ಸೊರಬ[ಮೇ.12]: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು ವ್ಯಕ್ತಪಡಿಸುವ ಭಾವನೆಗಳ ಮೇಲೆ ಹಾಗೂ ವೈಯಕ್ತಿಕವಾಗಿ ನನ್ನದೇ ಆದ ಸಮೀಕ್ಷೆಯ ಆಧಾರದ ಮೇಲೆ ಈ ಬಾರಿ ಗೆಲವು ನನ್ನದೇ ಎಂದು ವಿಶ್ವಾಸ  ಮಧು ಬಂಗಾರಪ್ಪ ವ್ಯಕ್ತಪಡಿಸಿದ್ದಾರೆ.

ಹೌದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಮಧು ಬಂಗಾರಪ್ಪ, ಸಂಸತ್ತಿನಲ್ಲಿ ಭಾಷಾ ಸಮಸ್ಯೆ ಎದುರಾಗದಂತೆ ಹಿಂದಿ ಭಾಷೆ ಕಲಿಯುತ್ತಿರುವುದಾಗಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಮತದಾರರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭ ದಲ್ಲಿ ಮಾತನಾಡಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ವಯೋವೃದ್ಧರಾದರೂ ಬಿಸಿಲಿನ ಝಳವನ್ನು ಲೆಕ್ಕಿಸದೇ ರೋಡ್‌ಶೋ ನಡೆಸಿದ್ದು ಕಣ್ಣಮುಂದಿದೆ. ಎಂದರು.