ಚಿತ್ರದುರ್ಗ(ಫೆ.02) : ಪಂಚಮಸಾಲಿ ಸಮಾಜಕ್ಕೆ ಮೀಸಲು ಕಲ್ಪಿಸುವ ಸಂಬಂಧ ನಾವುಗಳು ಬೀದಿಗಿಳಿದು ಪಾದಯಾತ್ರೆ ಮಾಡಿದ್ರೆ ನೀವುಗಳು ಮೌನವಾಗಿದ್ದೀರಾ? ನಮ್ಮೊಟ್ಟಿಗೆ ಬೀದಿಗಿಳಿದು ಪಾದಯಾತ್ರೆ ಮಾಡಿ. 

ಇಲ್ಲದಿದ್ದರೆ ಹೈಕಮಾಂಡ್‌ಗೆ ದೂರು ನೀಡಿ ಸಿಎಂ ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು. 

ಪಾದಯಾತ್ರೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಜನಪ್ರತಿನಿಧಿಗಳು ಹೆದರಬೇಕಾದ ಅಗತ್ಯವಿಲ್ಲ ಎಂದರು.

ಸಿಎಂ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಸಂತೋಷ್‌ಗೆ ಸಂಕಷ್ಟ .

ಹೊರಟ್ಟಿವಿರುದ್ಧ ಆಕ್ರೋಶ: ಸ್ವಾಮೀಜಿಗಳು ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಬಾರದೆಂಬ ಹೇಳಿಕೆ ನೀಡಿರುವ ಮಾಜಿ ಸಚಿವ ಬಸವರಾಜ್‌ ಹೊರಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು, ನಮ್ಮ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ನಮ್ಮ ಜೊತೆ ಬನ್ನಿ ಎಂದು  ಹೇಳಿದ್ದಾರೆ.

ನೀವು ವಾಮ ಮಾರ್ಗದ ಮೂಲಕ ಏನೇನು ಪಡೆದುಕೊಂಡಿದ್ದೀರಿ ಎಂಬುದು ನಮಗೆ ಗೊತ್ತಿದೆ. ಹರಿಹರಪೀಠ ಹಾಗೂ ಕೂಡಲ ಸಂಗಮ ಪೀಠಗಳು ಈಗ ಒಂದಾಗಿವೆ ಎಂದರು. ಪಾದಯಾತ್ರೆ ಫೆ.2ರಂದು ಚಿತ್ರದುರ್ಗ ನಗರಕ್ಕೆ ಆಗಮಿಸಲಿದ್ದು, ಈ ವೇಳೆ ಒನಕೆ ಪ್ರದರ್ಶನ ನಡೆಯಲಿದೆ.