ಶಿರಾ (ಫೆ.19):  ತಾಲೂಕಿನಲ್ಲಿ ಜೆಡಿಎಸ್‌ ಭದ್ರವಾಗಿದೆ ಎಂಬುದಕ್ಕೆ ಇತ್ತೀಚಿನ ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆದ್ದಿರುವುದೇ ಸಾಕ್ಷಿ. ಕಳೆದ ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಸೋತಿದ್ದರೂ ಸಹ ನಾವೇ ಎದೆಗುಂದದೆ ಪಕ್ಷ ಸಂಘಟನೆ ಮಾಡಿದ್ದೇವೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌. ಉಗ್ರೇಶ್‌ ಹೇಳಿದರು.

ಅವರು ಈ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಿರಾ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಬೆಂಬಲದಿಂದ 270 ಅಭ್ಯರ್ಥಿಗಳು ಚುನಾಯಿತರಾಗಿ, 14 ರಿಂದ 15 ಗ್ರಾಪಂಗಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂಬರುವ ನಗರಸಭೆ, ತಾಪಂ ಮತ್ತು ಜಿಪಂಗಳಲ್ಲೂ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ ಎಂದರು.

ಪಕ್ಷ ಸಂಘಟನೆಗೆ ಸಭೆ:  ಶಿರಾ ತಾಲೂಕಿನಲ್ಲಿ ಮುಂಬರುವ ನಗರಸಭೆ, ತಾಪಂ ಮತ್ತು ಜಿಪಂಗಳಲ್ಲಿ ಪಕ್ಷ ಸಂಘಟನೆ ಮಾಡಲು ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವೀಕ್ಷಕರನ್ನು ನೇಮಿಸಿದ್ದು ವೀಕ್ಷಕರಾದ ಶಾಸಕ ವೀರಭದ್ರಯ್ಯ, ಡಿ.ಸಿ. ಗೌರಿಶಂಕರ್‌, ಬೆಮೆಲ್‌ ಕಾಂತರಾಜು, ಮಾಜಿ ಶಾಸಕ ತಿಮ್ಮರಾಯಪ್ಪ, ಸುಧಾಕರ್‌ ಲಾಲ್‌, ಬೆಳ್ಳಿ ಲೋಕೇಶ್‌ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆಂಜಿನಪ್ಪ ಅವರು ಫೆ.18 ರಂದು ನಗರದ ಚಂಗಾವರ ರಸ್ತೆಯಲ್ಲಿರುವ ಜೆಡಿಎಸ್‌ ಕಚೇರಿಯ ಮುಂಭಾಗ ಸಭೆ ಕರೆದಿದ್ದು, ಈ ಸಭೆಗೆ ಜೆಡಿಎಸ್‌ ಬೆಂಬಲದಿಂದ ಆಯ್ಕೆಯಾದ ಗ್ರಾ.ಪಂ. ಸದಸ್ಯರು, ಅಧ್ಯಕ್ಷರು, ತಾ.ಪಂ. ಸದಸ್ಯರು, ಜಿ.ಪಂ. ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕೆಂದು ಹೇಳಿದರು.

ಬಿಜೆಪಿ ಭರ್ಜರಿ ಪ್ರವೇಶ : ಕಮಲ ಪಾಳಯಕ್ಕೆ ಬಂಪರ್ ..

ಪತ್ರಿಕಾಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ಮಾಜಿ ಗ್ರಾ.ಪಂ. ಅಧ್ಯಕ್ಷ ನರಶಿಂಹಮೂರ್ತಿ, ಮಾಜಿ ನಗರಸಭಾ ಸದಸ್ಯರಾದ ಆರ್‌.ರಾಮು, ಆಂಜಿನಪ್ಪ, ಹೊನ್ನೆನಹಳ್ಳಿ ನಾಗರಾಜ್‌, ಭೂವನಹಳ್ಳಿ ವಿಎಸ್‌ಎಸ್‌ಎನ್‌ ಅಧ್ಯಕ್ಷ ಬಂಡೇ ರಾಮಕೃಷ್ಣ, ರಹಮತ್‌, ಮುದ್ದುಗಣೇಶ್‌, ಅರೆಹಳ್ಳಿ ಬಾಬು, ನಟರಾಜು, ಶ್ರೀರಂಗ, ಕೊಲ್ಲಾರಪ್ಪ ಮತ್ತಿತರರು ಹಾಜರಿದ್ದರು.