ಧಾರವಾಡ(ಡಿ.09): ಮತದಾರರು ಅನರ್ಹರನ್ನು ಅರ್ಹರನ್ನಾಗಿ ಮಾಡಿದ್ದಾರೆ. ಮತದಾರರ ತೀರ್ಪಿಗೆ ನಾವು ಬದ್ಧರಾಗಿದ್ದೆವೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮತದಾರರು ತಿರಸ್ಕಾರ ಮಾಡಿದ್ದಾರೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ರೆ ಇಂತಹ ಪರಸ್ಥಿತಿ ಬರುತ್ತಿರಲಿಲ್ಲ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ. 

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬಂದ್ರೆ ಮತ್ತೆ ತೊಂದರೆ ಆಗುತ್ತೆ ಎಂದು ಮತದಾರರು ಬಿಜೆಪಿಗೆ ಬಹುಮತ ನೀಡರಬಹುದು. ರಾಜಕೀಯದಲ್ಲಿ ಇಂದು ಮೌಲ್ಯ ಇಲ್ಲ, ಕಾಲವೇ ಬದಲಾವಣೆ ಮಾಡಬೇಕು ಎಂದು ತಿಳಿಸಿದ್ದಾರೆ. 

LIVE: ಬಿಜೆಪಿ ನಾಗಲೋಟ, ಕುಂಟಿದ ಕಾಂಗ್ರೆಸ್, ಮುಗ್ಗರಿಸಿದ ಜೆಡಿಎಸ್

ಸೋಲಿನ ಬಗ್ಗೆ ವಿಮರ್ಶೆ ಮಾಡಿದ್ರೆ ಒಬ್ಬರ ಮೇಲೆ ಒಬ್ಬರು ಬೈಯುವುದಾಗುತ್ತೆ. ಅಧಿಕಾರ ಇಲ್ಲವಾದ್ರು ಜನರ ಕೆಲಸ‌ ಮಾಡುವತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಬೇಕು. ಬಿಜೆಪಿಗೆ ಬಹುಮತ ಸಿಗದಿದ್ರೆ ಜೆಡಿಎಸ್ ಇಬ್ಭಾಗವಾಗುತ್ತಿತ್ತು, ಆದ್ರೆ ಈಗ ಆ ಪ್ರಶ್ನೆ ಉದ್ಭವ ಈಗ ಆಗುವುದಿಲ್ಲ ಎಂದು ಹೇಳಿದ್ದಾರೆ.