ಮಂಡ್ಯ (ನ.12): ಬಿಜೆಪಿ ಸೂಚನೆಯನ್ನು ಧಿಕ್ಕರಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಬಿಜೆಪಿ ಮುಖಂಡ ಮದ್ದೂರು ತಾಲೂಕು ಕೊತ್ತನಹಳ್ಳಿಯ ಕ.ಎಸ್ ಮಲ್ಲಿಕಾರ್ಜುನ್ ಹಾಗೂ ಮಂಡ್ಯ ತಾಲೂಕು ಎಚ್‌ ಮಲ್ಲಿಗೆರೆಯ  ಎಂಬಿ ಬಸವರಾಜು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ  ಪಕ್ಷದಿಂದ ಉಚ್ಛಾಟಿಸಲಾಗಿದೆ. 

ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ತಿಳಿಸಿದ್ದಾರೆ. 

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ  ಅವರು ಕಳೆದ 2 ವರ್ಷಗಳಿಂದಲೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದಲ್ಲದೇ ಪಕ್ಷದ ಸೂಚನೆಯನ್ನೂ ಧಿಕ್ಕರಿಸಿ ನಡೆದುಕೊಳ್ಳುವ ಮೂಲಕ ಪಕ್ಷದ ಘನತೆಗೆ   ಕುಂದುಂಟು ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದೀರಿ ಎಂದು ಆರೋಪಿಸಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶದ ಮೇರೆಗೆ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ. 

ಶಿರಾ ಚುನಾವಣೆ : ಬುಡಮೇಲಾದ ರಾಜಕೀಯ ಲೆಕ್ಕಾಚಾರ!...

ಬಿಜೆಪಿ ಜಿಲ್ಲಾಧ್ಯಕ್ಷ ಕೆಜೆ ವಿಜಯಕುಮಾರ್ ವಿರುದ್ಧ ಇತ್ತೀಚೆಗೆ ಪಕ್ಷದ  ಜಿಲ್ಲಾ ಕಚೇರಿ ಮುಂದೆ ಕೆಲ ಕಾರ್ಯಕತ್ರರೊಂದಿಗೆ ಮಲ್ಲಿಕಾರ್ಜುನ್ ಮತ್ತು ಎಂಬಿ ಬಸವರಾಜು ಪ್ರತಿಭಟನೆ ನಡೆಸಿದ್ದಾರೆ. 

ಈ ನಿಟ್ಟಿನಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.