ಹುಣಸೂರು(ಆ.30): ಕುಡಿನೀರು ಮುದ್ದನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕಿರಣ್‌ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಕವಿತ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕಿನ ಕುಡಿನೀರುಮುದ್ದನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ 2018-2023ರ ಅವಧಿಗೆ ನಡೆದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ಒಟ್ಟು 12 ಮಂದಿಯ ಪೈಕಿ 11 ಜೆಡಿಎಸ್ ಬೆಂಬಲಿತರು ಗೆದ್ದರೆ, ಒರ್ವ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕರಾಗಿ ಜೆಡಿಎಸ್ ಬೆಂಬಲಿತರಾದ ಕಾರ್ತೀಕ್, ಚೆನ್ನಬಸಪ್ಪ, ಭಾಗ್ಯಮ್ಮ, ರಾಜು, ರಾಮಕೃಷ್ಣ, ರಾಮನಾಯ್ಕ, ರಾಮಕೃಷ್ಣೇಗೌಡ, ರಾಮನಾಯ್ಕ, ರೇವಣ್ಣ, ಶ್ರೀನಿವಾಸ ಚುನಾಯಿತರಾದರೆ ಕಾಂಗ್ರೆಸ್ ಬೆಂಬಲಿತ ಐಯ್ಯಪ್ಪ ಜಯಗಳಿಸಿದ್ದಾರೆ.

ಅಭಿನಂದನೆ :
ಜೆಡಿಎಸ್ ಬೆಂಬಲಿತರಾಗಿ ಭರ್ಜರಿ ಜಯಗಳಿಸಿದ ಅಧ್ಯಕ್ಷರು,ಉಪಾಧ್ಯ ಕ್ಷರಿಗೆ ಮತ್ತು ನಿರ್ದೇಶಕರಿಗೆ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹಾಗೂ ಜಿಪಂ ಸದಸ್ಯರಾದ ಎಂ.ಬಿ. ಸುರೇಂದ್ರ, ಅಮಿತ್ ದೇವರಹಟ್ಟಿ, ಜೆಡಿಎಸ್ ಮುಖಂಡರಾದ ಬಸವಲಿಂಗಯ್ಯ ಅಭಿನಂದಿಸಿದರು.

ಕೆಲ್ಲೂರು
ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗೆಲುವುದರ ಮುಖಾಂತರ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದರು.
ಜೆಡಿಎಸ್‌ನ 9 ಹಾಗೂ ಕಾಂಗ್ರೆಸ್‌ನ 3 ಬೆಂಬಲಿತ ಅಭ್ಯರ್ಥಿಗಳಾದ ಕೆ.ಎಂ.ನಟೇಶ್, ರಾಮಕೃಷ್ಣೇಗೌಡ, ರಮೇಶ್, ಬಸವರಾಜಪ್ಪ, ಕೆ.ವಿ. ಭಾಸ್ಕರ, ಮಾದೇಗೌಡ, ಸಣ್ಣಜವರೇಗೌಡ, ವೇದಾಂಬ, ಜೆ.ಆರ್. ಲೀಲಾವತಿ, ಕೆ.ಪಿ. ಜವರಯ್ಯ, ಕೆ.ಎನ್. ನಾಗರಾಜು ಹಾಗೂ ಕೆ.ಎಲ್. ರೇವಣ್ಣ ಆಯ್ಕೆಯಾದರು.

ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲ್ಲುವ ಮುಖಾಂತರ ಅಧಿಕಾರ ಗದ್ದುಗೆ ಹಿಡಿಯಲು ಕಾರಣರಾದ ಮತದಾರರು ಹಾಗೂ ನೂತನ ನಿರ್ದೇಶಕರನ್ನು ಶಾಸಕ ಕೆ. ಮಹದೇವ್ ಅಭಿನಂದಿಸಿದರು. ಗ್ರಾಪಂ ಸದಸ್ಯರಾದ ರಾಮಚಂದ್ರು, ಕುಮಾರ್, ಜವರಾಯಿ, ಮುಖಂಡರಾದ ಮಹದೇವ್, ರವಿ, ಕೆ.ಜಿ. ಶಿವಣ್ಣ, ಸ್ವಾಮಿ, ಲಕ್ಕೇಗೌಡ, ಪುಟ್ಟಸೋಮರಾಧ್ಯ ಇದ್ದರು.

ರಾವಂದೂರು: 
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಮೂಲಕ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನ ಪಡೆದುಕೊಂಡರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಸ್ಥಾನ ಪಡೆದುಕೊಳ್ಳುವ ಮೂಲಕ ಜೆಡಿಎಸ್ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿತು.

ಚುನಾವಣೆಯಲ್ಲಿ ನಿರ್ದೇಶಕರಾಗಿ ಆರ್.ವಿ. ಸೋಮಶೇಖರ್, ಎಚ್.ಆರ್. ಕುಮಾರ, ಬಿ.ಟಿ. ರಾಜು, ಎಚ್.ಡಿ. ವಿಜಯ್ ಕುಮಾರ್, ಜಯಮ್ಮ, ಸುಮಿತ್ರ, ಸಾದೀಕ್‌ವುಲ್ಲಾ ಷರೀಫ್, ಅನ್ವರ್‌ಪಾಷ, ಎಚ್. ಎಸ್. ಶಿವದೇವಪ್ಪ, ಮೊಗನಾಯಕ ಹಾಗೂ ಅಬ್ದುಲ್ ಸಮತ್ ಜಯಶೀಲರಾದರು.ಚುನಾವಣಾಧಿಕಾರಿಯಾಗಿ ರಿಟರ್ನಿಂಗ್ ಆಫೀಸರ್ ಜೆ. ಹಿತೇಂದ್ರ ಇವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ವಾಣಿಜ್ಯೋದ್ಯಮಿ ಆರ್.ಎಲ್. ಮಣಿ, ಜಿಪಂ ಮಾಜಿ ಸದಸ್ಯ ಎಸ್.ಎ. ಶಿವಣ್ಣ , ಆರ್.ವಿ. ನಂದೀಶ್, ಮಹೇಶ್, ನದೀಮ್, ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ವಿಜೇಂದರ್, ಸಹಕಾರ್ಯದರ್ಶಿ ಶಿವರಾಂ, ಗ್ರಾಪಂ ಸದಸ್ಯ ಪುಟ್ಟರಾಜು ಇದ್ದರು.