ಮಂಗಳೂರು(ಆ.06): ಹಲವು ದಶಗಳಿಂದ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಆಯುರ್ವೇದ ವೈದ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದ ದಿ. ವೆಂಕಟ್ರಾಮ ದೈತೋಟ ಅವರ ಪತ್ನಿ ಜಯಲಕ್ಷ್ಮೀ ವೆಂಕಟ್ರಾಮ ಅವರು ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ರಕ್ತದ ಕ್ಯಾನ್ಸರ್‌ ರೋಗಕ್ಕೆ ಆಯುರ್ವೇದ ಔಷಧಿ ನೀಡುವ ಮೂಲಕ ಆಯುರ್ವೇದ ವೈದ್ಯ ಪರಂಪರೆ ಪ್ರಸಿದ್ಧವಾಗಿತ್ತು. ದಿ. ವೆಂಕಟ್ರಾಮ ದೈತೋಟ ಅವರು ಕಳೆದ ವರ್ಷವಷ್ಟೇ ನಿಧನರಾಗಿದ್ದು, ಬಳಿಕ ಜಯಲಕ್ಷ್ಮೀ ಅವರು ವೈದ್ಯಕೀಯ ಸೇವೆಯನ್ನು ಮುಂದುವರಿಕೊಂಡು ಬಂದಿದ್ದರು.

ಅನ್ಯ ರಾಜ್ಯಗಳಿಂದಲೂ ಬರ್ತಿದ್ರು ಜನ:

ರಾಜ್ಯದಿಂದ ಮಾತ್ರವಲ್ಲದೆ ಕೇರಳ, ಆಂಧ್ರಪ್ರದೇಶ ಸಹಿತ ಹಲವು ರಾಜ್ಯಗಳಿಂದ ಇವರ ಬಳಿಗೆ ಚಿಕಿತ್ಸೆಗಾಗಿ ಜನರು ಬರುತ್ತಿದ್ದರು. ಪ್ರತಿ ಶನಿವಾರ ಮತ್ತು ಭಾನುವಾರ ಇಲ್ಲಿ ಚಿಕಿತ್ಸೆ ಲಭ್ಯವಿತ್ತು. ಇವರು ತಾವು ನೀಡುವ ಚಿಕಿತ್ಸೆಗೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ.

ಈ ಆಯುರ್ವೇದ ವೈದ್ಯರ ಶುಲ್ಕ 5ರು. ಮಾತ್ರ!

ಲಕ್ಷಕ್ಕೂ ಅಧಿಕ ಗಿಡಮೂಲಿಕೆಗಳ ಕುರಿತು ಜ್ಞಾನ ಹೊಂದಿದ್ದ ಈ ಆಯುರ್ವೇದ ಕುಟುಂಬವು ತನ್ನ ಮನೆಯ ಸುತ್ತಲೂ ಔಷಧಿ ಸಸ್ಯಗಳನ್ನು ಬೆಳೆಸಿಕೊಂಡಿದ್ದಾರೆ. 1996ರಲ್ಲಿ ನಡೆದ ಜಾಗತಿಕ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಒಂದು ಸಾವಿರದ ಎಂಟು ವಿವಿಧ ಗಿಡಮೂಲಿಕಾ ಸಸ್ಯಗಳ ಪ್ರದರ್ಶನ ನಡೆಸಿದ್ದರು.

ತನ್ನ ಪತಿಯ ಮೂಲಕ ಆರ್ಯವೇದ ವೈದ್ಯಕೀಯ ಜ್ಞಾನ ಪಡೆದುಕೊಂಡಿದ್ದ ಜಯಲಕ್ಷ್ಮೀ ಅವರು ಆಯುರ್ವೇದ ಪ್ರಕಾಶನದ ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ