Asianet Suvarna News Asianet Suvarna News

ಯಡಿಯೂರಪ್ಪ ಬಿಜೆಪಿಯ ಮಾಲೀಕರಲ್ಲ: ಸಿ.ಟಿ. ರವಿ

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಸರ್ವಾಡಳಿತ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

CT Ravi Talks about Foamily Politics In Karnataka BJP rbj
Author
Bengaluru, First Published Apr 5, 2021, 6:57 PM IST

ಬೆಂಗಳೂರು, (ಏ.05): ಕರ್ನಾಟಕದಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ. ನಮ್ಮ‌ ಪಕ್ಷದ ಡಿಎನ್ ಎ ನಲ್ಲಿಯೂ ಅದು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ‌ ಯಡಿಯೂರಪ್ಪ ಕುಟುಂಬಕ್ಕೆ ಉತ್ತರಾಧಿಕಾರಿ ಸಿಕ್ಕುವುದಿಲ್ಲ ಎನ್ನುವ ಸುಳಿವು ನೀಡಿದ್ದಾರೆ.

ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಉತ್ತರಾಧಿಕಾರಿಗಳ ಸಂಸ್ಕೃತಿ ಪಕ್ಷವಲ್ಲಿ, ನಮ್ಮ ಪಕ್ಷಕ್ಕೆ ಯಾರೋ ಒಬ್ಬ ವ್ಯಕ್ತಿ ಮಾಲೀಕ ಅಲ್ಲ, ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಮಾಲೀಕರು, ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ, ಡಿಎಂಕೆಗೆ ಕರುಣಾನಿಧಿ, ಸಮಾಜವಾದಿ ಪಕ್ಷಕ್ಕೆ ಮುಲಾಯಂ ಯಾದವ್ ಹೀಗೆ ಎಲ್ಲ ಪಕ್ಷಕ್ಕೂ ಕುಟುಂಬ ಮಾಲೀಕತ್ವ ಇದೆ ಆದರೆ ನಮ್ಮಲ್ಲಿ ಅಂತಹ ಪ್ರವೃತ್ತಿ ಇಲ್ಲ, ಕಾರ್ಯಕರ್ತರೇ ಮಾಲೀಕರು ಎಂದರು.

'ಈಶ್ವರಪ್ಪರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ಯಡಿಯೂರಪ್ಪ ಸ್ಕೆಚ್'

ಬಿಎಸ್ವೈ ಬಿಜೆಪಿ ನಾಯಕ,ಮಾಲೀಕರಲ್ಲ:
ಯಡಿಯೂರಪ್ಪ ನಮ್ಮ‌ಸರ್ವೋಚ್ಚ ನಾಯಕರೇ ಹೊರತು ಮಾಲೀಕರಲ್ಲ, ನಮ್ಮ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕ, ಅಮಿತ್ ಶಾ ನಾಯಕ, ಯಡಿಯೂರಪ್ಪ ನಾಯಕ ಆದರೆ ಕಾರ್ಯಕರ್ತರೇ ಮಾಲೀಕರು.ಓನರ್ ಶಿಪ್ ಬೇರೆ,ನಾಯಕರ ಮಕ್ಕಳು‌ ರಾಜಕೀಯಕ್ಕೆ ಬರುವುದು ಬೇರೆ ಎಂದು ಹೇಳಿದರು.

ಇತರ ಪಕ್ಷದಲ್ಲಿ ಅಂತಿಮ ನಿರ್ಧಾರ ಯಾವುದೋ ಒಬ್ಬ ನಾಯಕನ ಕುಟುಂಬ ತೆಗೆದುಕೊಳ್ಳಲಿದೆ. ಆದರೆ ನಮ್ಮ ಪಕ್ಷದಲ್ಲಿ ಕೋರ್‌ಕಮಿಟಿ, ಸಂಸದೀಯ ಮಂಡಳಿ ತೆಗೆದುಕೊಳ್ಳಲಿದೆ. ನಮ್ಮ ಪಕ್ಷ ಎಲ್ಲರಿಗೂ ಯೋಗ್ಯತೆ ಪರಿಶ್ರಮದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅವಕಾಶ ಕೊಡಲಿದೆ ಆದರೆ ಉತ್ತರಾಧಿಕಾರಿ ಸಂಸ್ಕೃತಿಗೆ ಅವಕಾಶ ಇಲ್ಲ, ಹಿಂದೆಯೂ ಇರಲಿಲ್ಲ ಈಗಲೂ ಇಲ್ಲ,‌ನಮ್ಮದು ಕೇಡರ್ ಬೇಸ್ಡ್ ಡಿಎನ್ ಎ ಎಂದು ತಿಳಿಸಿದರು.

ನಾನು ಕರಪತ್ರ ಹಂಚಿದ್ದೇನೆ. ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದೇನೆ.ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ.
ಕೋರ್ ಕಮಿಟಿ ಪಕ್ಷದ ಸಮಿತಿಯೇ ಹೊರತು ಯಾವೊಬ್ಬ ನಾಯಕರ ಕುಟುಂಬದ ಸದಸ್ಯರ ಸಮಿತಿ ಅಲ್ಲ, ಸಂಸದೀಯ ಮಂಡಳಿಯೂ ಕೂಡ ಯಾವ ನಾಯಕರ ಕುಟುಂಬ ಸದಸ್ಯರ ಸಮಿತಿ ಅಲ್ಲ,ಅದು ಪಕ್ಷದ ಸಮಿತಿ.ನಮ್ಮ ಪಕ್ಷದ ಡಿಎನ್ಎ ಪ್ರಜಾಪ್ರಭುತ್ವ ಆಗಿದೆ ಎಂದರು.

ಯಡಿಯೂರಪ್ಪ ಈಶ್ವರಪ್ಪಗೆ ಏನೂ ಹೇಳಲು ಸಾಧ್ಯವಿಲ್ಲ:
ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಪತ್ರದ ಬಗ್ಗೆ ಇಲ್ಲಿ ಚರ್ಚೆ ಮಾಡಲ್ಲ, ನನ್ನ ಗಮನಕ್ಕೆ ತಂದಿದ್ದರು, ನಾನು ಸಿಎಂ,‌ರಾಜ್ಯಾಧ್ಯಕ್ಷ, ಅರುಣ್ ಸಿಂಗ್ ಜೊತೆ ಮಾತನಾಡಿ ಎಂದಿದ್ದೇನೆ, ಪತ್ರ ಇನ್ನು ನನ್ನ ಕೈ ಸೇರಿಲ್ಲ, ನಾನು ಊರಲ್ಲಿ ಇರಲಿಲ್ಲ, ಎಲ್ಲಿಗೆ ಪತ್ರ ಬಂದಿದೆಯೋ ಗೊತ್ತಿಲ್ಲ, ಇಲ್ಲಿಗಂತೂ ಬಂದಿಲ್ಲ ಊರಿಗೆ ಹೋಗಿದೆಯಾ ಗೊತ್ತಿಲ್ಲ, ಈ ವಿಷಯ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ, ಯಡಿಯೂರಪ್ಪ ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷ ಆಗಿದ್ದ ವೇಳೆ ನಾನು ಬೂತ್ ಅಧ್ಯಕ್ಷನಾಗಿದ್ದೆ ಹಾಗಾಗಿ ನಾನು ಅವರಿಬ್ಬರಿಗೂ ಏನೂ ಹೇಳಲು ಸಾಧ್ಯವಿಲ್ಲ ಆದರೆ ಎಲ್ಲಿ ಮಾತನಾಡಬೇಕೋ ಮಾತನಾಡುತ್ತೇನೆ ಎಂದರು.

Follow Us:
Download App:
  • android
  • ios