿದಲ್ಲಿ ಮಾತ್ರವೇ ತಾವು ಜೆಡಿಎಸ್ ನಲ್ಲಿ ಮುಂದುವರಿಯುತ್ತೇನೆ  ಇಲ್ಲವಾದಲ್ಲಿ ಮೂರು ನಾಲ್ಕು ತಿಂಗಳಲ್ಲಿ ಪಕ್ಷ ಬಿಡುವ ಬಗ್ಗೆ ಯೋಚಿಸುತ್ತೇನೆ ಎಂದು ಕಾರವಾರದಲ್ಲಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಹೇಳಿದರು. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಆನಂದ್ ಆಸ್ನೋಟಿಕರ್ ಬಿಜೆಪಿ ಅಭ್ಯರ್ಥಿಯಾಗಿ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪರಾಭವಗೊಂಡಿದ್ದರು. 

ಇದೀಗ ರಾಜ್ಯದಲ್ಲಿ ಉಪ ಚುನಾವಣೆ ನಡೆದ ಜೆಡಿಎಸ್ ಹೀನಾಯವಾಗಿ ಸೋಲು ಕಂಡ ಬೆನ್ನಲ್ಲೇ ಪಕ್ಷ ಬಿಡುವ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಡಿಸೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ