ಪಂಚಮಸಾಲಿ ಹೋರಾಟ ಹತ್ತಿಕ್ಕಲು ಷಡ್ಯಂತ್ರ: ಕೂಡಲ ಶ್ರೀ
* ಪಂಚಮಸಾಲಿ ಸಮುದಾಯವು ಕೃಷಿ ಪ್ರಧಾನ ಸಮಾಜ
* ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಸತ್ಯಾಗ್ರಹ
* ಸಮುದಾಯದ ಅನುಕೂಲಕ್ಕಾಗಿ ಶ್ರೀಗಳ ಹಗಲಿರಳು ಹೋರಾಟ
ಕುಂದಗೋಳ(ಸೆ.23): ಪಂಚಮಸಾಲಿ ಹೋರಾಟ ಹತ್ತಿಕ್ಕಲು ಹಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಇದಕ್ಕೆ ಸಮಾಜ ಬಾಂಧವರು ಕಿವಿಗೊಡದೇ 2ಎ ಮೀಸಲಾತಿಗಾಗಿ ಒಂದೇ ಮಂತ್ರದಿಂದ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಹೇಳಿದ್ದಾರೆ.
ಪಟ್ಟಣದ ಬಸವಣ್ಣಜ್ಜನವರ ಸಭಾಮಂಟಪದಲ್ಲಿ ಬುಧವಾರ ಮಕ್ಕಳ ಶಿಕ್ಷಣ ಹಾಗೂ ಯುವಜನ ಉದ್ಯೋಗಕ್ಕಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ(Reservation) ಕುರಿತು ಹುಬ್ಬಳ್ಳಿಯಲ್ಲಿ ಸೆ. 25ರಂದು ನಡೆಯುವ ಸಭೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪಂಚಮಸಾಲಿ ಸಮುದಾಯವು ಕೃಷಿ ಪ್ರಧಾನ ಸಮಾಜ. ಮಕ್ಕಳ (Children) ಭವಿಷ್ಯಕ್ಕಾಗಿ ಈ ಮೀಸಲಾತಿ ಬೆಂಗಳೂರಿನಲ್ಲಿ ಸತ್ಯಾಗ್ರಹ ಮಾಡಿದಾಗ ಮುಖ್ಯಮಂತ್ರಿಯವರು ಸೆ. 15ರ ಒಳಗಾಗಿ ನೀಡುವುದಾಗಿ ಭರವಸೆ ನೀಡಿದ್ದರು. ಅವರಿಗೆ ನೆನೆಪಿಸಲು ಈ ಸಮಾವೇಶವಾಗಿದೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಸಮಾಜದ ಋುಣ ಹೆಚ್ಚಿದ್ದು.
ಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟ: ಕೂಡಲ ಶ್ರೀ
ರಾಜ್ಯದಲ್ಲಿ 1.30 ಕೋಟಿ ನಮ್ಮ ಸಮಾಜದ ಜನಾಂಗವಿದೆ. ಅದರಲ್ಲಿ ಗೌಡಲಿಂಗಾಯಿತ, ಮಲೆಗೌಡ, ದಿಕ್ಷಾ ಲಿಂಗಾಯಿತ ಇದ್ದು ಈಗಾಗಲೇ ಆ. 26ರಿಂದ ಆಯಾ ಜಿಲ್ಲೆಯಲ್ಲಿ ಸಮುದಾಯವನ್ನು ಸಂಘಟಿಸುತ್ತ ಬರುತ್ತಿದ್ದೇವೆ ಎಂದು ಹೇಳಿದರು. ಕಲ್ಯಾಣಪುರ ಬಸವಣ್ಣಜ್ಜನವರು ಮಾತನಾಡಿ, ಸಮುದಾಯದ ಅನುಕೂಲಕ್ಕಾಗಿ ಶ್ರೀಗಳು ಹಗಲಿರಳು ಹೋರಾಟ ಮಾಡುತ್ತಿದ್ದಾರೆ. ಇವರ ಕೈ ಬಲಪಡಿಸಲು ಸಮಾಜದವರು ಕಟಿಬದ್ಧರಾಗಿರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಟಿ. ಹಿರೇಗೌಡ್ರ, ಬಸವರಾಜ ನಾವಳ್ಳಿ, ಸೋಮರಾವ ದೇಸಾಯಿ, ನಾಗರಾಜ ದೇಶಪಾಂಡೆ, ರವಿ ಬಂಕದ, ಸಿದ್ದಪ್ಪ ಇಂಗಳಹಳ್ಳಿ, ವೆಂಕನಗೌಡ ಕಂಠಪ್ಪಗೌಡ್ರ, ಶಿವಕುಮಾರ ಸೊರಟೂರ, ವೈ.ಎನ್.ಪಾಟೀಲ, ಮುತ್ತು ಚಕಾರಿ, ಮುತ್ತು ಕುರ್ತಕೋಟಿ, ಬಂಗಾರಿ ಶಿಗ್ಗಾಂವಿ ಹಾಗೂ ಸಮಾಜದ ಮುಖಂಡರು ಇದ್ದರು.