ಬೆಂಗಳೂರು, [ಮಾ.21]: ನಾಳೆ ಅಂದ್ರೆ ಭಾನುವಾರ [ಮಾ.22]ದಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ ಬಂದ್ ಇರಲಿದೆ. 

ಮೆಟ್ರೋ ಪ್ರಯಾಣಿಕರಿಗೆ ನಿರ್ಬಂಧ ಹೇರುವುದರ ಬಗ್ಗೆ ಬಿಎಂಆರ್ ಸಿಎಲ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಯಾರು ಬೆಂಗಳೂರಿಗರು ಮೆಟ್ರೋ ನಿಲ್ದಾಣಗತ್ತ ಹೋಗಬೇಡಿ.

#JanataCurfew ಏನಿರುತ್ತೆ, ಏನಿರೋಲ್ಲ..? ಇಲ್ಲಿದೆ ಡಿಟೇಲ್ಸ್..!

ಮಾ.22 ರಂದು ನಮ್ಮ ಮೆಟ್ರೋ ಸಂಪೂರ್ಣ ಸ್ಥಗಿತವಾಗಿದ್ದರೆ, ಇನ್ನುಳಿದ ದಿನಗಳಲ್ಲಿ ಅಂದ್ರೆ ಮಾರ್ಚ್ 22ರಿಂದ ಮಕ್ಕಳು, ಹಿರಿಯ ನಾಗರಿಕರಿಗೆ ಮೆಟ್ರೋ ಪ್ರಯಾಣ ನಿರ್ಬಂಧ ವಿಧಿಸುವುದಾಗಿ ಬಿಎಂಆರ್ ಸಿಎಲ್ ತಿಳಿಸಿದೆ.

150 ಪ್ರಯಾಣಿಕರ ಮಿತಿಯನ್ನು ಹಾಕಿಕೊಳ್ಳಲಿರುವ ನಮ್ಮ ಮೆಟ್ರೋದಲ್ಲಿ, ಒಳಗೆ ಹೆಚ್ಚುವರಿಯಾಗಿ ನಿಲ್ಲುವುದನ್ನು ಸಹ ನಿರ್ಬಂಧ ವಿಧಿಸಲಾಗಿದೆ. ಪ್ರತಿ 2ನೇ ಸೀಟ್ ಗಳು ಖಾಲಿಯಾಗಿರಬೇಕು ಹಾಗೂ ಥರ್ಮಲ್ ಸ್ಕ್ರೀನಿಂಗ್ ಕೈಗೊಳ್ಳಲಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಆರ್ ಸಿಎಲ್ ಹೇಳಿದೆ. 

ಮೈಸೂರಿಗೂ ಕಾಲಿಟ್ಟ ಕೊರೋನಾ ವೈರಸ್: ಸೊಂಕಿತರ ಸಂಖ್ಯೆ 20ಕ್ಕೇರಿಕೆ

ನಮ್ಮ ಹಿತಾ ದೃಷ್ಟಿಯಿಂದ ಬಿಎಂಆರ್ ಸಿಎಲ್ ಈ ಕ್ರಮಗಳನ್ನ ಕೈಗೊಂಡಿದೆ. ಇದಕ್ಕೆ ಮೆಟ್ರೋ ಪ್ರಯಾಣಿಕರು ಸಹಕರಿಸಬೇಕು. ಅಲ್ಲದೇ ಕೊರೋನಾ ವೈರಸ್ ನಿಂದ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಹೊರಗಡೆ ತಿರುಗಾಡುವುದನ್ನ ಮೊದಲು ನಿಲ್ಲಿಸಬೇಕು.

ಇನ್ನು ಬಸ್, ರೈಲ್ವೆ ಹಾಗೂ ವಿಮಾನ ಪ್ರಯಾಣವನ್ನು ಸಹ ಸದ್ಯಕ್ಕೆ ಮಾಡುವುದು ಒಳ್ಳೆಯದಲ್ಲ. ಆದಷ್ಟೂ ಮನೆಯಲ್ಲಿಯೇ ಉಳಿದುಕೊಂಡರೆ ಉತ್ತಮ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.