Vijayapura: ವಿಶ್ವವಿಖ್ಯಾತ ಗೋಳಗುಮ್ಮಟದಲ್ಲಿ ಜೈ ಶ್ರೀರಾಮ್‌ ಘೋಷಣೆ: ಶುರುವಾದ ಹೊಸ ವಿವಾದ

ಗೋಳಗುಮ್ಮಟ ವೀಕ್ಷಣೆಗೆ ಬಂದಿದ್ದ ಕೆಲ ಹಿಂದೂ ಸಂಘಟನೆಯೊಂದರ ಯುವಕ-ಯುವತಿಯರು ಗೋಳಗುಮ್ಮಟದ ಒಳಗೆ ಜೈ ಶ್ರೀರಾಮ್‌ ಸೇರಿದಂತೆ ಕೆಲ ಪ್ರಚೋದನಕಾರಿ ಘೋಷಣೆಗಳನ್ನ ಕೂಗಿದ್ದು ವಿವಾದಕ್ಕೆ ಕಿಚ್ಚು ಹಚ್ಚಿದೆ. 

Jai Shri Ram Slogan By Youths At Historical Monument Gol Gumbaz in Vijayapura gvd

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ‌ ನ್ಯೂಸ್

ವಿಜಯಪುರ (ಮೇ.07): ವಿಜಯಪುರದ (Vijayapura) ವಿಶ್ವ ವಿಖ್ಯಾತ ಗೋಳಗುಮ್ಮಟ (Gol Gumbaz) ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಗೋಳಗುಮ್ಮಟ ವೀಕ್ಷಣೆಗೆ ಬಂದಿದ್ದ ಕೆಲ ಹಿಂದೂ ಸಂಘಟನೆಯೊಂದರ ಯುವಕ-ಯುವತಿಯರು ಗೋಳಗುಮ್ಮಟದ ಒಳಗೆ ಜೈ ಶ್ರೀರಾಮ್‌ (Jai Shri Ram) ಸೇರಿದಂತೆ ಕೆಲ ಪ್ರಚೋದನಕಾರಿ ಘೋಷಣೆಗಳನ್ನ (Slogan) ಕೂಗಿದ್ದು ವಿವಾದಕ್ಕೆ ಕಿಚ್ಚು ಹಚ್ಚಿದೆ. ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ಅಧೀನದಲ್ಲಿರುವ ಪ್ರವಾಸಿ ತಾಣ ಗೋಳಗುಮ್ಮಟದಲ್ಲಿ ಜೈಶ್ರೀರಾಮ್‌ ಕೂಗಿದರೇ ತಪ್ಪೇನು? ಸೇರಿದಂತೆ ಪರ-ವಿರೋಧ ಮಾತುಗಳು ಕೇಳಿ ಬರ್ತಿವೆ..

ವಿಶ್ವ ವಿಖ್ಯಾತ ಗೋಳಗುಮ್ಮಟದಲ್ಲಿ ಜೈಶ್ರೀರಾಮ್‌: ಕೆಲ ದಿನಗಳ ಹಿಂದೆ ಪ್ರವಾಸಕ್ಕೆ ಬಂದ ಕೆಲ ಯುವಕ-ಯುವತಿಯರು ಗೋಳಗುಮ್ಮಟದ ಒಳಗೆ ಆದಿಲ್‌ ಶಾಹಿ ಸುಲ್ತಾನನ ಸಮಾದಿಯ ಬಳಿಯಲ್ಲೆ ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ. ಅಷ್ಟೆ ಅಲ್ಲ "ಕಟ್ಟಿದೇವು.. ಕಟ್ಟಿದೇವು.. ರಾಮ ಮಂದಿರ ಕಟ್ಟಿದೇವು" ಎಂದು ಘೋಷಣೆ ಕೂಗಿದ್ದಾರೆ. ಬಳಿಕ ಇದನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದಾರೆ.

ಮೌಲ್ಯಾಧಾರಿತ ರಾಜಕಾರಣಿ, ವಿಜಯಪುರದ ಮೊದಲ ಸಂಸದ ರಾಮಪ್ಪ ಬಿದರಿ ಗ್ರಂಥ ಬಿಡುಗಡೆ!

ವಿವಾದ ಹುಟ್ಟಿಸಿದ ವೈರಲ್‌ ವಿಡಿಯೋ: ಪ್ರವಾಸಕ್ಕೆ ಬಂದವರು ತಮ್ಮ ಸ್ವಾಭಿಮಾನದಿಂದ ಕೂಗಿದ್ದರೇ ಇಷ್ಟೊಂದು ವಿವಾದ ವಾಗ್ತಿರಲಿಲ್ಲವೋ ಏನೋ, ಆದ್ರೆ ವೈರಲ್‌ ಆಗಿರೋ ವಿಡಿಯೋ ಮೇಲೆ RRP ಎಂದು ಬರೆಯಲಾಗಿದೆ. ಅಲ್ಲದೆ ವಿಡಿಯೋವನ್ನ ಅಪ್ಲೋಡ್‌ ಮಾಡುವ ವೇಳೆ ಮೇಲೆ ಕ್ಯಾಪ್ಶನ್‌ನಲ್ಲಿ "ಮಹಮ್ಮದ್‌ ಆದೀಲ್‌ ಷಾ ಬಿಜಾಪುರದಲ್ಲಿ ಕಟ್ಟಿಸಿದ ಗೋಲ್‌ ಗುಂಬಜ್‌ನಲ್ಲಿ ಹಿಂದೂ ಸಿಂಹಿಣಿಯರಿಂದ ಜೈ ಶ್ರೀರಾಮ್‌ ಘೋಷಣೆ. ಗಂಡಾಗಿ ಹುಟ್ಟಿ ತನ್ನ ಮಾತೃಧರ್ಮದ ಪರ ಸ್ವಲ್ಪವು ಕಾಳಜಿ ತೋರದವ ನಡುವೆ ದುರ್ಗೆಯಂತೆ ಧರ್ಮ ರಕ್ಷಣೆಗೆ ನಿಂತಿರುವ ನಮ್ಮ ಲ್ಲಾ ಸಹೋದರಿಯರಿಗೆ ಅನಂತ ಅನಂತ ಧನ್ಯವಾದಗಳು"- ಪೂರ್ಣಿಮಾ ಬರಿಮನಿ, ಸ್ವಾತಿ ಕದಂ. ಹೀಗೆ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆಯಲಾಗಿದೆ. ಹೀಗಾಗಿ ಇದೊಂದು ಉದ್ದೇಶ ಪೂರ್ವಕವಾಗಿಯೇ ಮಾಡಲಾದ ವಿಡಿಯೋ. ಗೋಳಗುಮ್ಮಟದಲ್ಲಿ ಜೈಶ್ರೀರಾಮ್‌ ಸೇರಿ ಕೆಲ ಘೋಷಣೆಗಳನ್ನ ಕೂಗಿ ದುರುದ್ದೇಶದಿಂದ ವಿಡಿಯೋ ವೈರಲ್‌ ಮಾಡಲಾಗಿದೆ ಎನ್ನುವ ಅಪಸ್ವರವು ಕೇಳಿ ಬಂದಿದೆ.

ಯಾವುದೀ RRP ಸಂಘಟನೆ?: ಇನ್ನು ವೈರಲ್‌ ಆಗಿರೋ ವಿಡಿಯೋ ಮೇಲೆ RRP ಎಂದು ಬರೆಯಲಾಗಿದೆ. RRP ಎಂದರೇ ರಾಷ್ಟ್ರ ರಕ್ಷಣೆ ಪಡೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಪರ ಹೋರಾಟದ ಮೂಲಕ ಸದಾ ಸುದ್ದಿಯಲ್ಲಿರೋ ಪುನೀತ್‌ ಕೆರೆಹಳ್ಳಿಯ ಸಂಘಟನೆ ಎನ್ನಲಾಗ್ತಿದೆ. ಇದೆ ಸಂಘಟನೆಗೆ ಸೇರಿದ ಬೆಳಗಾವಿ ಮೂಲದ ಯುವತಿಯರು ಈ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಏಪ್ರಿಲ್‌ 25 ರಂದು ವಿಡಿಯೋ ಅಪ್ಲೋಡ್: ಈ ವಿವಾದಿತ ವಿಡಿಯೋವನ್ನ ಕಳೆದ ಏಪ್ರಿಲ್‌ 24ರಂದು ಪುನೀತ್‌ ಕೆರೆಹಳ್ಳಿ ತಮ್ಮ ಪೇಸ್ಬುಕ್‌ ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಬಳಿಕ ಅದನ್ನ ಉಗ್ರ ನರಸಿಂಹ ಎನ್ನುವ ಪೇಸ್ಬುಕ್‌ ನಿಂದ ಹಂಚಿಕೊಳ್ಳಲಾಗಿದೆ. ಲಕ್ಷ-ಲಕ್ಷ ಜನ ವೀಕ್ಷಣೆಯನ್ನು ಮಾಡಿದ್ದಾರೆ. ನೂರಾರು ಜನರು ಶೇರ್ ಕೂಡ ಮಾಡಿದ್ದಾರೆ. ಸ್ವತಃ ಪುನೀತ್‌ ಕೆರೆಹಳ್ಳಿ ಅಪ್ಲೋಡ್‌ ಮಾಡಿರೋ ವಿಡಿಯೋ ಕ್ಯಾಪ್ಶನ್‌ ನಲ್ಲಿ ಪುನೀತ್‌ ಕೆರೆಹಳ್ಳಿ ಹಿಂದೂ ಸಿಂಹಿಣಿಯರಾದ ಪೂರ್ಣಿಮಾ ಬರಿಮನಿ, ಸ್ವಾತಿ ಕದಂಗೆ ಧನ್ಯವಾದವನ್ನು ಹೇಳಿದ್ದಾರೆ.

ಈ ವಿಡಿಯೋ ವಿವಾದ ಸೃಷ್ಠಿಸಿದ್ದು ಯಾಕೆ?: ಗೋಳಗುಮ್ಮಟ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಗೆ ಸೇರಿದ ಸ್ಮಾರಕ. ಗೋಳಗುಮ್ಮಟ ವೀಕ್ಷಣೆಗೆ ಬಂದವರು ತಮ್ಮ ಮನಸ್ಸಿಗೆ ಬಂದ ಹೆಸರುಗಳನ್ನ ಕೂಗಿ ಪ್ರತಿಧ್ವನಿಯನ್ನ ಎಂಜಾಯ್‌ ಮಾಡ್ತಾರೆ. ಗೈಡ್‌ಗಳು ಸಹ ಓಂ ಶಬ್ಧವನ್ನ ಉಚ್ಛರಿಸಿ ಇಲ್ಲಿನ ಪ್ರತಿಧ್ವನಿ ಹೇಗೆ ಬರುತ್ತೆ ಎನ್ನುವುದನ್ನ ವಿವರಿಸೋದು ಉಂಟು. ಆಯಾ ಧರ್ಮಗಳ, ಜಾತಿ-ಸಮುದಾಯದ ಜನರು ಬಂದಾಗ ಸ್ವಾಭಿಮಾನದಿಂದ ದೇವರುಗಳು, ಮಹಾತ್ಮರ ಹೆಸರುಗಳನ್ನ ಕೂಗೋದು ಉಂಟು. ಆದ್ರೆ ಅದ್ಯಾವುದು ವಿವಾದ ಸೃಷ್ಟಿಸಿರಲಿಲ್ಲ. ಆದ್ರೆ ಈ ವಿಡಿಯೋ ವೀಕ್ಷಿಸಿದ ಕೆಲ ಮುಸ್ಲಿಂ ಮುಖಂಡರು ಯಾರು ಏನು ಬೇಕಾದ್ರು ಕೂಗಲಿ ನಮ್ಮ ವಿರೋಧವಿಲ್ಲ. ಆದ್ರೆ ಇಲ್ಲಿ ಉದ್ದೇಶಪೂರ್ವಕವಾಗಿ, ವಿವಾದ ಸೃಷ್ಟಿಸುವ ಸಲುವಾಗಿಯೇ ಹೀಗೆ ಮಾಡಿದ್ದಾರೆ ಎಂದು ಅಸಮಧಾನ ಹೊರಹಾಕ್ತಿದ್ದಾರೆ.

Vijayapura ಆದಿಲ್‌ ಶಾಹಿಗಳ ದಾಳಿ ನಲುಗಿದ್ದ ಪುರಾತನ  ಶಿವನ ದೇಗುಲಕ್ಕೆ ಪುನರುಜ್ಜೀವನ

ವಿವಾದಕ್ಕೆ ಪಂಚಮಸಾಲಿ ಜಗದ್ಗುರುಗಳ ಪ್ರತಿಕ್ರಿಯೆ: ಈ ಸಂಬಂಧ ಏಷ್ಯಾನೆಟ್‌ ಸುವರ್ಣ ನ್ಯೂಸ್.ಕಾಮ್‌ ಜೊತೆಗೆ ಮಾತನಾಡಿರುವ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಶ್ರೀಗಳು ಯಾವುದೇ ಧರ್ಮದ ಜನರಿಗೆ ನೋವಾಗುವ ರೀತಿಗಳಲ್ಲಿ ಘೋಷಣೆ ಕೂಗುವುದು ತಪ್ಪು. ಗೋಳಗುಮ್ಮಟದಂತ ಸ್ಥಳಗಳಲ್ಲಿ ಮಹಾತ್ಮರ ಹೆಸ್ರು, ಘೋಷಣೆ ಕೂವುಗುದು ಸಹಜ. ಆದ್ರೆ ಅದು ಭಕ್ತಿ ಭಾವಗಳಿಂದ ಇರಬೇಕೆ ಹೊರತು, ದ್ವೇಷಪೂರಿತವಾಗಿ ಇರಬಾರದು ಎಂದಿದ್ದಾರೆ.

Latest Videos
Follow Us:
Download App:
  • android
  • ios