Asianet Suvarna News Asianet Suvarna News

Mysuru : ಶಾಸಕರ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆ

ತಾಲೂಕಿನ ಅಭಿವೃದ್ಧಿ ಕೆಲಸವನ್ನು ನೋಡಿ ಜೆಡಿಎಸ್‌ ಸೇರುವವರಿಗೆ ಆದರದ ಸ್ವಾಗತವನ್ನು ನೀಡಲಾಗುತ್ತದೆ ಎಂದು ಶಾಸಕ ಕೆ. ಮಹದೇವ್‌ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 JDS Joining Programme in Mysuru   snr
Author
First Published Nov 18, 2022, 5:06 AM IST

  ರಾವಂದೂರು (ನ.18): ತಾಲೂಕಿನ ಅಭಿವೃದ್ಧಿ ಕೆಲಸವನ್ನು ನೋಡಿ ಜೆಡಿಎಸ್‌ ಸೇರುವವರಿಗೆ ಆದರದ ಸ್ವಾಗತವನ್ನು ನೀಡಲಾಗುತ್ತದೆ ಎಂದು ಶಾಸಕ ಕೆ. ಮಹದೇವ್‌ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಶಾಸಕನಾದ (MLA)  ಮೇಲೆ ನನ್ನ ಅವಧಿಯಲ್ಲಿ ನಡೆದ ಕೆಲಸ ಕಾರ್ಯಗಳನ್ನು ಮೆಚ್ಚಿ ಜಾತಿಭೇದ ಮರೆತು ಜೆಡಿಎಸ್‌ಗೆ (JDS)  ಸ್ವಯಂ ಪ್ರೇರಿತರಾಗಿ ಸೇರುತ್ತಿರುವುದು ಮುಂದಿನ ಚುನಾವಣೆಗೆ ದಾರಿ ದೀಪವಾಗುತ್ತಿದೆ ಹಾಗೂ ನಾನು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ತಂದು ಗ್ರಾಮೀಣ ಜನರಿಗೆ ಮೂಲಭೂತ ಸೌಕರ್ಯ ನೀಡುವ ಮೂಲಕ ಗ್ರಾಮಗಳ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ, ಈಗಾಗಲೇ ತಾಲೂಕಿನ 303 ಗ್ರಾಮಗಳಿಗೆ ಕಾವೇರಿ ನದಿ ನೀರಿನಿಂದ ಕುಡಿಯುವ ನೀರಿನ ಯೋಜನೆಗೆ ಹಣಕಾಸು ಮಂಜೂರಾತಿಯಾಗಿದ್ದು, ಅತೀ ಶೀಘ್ರದÜಲ್ಲಿಯೇ ಈ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ. ನನ್ನ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ ಎಂದು ಅವರು ತಿಳಿಸಿದರು.

ಜೆಡಿಎಸ್‌ ಕಾರ್ಯಾಧ್ಯಕ್ಷ ಆರ್‌.ಎಲ್‌. ಮಣಿ, ದಲಿತ ಸಂಘಟನೆಗಳ ಮುಖಂಡ ಕೃಷ್ಣಮೂರ್ತಿ ಮಾತನಾಡಿದರು.

ಇದೇ ವೇಳೆ ಹಲವಾರು ಗ್ರಾಮದ ಯುವಕರು ಜೆಡಿಎಸ್‌ ಸೇರ್ಪಡೆಯಾದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಜಿಪಂ ಮಾಜಿ ಸದಸ್ಯೆ ಎಸ್‌.ಎ. ಶಿವಣ್ಣ, ಟಿಎಪಿಸಿಎಂಎಸ್‌ ನಿರ್ದೇಶಕ ನಾಗೇಂದ್ರ, ಗ್ರಾಪಂ ಸದಸ್ಯರಾದ ದೀಪು, ರಾಜೇಂದ್ರ, ಡಿ.ಜೆ. ಕುಮಾರ, ನಾಗೇಂದ್ರ, ಗ್ರಾಪಂ ಅಧ್ಯಕ್ಷ ದೇವರಾಜು ಇದ್ದರು.

JDS ಬರೋದು ಸೂರ್ಯ ಚಂದ್ರರಷ್ಟೇ ಸತ್ಯ

ಸಿಂಧನೂರು  : ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ. ಪ್ರಾದೇಶಿಕ ಪಕ್ಷ ವಾದ ಜೆ ಡಿ ಎಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ರಾಜ್ಯದ ಜನತೆಗೆ ಕೊಡುಗೆ ನೀಡಿದ್ದಾರೆ. 2023ರ ಚುನಾವಣೆಯಲ್ಲಿ ಜೆ ಡಿ ಎಸ್‌ ಪಕ್ಷ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ. ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ ಎಂದು ಶಾಸಕ ವೆಂಕಟರಾವ್‌ ನಾಡಗೌಡ ಭವಿಷ್ಯ ನುಡಿದರು.

ತಾಲೂಕಿನ ರೈತ ನಗರ ಕ್ಯಾಂಪಿನಲ್ಲಿ ನಾಡ ಗೌಡರ ನಡೆ ಸಾಧನೆಯ ಕಡೆ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯ ಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ತಾವೆಂದು ರಾಜಕೀಯ ಮಾಡುವುದಿಲ್ಲ. ಯಾವುದೇ ಪಕ್ಷದ ಕಾರ್ಯ ಕರ್ತರಿರಲಿ ರಾತ್ರಿ 12 ಗಂಟೆಗೆ ಅನಾರೋಗ್ಯದ ಕುರಿತು ಪೋನಾಯಿಸಿದರು ಅವರಿಗೆ ಸಹಾಯ ಮಾಡಿದ್ದೇನೆ. ಇಲ್ಲಿ ಮಾನವಿಯತೆ ಮುಖ್ಯವಾಗುತ್ತದೆಯೆ ಹೊರತು ರಾಜಕಾರಣವಲ್ಲ. ಇಂತಹ ಕೆಲಸಗಳಿಮದ ಅನೇಕ ಬಾರಿ ನಮ್ಮ ಜೆಡಿಎಸ್‌ ಕಾರ್ಯಕರ್ತರ ಆಕ್ರೋಶಕ್ಕೂ ಗುರಿಯಾಗಿದ್ದೇನೆ. ತಮ್ಮ ಎರಡು ಶಾಸಕತ್ವದ ಅವಧಿಯಲ್ಲಿ ಯಾವ ಗ್ರಾಮದಲ್ಲಿಯು ಜಗಳ, ಕೇಸ್‌ಗಳು ರಾಜಕೀಯ ಕಾರಣಕ್ಕೆ ದಾಖಲಾಗಿಲ್ಲ. ಹಿಂದಿನ ಶಾಸಕರ ಅವಧಿಯಲ್ಲಿ ಆಗಿರುವ ಬಡಿದಾಟಗಳ ಪ್ರಕರಣಗಳಲ್ಲಿ ಇರುವವರು ಇನ್ನು ಕೋರ್ಚ್‌ ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ವಿವರಿಸಿದರು.

2023ರ ಚುನಾವಣೆಯಲ್ಲಿ ಮತ್ತೆ ಅರಳುತ್ತೆ ಕಮಲ: ಬಿ.ವೈ.ರಾಘವೇಂದ್ರ

ಈ ಸಂದರ್ಭದಲ್ಲಿ ಜೆ ಡಿ ಎಸ್‌ ಮುಖಂಡ ಚಂದ್ರ ಭೂಪಾಲ ನಾಡಗೌಡ, ವೆಂಕೋಬಣ್ಣ ಕಲ್ಲೂರು, ಸತ್ಯನಾರಾಯಣ, ವೀರಭದ್ರಪ್ಪ, ವೆಂಕೋಬ, ಖಾಸಿಂಸಾಬ, ಭಾಗ್ಯಮ್ಮ, ಹರಿ ಕಿಶೋರ ರೆಡ್ಡಿ, ತಿಮ್ಮನ ಗೌಡ, ಯಮನಪ್ಪ, ಕರಿಯಪ್ಪ, ಜಕ್ಕರಾಯ ಇದ್ದರು. ಸುಮಿತ್‌ ತಡಕಲ್‌ ಕಾರ್ಯಕ್ರಮ ನಿರೂಪಿಸಿದರು.

Follow Us:
Download App:
  • android
  • ios