ಕಾಂಗ್ರೆಸ್‌ಗೆ ಜೊತೆ ಜೆಡಿಎಸ್ ಮೈತ್ರಿ : HDK ತೋಟದ ಮನೆಯಲ್ಲಿ ನಡೆಯಿತು ಸಭೆ
ಕಾಂಗ್ರೆಸ್ ಜೊತೆಗೆ ಜೆಡಿಎಸ್ ಮೈತ್ರಿ ಬಗ್ಗೆ ಎಚ್ಡಿಕೆ ತೊಟದ ಮನೆಯಲ್ಲಿ ಸಭೆಯೊಮದು ನಡೆದಿದೆ.
ರಾಮನಗರ (ಅ.25): ಬಿಡದಿಯ ಸಮಗ್ರ ಅಭಿವೃದ್ಧಿಗಾಗಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕೈ ಜೋಡಿಸುವಂತೆ ಕಾಂಗ್ರೆಸ್ ನಾಯಕರ ಸಹಕಾರ ಕೇಳಲಾಗುವುದು ಎಂದು ಶಾಸಕ ಎ ಮಂಜುನಾಥ್ ತಿಳಿಸಿದರು.
ತಾಲೂಕಿನ ಬಿಡದಿ ಹೋಬಳಿ ಕೇತಗಾನಹಳ್ಳಿಯ ಎಚ್ ಡಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ಕರ್ಮಭೂಮಿಯಲ್ಲಿ ಕೆಲವರು ಇಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಗೊಂದಲಗಳ ನಿವಾರಣೆಗೆ ಹಾಗೂ ಒಗ್ಗಟ್ಟು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪುರಸಭೆ ಸದಸ್ಯರು ಒಂದೆಡೆ ಸೇರಿ ಚರ್ಚಿಸಲಾಗಿದೆ ಎಮದು ತಿಳಿಸಿದರು.
'ಡಿಕೆಶಿ ಮಾತು ಸಿದ್ದರಾಮಯ್ಯ ಕೇಳಲ್ಲ : ನಾವೆಲ್ಲಾ ತಿಳಿಸಿಯೇ ಪಕ್ಷ ಬಿಟ್ಟೆವು' .
ಪೂರ್ವಭಾವಿ ಸಿದ್ಧತೆ : ಬಿಡದು ಪುರಸಭೆಯ ಉಳಿಕೆ ಅವಧಿ ಹಾಗೂ ಮಾಗಡಿ ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯನ್ನು ನ.10ರೊಳಗೆ ನಡೆಸಬೇಕು ಎಂದು ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರ್ವಭಾವಿಯಾಗಿ ನಾವೆಲ್ಲರೂ ತಯಾರಿ ನಡೆಸಿಕೊಂಡಿದ್ದೇವೆ. 23 ಸದಸ್ಯ ಬಲದ ಬಿಡದು ಉರಸಭೆಯಲ್ಲಿ ಈಗಾಗಲೇ ಜೆಡಿಎಸ್ ನೊಂದಿಗೆ 15 ಸದಸ್ಯರು ಗುರುತಿಸಿಕೊಂಡಿದ್ದಾರೆ ಎಂದರು.
ನಾನು ಮತ್ತು ಮಾಜಿ ಶಾಸಕ ಎಚ್ ಸಿ ಬಾಕೃಷ್ಣ ಪಕ್ಷ ಬದಲಾಯಿಸಿದ ಸಂದರ್ಭದಲ್ಲಿ ಕೆಲವರು ಪಕ್ಷಾಂತರ ಮಾಡಿದರು. ಆದರೆ ಇಂದು ಅಭಿವೃದ್ಧಿಗೆ ಎಲ್ಲರೂ ಒಮದಾಗಬೇಕಾಗಿದೆ ಎಂದರು.