ಮೈಸೂರು (ಅ.25):  ಆರ್ ಆರ್ ನಗರ ಉಪಚುನಾವಣೆ ಸಮರ ಜೋರಾಗಿದ್ದು,  ಚುನಾವಣಾ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಚಿವ ಎಸ್. ಟಿ ಸೋಮಶೇಖರ್ ಹೇಳಿದ್ದಾರೆ. 

ಡಿ.ಕೆ.ಶಿವಕುಮಾರ್ ಮಾತನ್ನ ಸಿದ್ದರಾಮಯ್ಯನೇ ಕೇಳಲ್ಲ. ಅವರ ಮಾತಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ನಾನು, ಮುನ್ನಿರತ್ನ, ಭೈರತಿ ನಿಷ್ಟವಂತ ಕಾರ್ಯಕರ್ತರಾಗಿದ್ದೇವೆ. ನಾವು ಪಕ್ಷ ತೊರೆಯುವಾಗ ಇವರೆಲ್ಲಾ ಎಲ್ಲಿ ಹೋಗಿದ್ದರು. ಆಗ ಎಲ್ಲಾ ವಿಚಾರವನ್ನು ನಾವು ಇವರಿಗೆ ತಿಳಿಸಿರಲಿಲ್ಲವೇ ಎಂದು ಸೋಮಶೇಖರ್ ಹೇಳಿದರು.

RR ನಗರ ಉಪಚುನಾವಣೆ: ಅಧಿಕಾರದಾಸೆಗೆ ಜನರ ಪ್ರೀತಿ ವಿಶ್ವಾಸ ಮಾರಿಕೊಳ್ಳಲ್ಲ, ಕುಸುಮಾ ...

ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಗೆ ಕಾರ್ಯಕರ್ತರಿಲ್ಲದಂತಾಗಿದೆ. ಎಲ್ಲರೂ ಮುನ್ನಿರತ್ನ ಹಿಂದೆ ಬಂದಿದ್ದಾರೆ.ಕಾಂಗ್ರೆಸ್ ಹೊರಗಿನಿಂದ ಜನರನ್ನ ಕರೆ ತಂದು ಬಿತ್ತಿ ಪತ್ರ ಹಂಚಿಸುತ್ತಿದ್ದಾರೆ. ಇದನ್ನೇ ನಮ್ಮ ಅಭ್ಯರ್ಥಿ ಭಯದ ವಾತಾವರಣ ಎಂದು ಹೇಳಿರುವುದು.  ಮುನ್ನಿರತ್ನ ಕಳೆದ 6 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ.  ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ಹೀಗಾಗಿ ನಮ್ಮ ಅಭ್ಯರ್ಥಿ ನೂರಕ್ಕೆ ನೂರ ಗೆದ್ದೆ ಗೆಲ್ಲುತ್ತಾರೆ.