ಕೋಲ್ಕತಾ (ಫೆ.19):  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿರುವ ಹೊತ್ತಿನಲ್ಲೇ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿದ್ದು, ಬಹುತೇಕ ಸಮೀಕ್ಷೆಗಳು ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟದ ಸುಳಿವು ನೀಡಿದೆ. ಆದರೂ ಅನ್ವಯ ಬಿಜೆಪಿಗಿಂತ ಸ್ವಲ್ಪ ಮುನ್ನಡೆ ಸಾಧಿಸಿರುವ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದು ಸಮೀಕ್ಷೆಗಳು ಹೇಳಿವೆ.

ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 3 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 100ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಾಗಿ ಬಹುತೇಕ ಸಮೀಕ್ಷೆಗಳು ಹೇಳಿವೆ. ಹೀಗಾಗಿ ಈ ಫಲಿತಾಂಶ ಬಿಜೆಪಿ ಪಾಲಿಗೆ ಬಹುದೊಡ್ಡ ಗೆಲುವಾಗಲಿದ್ದರೆ, ಟಿಎಂಸಿಗೆ ಎಚ್ಚರಿಕೆಯ ಕರೆಗಂಟೆಯಾಗಿ ಹೊರಹೊಮ್ಮಿದೆ.

ಬಿಎಸ್‌ವೈ, ವಿಜಯೇಂದ್ರ ಬೆನ್ನಿಗೆ ನಿಂತ ಉಸ್ತುವಾರಿ, ಯತ್ನಾಳ್‌ಗೆ ಸಂಕಷ್ಟ...!

ಇನ್ನು ಕಳೆದ ಬಾರಿ 211 ಸ್ಥಾನ ಗೆದ್ದಿದ್ದ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಈ ಬಾರಿ ಕನಿಷ್ಠ 50-70 ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಮೈತ್ರಿಕೂಟ ಯಾವುದೇ ದೊಡ್ಡ ಸಾಧನೆ ಮಾಡದು ಎಂದಿದೆ ಸಮೀಕ್ಷೆ. ರಾಜ್ಯ ವಿಧಾನಸಭೆ ಒಟ್ಟು 295 ಸದಸ್ಯಬಲ ಹೊಂದಿದ್ದು ಬಹುಮತಕ್ಕೆ 148 ಸ್ಥಾನ ಬೇಕು.

ಒಟ್ಟು ಸ್ಥಾನ 295 ಬಹುಮತಕ್ಕೆ 148

ಸಮೀಕ್ಷಾ ಸಂಸ್ಥೆ ಟಿಎಂಸಿ ಬಿಜೆಪಿ ಕಾಂಗ್ರೆಸ್‌- ಎಡಪಕ್ಷ

ಎಬಿಪಿ ನ್ಯೂಸ್‌- ಸಿಎನ್‌ಎಕ್ಸ್‌ 151 117 24

ಕ್ರೌಡ್‌ವಿಸ್ಡಮ್‌360 134 140 13

ಲೋಕಪಾಲ್‌ 157 107 23

ಸಿ ವೋಟರ್‌ 154-162 98-106 26-34

ಟೈಮ್ಸ್‌ ಡೆಮಾಕ್ರೆಸಿ 149-161 126-136 8-11

ಸಿಎಂ ಹುದ್ದೆಗೆ ಯಾರು ಉತ್ತಮ

ಮಮತಾ ಬ್ಯಾನರ್ಜಿ (ಟಿಎಂಸಿ) ಶೇ.63

ದಿಲೀಪ್‌ ಘೋಷ್‌(ಬಿಜೆಪಿ) ಶೇ.21

ಮುಕುಲ್‌ರಾಯ್‌(ಬಿಜೆಪಿ) ಶೇ.7

ಅಧಿರ್‌ ಚೌಧರಿ(ಕಾಂಗ್ರೆಸ್‌) ಶೇ.6