ಬೆಂಗಳೂರು, (ಫೆ.01): ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕ ವಿನಯ್ ಕಿಡ್ನಾಪ್ ಯತ್ನ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. 

ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ N.R.ಸಂತೋಷ್​​ಗೆ ಸಂಕಷ್ಟ ಎದುರಾಗಿದೆ. 

'ಅವನ್ಯಾವನೋ ಸತ್ರೆ ನನಗೆ ಯಾಕ್ರೀ ಕೇಳ್ತೀರಾ'? ಸಂತೋಷ್ ಬಗ್ಗೆ ಈಶ್ವರಪ್ಪ ಸಿಡಿಮಿಡಿ

ಪ್ರಕರಣವನ್ನು ರದ್ದುಕೋರಿ  N.R.ಸಂತೋಷ್ ಅರ್ಜಿ ಸಲ್ಲಿಸಿದ್ದರು. ಆದ್ರೆ, ಇಂದು (ಸೋಮವಾರ) ನ್ಯಾ.ಹೆಚ್.ಪಿ.ಸಂದೇಶ್​ರವರಿದ್ದ ಏಕಸದಸ್ಯ ಪೀಠ  N.R.ಸಂತೋಷ್ ಅರ್ಜಿಯನ್ನು ವಜಾಗೊಳಿಸಿದೆ. 

ಅಂದ ಹಾಗೆ, ಪ್ರಕರಣದ ವಿಚಾರಣೆ ವೇಳೆ ತಮ್ಮ ಪರ ಸ್ವತಃ ವಿನಯ್ ವಾದ ಮಂಡಿಸಿದ್ದರು. ಪ್ರಕರಣವನ್ನು CCBಗೆ ವರ್ಗಾಯಿಸಿದ್ದನ್ನು ಪ್ರಶ್ನಿಸಿ N.R.ಸಂತೋಷ್​ ಅರ್ಜಿ ಸಲ್ಲಿಸಿದ್ದರು.