ಶಿವಮೊಗ್ಗ : ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಶಿವಮೊಗ್ಗದಲ್ಲಿ ಲೋಕಲ್ ವಾರ್ ಶುರುವಾಗಿದೆ. ಜಿಲ್ಲೆಯ ಐದು ಸ್ಥಳೀಯ ಸಂಸ್ಥೆ ಇದೇ 29 ರಂದು ಚುನಾವಣೆ ನಡೆಯಲಿದ್ದು, ಮತ್ತೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮೊರೆ ಹೋಗಿವೆ. 

ಇತ್ತ ಬಿಜೆಪಿ ಕೂಡ ಮೈತ್ರಿಕೂಟಕ್ಕೆ ಸೆಡ್ಡು ಹೊಡೆಯಲು ಸಿದ್ಧವಾಗಿದ್ದು, ಸ್ಥಳೀಯ ಐದು ಸ್ಥಳೀಯ ಸಂಸ್ಥೆಗಳ 94 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. 

ಶಿಕಾರಿಪುರ ಪುರಸಭೆ - 23 ಸ್ಥಾನಗಳು, ಶಿರಾಳಕೊಪ್ಪ ಪಟ್ಟಣ ಪಂಚಾಯತ್ - 17 ಸ್ಥಾನಗಳು, ಸೊರಬ ಪಟ್ಟಣ ಪಂಚಾಯತ್ - 12 ಸ್ಥಾನಗಳು ಸಾಗರ ನಗರಸಭೆ - 31 ಸ್ಥಾನಗಳು, ಹೊಸನಗರ ಪಟ್ಟಣ ಪಂಚಾಯತ್ - 11 ಸ್ಥಾನಗಳು  ಸೇರಿದಂತೆ ಒಟ್ಟು 94 ಸ್ಥಾನಗಳ ಚುನಾವಣೆಗೆ ಸಿದ್ಧತೆ ನಡೆದಿದೆ. 

ಸಂಸತ್ತಿನಲ್ಲಿ ಮಾತಾಡಲು ಹಿಂದಿ ಕಲಿಯುತ್ತಿರುವೆ: ಮಧು ಬಂಗಾರಪ್ಪ

ಶಿರಾಳಕೊಪ್ಪ , ಶಿಕಾರಿಪುರದಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿದ್ದರೆ , ಹೊಸನಗರ , ಸೊರಬ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದ ಹಿಡಿತದಲ್ಲಿದೆ. ಸಾಗರದಲ್ಲಿ ಕಾಂಗ್ರೆಸ್  ಅಧಿಕಾರದಲ್ಲಿದೆ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭೆಯಲ್ಲಿ ಮಾಡಿಕೊಂಡಿದ್ದ ಮೈತ್ರಿಯನ್ನೇ ಮುಂದುವರೆಸಲು ನಿರ್ಧರಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ  ನಡೆಯುವ ಹೊಸನಗರ, ಸಾಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ , ಸೊರಬದಲ್ಲಿ ಕುಮಾರ ಬಂಗಾರಪ್ಪ, ಶಿಕಾರಿಪುರದಲ್ಲಿ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೇ ಶಾಸಕರಾಗಿರುವ ಹಿನ್ನಲೆಯಲ್ಲಿ 5 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಹೊಂದಿದ್ದಾರೆ. ಆದರೆ ಮೈತ್ರಿಕೂಟವು ಹೊಂದಾಣಿಕೆಯ ಮೂಲಕ ಅಧಿಕಾರಕ್ಕೆ ಏರುವ ಯತ್ನ ನಡೆಸಿದೆ.