ಕೆ.ಆರ್‌. ನಗರ (ನ.21): ಮಂಡ್ಯದ ಡಿಸಿಸಿ ಬ್ಯಾಂಕ್‌ ಮಾದರಿಯಲ್ಲೇ ಕೆ.ಆರ್‌.ನಗರದ ಟಿಎಪಿಸಿಎಂಎಸ್‌ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಶುಕ್ರವಾರ ಯಶಸ್ವಿಯಾಗಿದೆ. 

ಅಧ್ಯಕ್ಷ ಹುದ್ದೆಗೆ ಬಿಜೆಪಿಯ ಎಚ್‌.ಡಿ.ಪ್ರಭಾಕರ ಜೈನ್‌ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಎಚ್‌.ಆರ್‌.ಮಹೇಶ್‌ ಆಯ್ಕೆಯಾಗಿದ್ದಾರೆ.

ರಾಜ್ಯದ ಇಬ್ಬರು ಬಿಜೆಪಿ ಮುಖಂಡರು 6 ವರ್ಷ ಉಚ್ಛಾಟನೆ ..

ಕಳೆದ ವಾರ ಟಿಎಪಿಎಸ್‌ಎಂಎಸ್‌ನ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲದಿಂದ 7 ಮಂದಿ ನಿರ್ದೇಶಕರು ಮತ್ತು ಜೆಡಿಎಸ್‌ ಬೆಂಬಲಿತ 5 ಮಂದಿ ಆಯ್ಕೆಯಾಗಿದ್ದರು. 

ಬಿಜೆಪಿಯ ಯಾವುದೇ ಸದಸ್ಯರು ಚುನಾಯಿತರಾಗದಿದ್ದರೂ ಮಂಡ್ಯದ ಡಿಸಿಸಿ ಬ್ಯಾಂಕ್‌ ಚುನಾವಣೆ ರೀತಿಯಲ್ಲೇ ಸರ್ಕಾರದಿಂದ ಟಿಎಪಿಸಿಎಂಎಸ್‌ಗೆ ನಾಮನಿರ್ದೇಶಿತ ಎಚ್‌.ಡಿ.ಪ್ರಭಾಕರ ಜೈನ್‌ ಅವರು ಜೆಡಿಎಸ್‌ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು.