ಸ್ವಾತಂತ್ರ್ಯ ಪೂರ್ವದಲ್ಲಿ ಔಧ್ ಪ್ರಾಂತದ ಪ್ರಧಾನಿ, ಸ್ವಾತಂತ್ರ್ಯ ನಂತರ ಸಂಸತ್ ಸದಸ್ಯರಾಗಿ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸಿದ ರಾಮಪ್ಪ ಬಿದರಿ ರಾಜಕಾರಣ ಇಂದಿನ ರಾಜಕಾರಣಿಗಳಿಗೆ ಸ್ಪೂರ್ತಿ ಆಗಿದೆ. ಅಂತಹ ಮೌಲ್ಯಾಧಾರಿತ ರಾಜಕಾರಣಿಯ ಕುರಿತಾದ ಗ್ರಂಥ ಲೋಕಾರ್ಪಣೆ ವಿಜಯಪುರ ಜಿಲ್ಲೆಯಲ್ಲಿ ನಡೆಯಿತು.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮೇ.06): ಈಗಿನ ರಾಜಕಾರಣದಲ್ಲಿ (Politics) ಮೌಲ್ಯಾಧಾರಿತ ರಾಜಕಾರಣಿಗಳು (Politicians) ಸಿಗೋದು ಅಪರೂಪ. ಸ್ವಾತಂತ್ರ್ಯ ಪೂರ್ವದಲ್ಲಿ ಔಧ್ ಪ್ರಾಂತದ ಪ್ರಧಾನಿ, ಸ್ವಾತಂತ್ರ್ಯ ನಂತರ ಸಂಸತ್ ಸದಸ್ಯರಾಗಿ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸಿದ ರಾಮಪ್ಪ ಬಿದರಿ (Ramappa Bidari) ರಾಜಕಾರಣ ಇಂದಿನ ರಾಜಕಾರಣಿಗಳಿಗೆ ಸ್ಪೂರ್ತಿ ಆಗಿದೆ. ಅಂತಹ ಮೌಲ್ಯಾಧಾರಿತ ರಾಜಕಾರಣಿಯ ಕುರಿತಾದ ಗ್ರಂಥ (Book) ಲೋಕಾರ್ಪಣೆ ವಿಜಯಪುರ (Vijayapura) ಜಿಲ್ಲೆಯಲ್ಲಿ ಪಾಲ್ಗೊಂಡ ರಾಜಕೀಯ ನಾಯಕರು ಅವರ ಗುಣಗಾನ ಮಾಡಿದರು.
ಮೌಲ್ಯಾಧಾರಿತ ರಾಜಕಾರಣಿ ರಾಮಪ್ಪ ಬಿದರಿ: ಹೌದು! ವಿಜಯಪುರ ಜಿಲ್ಲೆಯ ಹೊನಗನಹಳ್ಳಿಯ ಕರ್ಮಭೂಮಿ ಆಗಿಸಿಕೊಂಡಿದ್ದ ರಾಮಪ್ಪ ಬಿದರಿ, ಮಹಾತ್ಮ ಗಾಂಧೀಜಿಯವರ ಪ್ರೇರಣೆಯಿಂದ ರಾಜಕಾರಣಕ್ಕೆ ಧುಮುಕಿದವರು. ಔಧ್ ಪ್ರಾಂತದ ಪ್ರಧಾನಿಯಾಗಿ ಜನಪರ ಆಡಳಿತ, ವಿಶೇಷ ಕಾನೂನು ಮೂಲಕ ಜನಕಲ್ಯಾಣ ಮಾಡಿದರು. ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿಸಿಕೊಂಡಿದರು. ಈ ಮೂಲಕ ಮೌಲ್ಯಾಧಾರಿತ ರಾಜಕಾರಣಿ, ಅಪರೂಪದ ರಾಜಕಾರಣಿ ಅಂತಾ ಕರೆಯಿಸಿಕೊಂಡಿದ್ದರು.
ಬೊಮ್ಮಾಯಿ ಸಿಎಂ ಸ್ಥಾನ ಬಿಟ್ಟುಕೊಡಬೇಕಂತೆ ಈ ಭೂಪನಿಗೆ: ಈತನ ಡಿಮ್ಯಾಂಡ್‌ಗೆ ತಬ್ಬಿಬ್ಬಾದ ಪತ್ರಕರ್ತರು..!
ಬಿದರಿಯವರ ರಾಜಕೀಯ ಮೌಲ್ಯಗಳ ಗ್ರಂಥ ಬಿಡುಗಡೆ: ಇಂಥಹ ವಿಶೇಷ, ವಿಶಿಷ್ಟ ಮೌಲ್ಯಾಧಾರಿತ ರಾಜಕಾರಣಿಯ ಕುರಿತಾಗಿ ಬರೆದ ಗ್ರಂಥ ಬಿಡುಗಡೆ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿ ನಡೆಯಿತು. ಕೋಲಾರದ ಕೃಷ್ಣಾ ಕುಲಕರ್ಣಿಯವರು ರಾಮಪ್ಪ ಬಿದರಿಯವರ ಬಗ್ಗೆ ಗ್ರಂಥ ಬರೆದಿದ್ದು, ಅವರ ಮೌಲ್ಯಾಧಾರಿತ ರಾಜಕಾರಣ, ಜನಸೇವೆ ತೆರೆದಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಗೋವಿಂದ ಕಾರಜೋಳ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ ಗ್ರಂಥ ಬಿಡುಗಡೆ ಮಾಡಿದರು. ಮಾಜಿ ಸಚಿವ ಎಚ್ ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಬಿದರಿಯವರ ಜನಸೇವೆ ಕೊಂಡಾಡಿದ ಸಚಿವ ಕಾರಜೋಳ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ರಾಮಪ್ಪ ಬಿದರಿ ಮೌಲ್ಯಾಧಾರಿತ,ಅವರ ಜನಸೇವೆ ಮೆಲುಕು ಹಾಕಿದರು. ಅವರು ಮಾಡಿದ ಮೌಲ್ಯಾಧಾರಿತ ರಾಜಕಾರಣವನ್ನ ಕೊಂಡಾಡಿದರು. ರಾಮಪ್ಪ ಬಿದರಿಯವರ ಕಾರ್ಯ ಇಂದಿನ ರಾಜಕಾರಣಿಗಳಿಗೆ ಸ್ಪೂರ್ತಿಎಂದರು.
ಎಂ ಬಿ ಪಾಟೀಲರ ಪತ್ನಿ ಆಶಾ ಅವರ ಅಜ್ಜ ರಾಮಪ್ಪ ಬಿದರಿ: ರಾಮಪ್ಪ ಬಿದರಿ ಅವರು ಮಾಜಿ ಸಚಿವ ಎಂಬಿ ಪಾಟೀಲ್ ಪತ್ನಿ ಆಶಾ ಪಾಟೀಲ್ ಅವರ ಅಜ್ಜ. ಹೀಗಾಗಿ ಗ್ರಂಥ ಬಿಡುಗಡೆ ಕಾರ್ಯಕ್ರಮದ ಉಸ್ತುವಾರಿ ಆಶಾ ಪಾಟೀಲ್ ಅವರೆ ವಹಿಸಿಕೊಂಡಿದರು. ಹೊನಗನಹಳ್ಳಿ ಗ್ರಾಮಸ್ಥರು ಎಂಬಿ ಪಾಟೀಲ್, ಹಾಗೂ ಆಶಾ ಪಾಟೀಲ್ ಸನ್ಮಾನಿಸಲು ಮುಂದಾದಾಗ ಮೊದಲು ಎಂಬಿ ಪಾಟೀಲ್ ನಿರಾಕರಿಸಿದರು. ಕೊನೆಗೆ ಸನ್ಮಾನದ ವೇಳೆ ಎಚ್ ಕೆ ಪಾಟೀಲ್ ಮಧ್ಯಸ್ಥಿಕೆಯಲ್ಲಿ ಆಶಾ ಪಾಟೀಲ್, ಎಂಬಿ ಪಾಟೀಲ್ ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡಿದ್ದು ವಿಶೇಷವಾಗಿತ್ತು.
ಅಂದು ದೇಶದಲ್ಲೆ ಅತಿ ಹೆಚ್ಚು ಮತ ಪಡೆದವರಲ್ಲಿ ದ್ವೀತಿಯರು ಬಿದರಿ: ಸ್ವಾತಂತ್ರ್ಯ ಬಳಿಕ ರಾಮಪ್ಪ ಬಿದರಿ ಬಾಗಲಕೋಟೆ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ದೇಶದಲ್ಲೇ ಅತೀ ಹೆಚ್ಚು ಮತಪಡೆದು ಜಯಗಳಿಸಿದವರಲ್ಲಿ ಎರಡನೆಯವರಾಗಿದ್ದರು. ಔಧ್ ಪ್ರಾಂತದಲ್ಲಿ ಜನಪರ ಕಾನೂನು ಜಾರಿಗೆ ತಂದಾಗ ತಿರಸ್ಕರಿಸಿದ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಹೊನಗನಹಳ್ಳಿಗೆ ಬಂದು ನೆಲೆಸಿದ್ದರು. ಎರಡುಬಾರಿ ಲೋಕಸಭೆ ಸದಸ್ಯರಾಗಿ ರಾಮಪ್ಪ ಬಿದರಿ ಜನಸೇವೆ ಮಾಡಿದ್ದು, ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದಿಂದ ಚುನಾವಣಾ ರಾಜಕಾರಣದಿಂದ ದೂರ ಸರಿದಾಗ ಸ್ವತಃ ಪ್ರಧಾನಿಗಳು ಸ್ಪರ್ಧಿಸುವಂತೆ ಕೋರಿದರು, ಆ ವೇಳೆ ಸ್ಪರ್ಧೆ ನಿರಾಕರಿಸಿದರಂತೆ ಮೌಲ್ಯಾಧಾರಿತ ರಾಜಕಾರಣಿ.
Basava Jayanti 2022: ಬಸವನ ಬಾಗೇವಾಡಿಯಲ್ಲಿ ಮೂರು ದಿನಗಳ ಕಾಲ ಬಸವ ಜಯಂತಿ ಆಚರಣೆ!
ರಾಮಪ್ಪ ಬಿದರಿ ಅಧ್ಯಯನ ಕೇಂದ್ರ ತೆರೆಯಲು ಹೆಚ್.ಕೆ ಪಾಟೀಲ್ ಸಲಹೆ: ರಾಮಪ್ಪ ಬಿದರಿಯವರ ರಾಜಕೀಯ ಮುತ್ಸದ್ದಿತನದ ಕುರಿತಾಗಿ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ ಬಿದರಿಯವರು ನಮ್ಮೊಂದಿಗೆ ಇರದಿದ್ದರೂ ಅವರ ಮೌಲ್ಯಾಧಾರಿತ ರಾಜಕಾರಣ, ಜನಸೇವೆ ನಿಮ್ಮೊಂದಿಗಿದೆ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ. ಗದಗದಲ್ಲಿರೋ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿವಿಯಲ್ಲಿ ರಾಮಪ್ಪ ಬಿದರಿ ಅಧ್ಯಯನ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಮಾಜಿ ಸಚಿವ ಎಚ್ ಕೆ ಪಾಟೀಲ್ ಸಲಹೆ ನೀಡಿದರು.
ಇಂದಿನ ರಾಜಕಾರಣಿಗಳಿಗೆ ಬಿದರಿಯವರು ಮಾದರಿ: ಇಂದಿನ ರಾಜಕಾರಣಿಗಳಿಗೆ ರಾಮಪ್ಪ ಬಿದರಿಯವರ ಮೌಲ್ಯಾಧಾರಿತ ರಾಜಕಾರಣ ಮಾದರಿಯಾಗಿದೆ. ಈಗೀನ ಕಾಲದಲ್ಲಿ ಇಂಥಹ ಮೌಲ್ಯಯುತ ರಾಜಕಾರಣ ಮಾಡುವ ರಾಜಕಾರಣಿಗಳೆ ವಿರಳ. ಈಗೀರುವ ರಾಜಕಾರಣಿಗಳು ಬಿದರಿಯವರ ಮೌಲ್ಯಗಳಲ್ಲಿ ಕನಿಷ್ಠ ಶೇಕಡಾ 1ರಷ್ಟನ್ನಾದರು ಅಳವಡಿಸಿಕೊಳ್ಳಬೇಕಿದೆ. ಒಟ್ಟಿನಲ್ಲಿ ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ಶ್ರೇಯಸ್ಸು ರಾಮಪ್ಪ ಬಿದರಿಯವರಿಗೂ ಸಲ್ಲುತ್ತದೆ.
