ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನದ ಬಗ್ಗೆ ಮುನಿಗಳೊಬ್ಬರು ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪ ಅವರ ಭವಿಷ್ಯ ರಾಜಕೀಯ ಉತ್ತಂಗದ ಬಗ್ಗೆ ಇದೆ ಎಂದು ಅವರು ಹೇಳಿದ್ದಾರೆ.
ಬೆಳಗಾವಿ (ಏ.07): ಮುಂದಿನ ಎರಡೂ ವರ್ಷಗಳ ಕಾಲ ನೀವೆ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೀರಿ. ಇಲ್ಲವೆ ಉಪರಾಷ್ಟ್ರಪರಿ, ರಾಷ್ಟ್ರಪತಿಯೂ ಆಗುತ್ತೀರು ಎಂದು ಜೈನಮುನಿಗಳಾದ ಬಾಲ ಆಚಾರ್ಯ ಸಿದ್ಧಸೇನ ಮುನಿ ಭವಿಷ್ಯ ನುಡಿದಿದ್ದಾರೆ.
ಮುನಿಗಳ ಆಶೀರ್ವಾದ ಪಡೆದ ಸಿಎಂ ಯಡಿಯೂರಪ್ಪ ಅವರಿಗೆ ಜೈನಮುನಿಗಳು ಈ ರೀತಿ ಭವಿಷ್ಯ ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆಯೇ ಎಂದು ಸಿಎಂ ಪ್ರಶ್ನಿಸಿದಾಗ ಸುಮಾರು 40 ಸಾವಿರ ಅಂತರದಿಂದ ಮಂಗಲ ಅಂಗಡಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಬಿಜೆಪಿಯ ಮಾಲೀಕರಲ್ಲ: ಸಿ.ಟಿ. ರವಿ ...
ಕೆಲ ದಿನಗಳ ಹಿಂದಷ್ಟೇ ಸಿದ್ಧಸೇನಾ ಮುನಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಆಗ ಜೈನಮುನಿಗಳು ರಾಜ್ಯದ ಸಿಎಂ ಆಗುತ್ತೀರಿ ಎಂದಿದ್ದರು.
