* ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಯಬಿಟ್ಟಿದ್ದ ಸುಳ್ಳು ವಿಡಿಯೋ* ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಜೈ ಶ್ರೀರಾಮ್- ಅಲ್ಲಾಹು ಅಕ್ಬರ್ ಘೋಷಣೆ * ಫೇಕ್ ವಿಡಿಯೋ ಬಗ್ಗೆ ಪೊಲೀಸರಿಗೆ ದೂರು ನೀಡಿದ ಕಾಲೇಜು ಆಡಳಿತ ಮಂಡಳಿ
ಮಂಗಳೂರು(ಫೆ.16): ವಿದ್ಯಾರ್ಥಿಗಳ ನಡುವೆ ಹಿಜಾಬ್- ಕೇಸರಿ(Hijab-Saffron) ಶಾಲು ಸಂಘರ್ಷ ಮಂಗಳೂರಲ್ಲೂ ನಡೆದಿದೆ ಎನ್ನುವ ಸುಳ್ಳು ವಿಡಿಯೊವನ್ನು ಕಿಡಿಗೇಡಿಗಳು ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಶಾಂತಿ ಕದಡಲು ಯತ್ನಿಸಿದ್ದಾರೆ.
ಬೇರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಜೈ ಶ್ರೀರಾಮ್- ಅಲ್ಲಾಹು ಅಕ್ಬರ್(Jai Shiram-Allahu Akbar) ಘೋಷಣೆಯ ವಿಡಿಯೊವನ್ನು ಜಾಲತಾಣದಲ್ಲಿ(Social Media) ಹರಿಯಬಿಟ್ಟ ಕಿಡಿಗೇಡಿಗಳು, ಮಂಗಳೂರಿನ(Mangaluru) ಪ್ರತಿಷ್ಠಿತ ಸೈಂಟ್ ಅಲೋಶಿಯಸ್ ಹಾಗೂ ಇತರ ಕಾಲೇಜುಗಳಲ್ಲಿ ನಡೆದಿದೆ ಎಂದು ಸುಳ್ಳು ವದಂತಿ ಹರಡಿಸಲು ಯತ್ನಿಸಿದ್ದಾರೆ. ಫೇಕ್ ವಿಡಿಯೋ ಬಗ್ಗೆ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ(Police) ದೂರು ನೀಡಿದೆ.
Hijab Row ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ರೂ. ಕೊಟ್ಟ ಜೆಡಿಎಸ್ ನಾಯಕ
ಈ ಕುರಿತು ಸ್ಪಷ್ಟನೆ ನೀಡಿರುವ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್(N Shashikumar), ಯಾವುದೋ ವಿಡಿಯೊ ಮುಂದಿಟ್ಟು ಮಂಗಳೂರಿನಲ್ಲಿ ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿಗಳ(Students) ನಡುವೆ ಸಂಘರ್ಷ ನಡೆದಿದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡಿಸಿದ್ದಾರೆ. ಆದರೆ ಅಂತಹ ಯಾವುದೇ ಘಟನೆ ಮಂಗಳೂರಿನಲ್ಲಿ ನಡೆದಿಲ್ಲ ಎಂದಿದ್ದಾರೆ.
ಹಿಜಾಬ್ ವಿಚಾರದ ಬಗ್ಗೆ ಮಂಗಳೂರಿನ ಜನತೆ ಶಾಂತಿ ಕಾಪಾಡುವಲ್ಲಿ ಸಹಕರಿಸಿದ್ದು, ಮುಂದೆಯೂ ಸಹಕಾರ ನೀಡುತ್ತಾರೆ ಎಂಬ ಭರವಸೆಯಿದೆ. ಯಾವುದೇ ಸಂದರ್ಭದಲ್ಲೂ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ರಾಜ್ಯದ(Karnataka) ಬಹುತೇಕ ಜಿಲ್ಲೆಗಳಲ್ಲಿ ಹಿಜಾಬ್-ಕೇಸರಿ ಸಂಘರ್ಷವಿದ್ದರೂ ಮಂಗಳೂರಿನಲ್ಲಿ ಮಾತ್ರ ಇದುವರೆಗೂ ಈ ವಿವಾದ(Controversy) ಕಂಡುಬಂದಿಲ್ಲ. ಪಕ್ಕದ ಉಡುಪಿಯಲ್ಲಿ ಸಂಘರ್ಷ ಆರಂಭವಾದ್ರೂ ಮಂಗಳೂರು ಈ ನಿಟ್ಟಿನಲ್ಲಿ ಶಾಂತವಾಗಿದೆ.
ಹಿಜಾಬ್ ವಿವಾದ: ಪಾಲಕರು, ಮಾಧ್ಯಮದವರ ಮಧ್ಯೆ ವಾಗ್ವಾದ
ಕೊಪ್ಪಳ(Koppal): ಯಾವುದೇ ಧಾರ್ಮಿಕ ಉಡುಗೆ ತೊಟ್ಟು ಬರುವಂತಿಲ್ಲ ಎಂಬ ನ್ಯಾಯಾಲಯದ(Court) ಮಧ್ಯಂತರ ಆದೇಶದ ನಡುವೆಯೂ ಜಿಲ್ಲೆಯಲ್ಲಿ ಅಲ್ಲಲ್ಲಿ ಶಾಲೆಗಳಲ್ಲಿ ಹಿಜಾಬ್ ಧರಿಸಿಯೇ ಆಗಮಿಸಿರುವುದು ಕಂಡು ಬಂತು. ನಗರದ ಉರ್ದು ಮತ್ತು ಮೌಲಾನಾ ಆಜಾದ್ ಶಾಲೆಯಲ್ಲಿ ಈ ಕುರಿತು ವರದಿ ಮಾಡಲು ಹೋದ ಮಾಧ್ಯಮದವರಿಗೆ ಪಾಲಕರು ಅಡ್ಡಿಪಡಿಸಿ, ಆಕ್ರೋಶ ವ್ಯಕ್ತಪಡಿಸಿ ಹೊರ ಕಳುಹಿಸಿದ ಪ್ರಸಂಗ ಮಂಗಳವಾರ ನಡೆಯಿತು.
ಆದರೆ ಅಧಿಕಾರಿಗಳು ಮಾತ್ರ ಶಾಲೆಗೆ(School) ಹಿಜಾಬ್ ಧರಿಸಿ ಬರುತ್ತಿದ್ದಾರೆ. ತರಗತಿಗೆ ಹೋಗುವಾಗ ಅದನ್ನು ತೆಗೆಯುತ್ತಾರೆ. ಎಲ್ಲಿಯೂ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಆವಕಾಶ ಕಲ್ಪಿಸಿಲ್ಲ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ.
ನಗರದ ಉರ್ದು ಶಾಲೆ ಮತ್ತು ಮೌಲಾನಾ ಆಜಾದ್ ಶಾಲೆಯಲ್ಲಿ ಎರಡನೇ ದಿನವೂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುತ್ತಿದ್ದರು. ಇದನ್ನು ವರದಿ ಮಾಡಲು ವರದಿಗಾರರು ತೆರಳಿದ್ದರು. ಕೆಲ ಪಾಲಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ. ಚಿತ್ರೀಕರಣ ಮಾಡುವುದು, ಫೋಟೋ ತೆಗೆಯುವುದು ತಪ್ಪಾಗುತ್ತದೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲವಾದ್ದರಿಂದ ಅವರನ್ನು ಹೊರ ಕಳುಹಿಸುವಂತೆ ಪಟ್ಟು ಹಿಡಿದರು. ವರದಿಗಾರರು, ಪೊಲೀಸರು, ಅಧಿಕಾರಿಗಳು ತಿಳಿ ಹೇಳಿದರೂ ಪಾಲಕರು ಕೇಳಲಿಲ್ಲ. ನ್ಯಾಯಾಲಯದ ಆದೇಶದಂತೆ ಶಾಲೆಯೊಳಗೆ ಚಿತ್ರೀಕರಣ ಮಾಡುವಂತಿಲ್ಲ. ಏನೇ ಮಾಹಿತಿ ಬೇಕಿದ್ದರೂ ಶಾಲೆ ಮುಖ್ಯಾಧ್ಯಾಪಕರನ್ನು ಕೇಳುವಂತೆ ತಾಕೀತು ಮಾಡಿದರು. ಯಾವುದೇ ವಿದ್ಯಾರ್ಥಿಗಳನ್ನು, ಪಾಲಕರನ್ನು ಮಾತನಾಡಿಸಲು ಸಹ ಅವಕಾಶ ನೀಡಲಿಲ್ಲ.
Hijab Row: ಶ್ರೀರಾಮನ ಹೆಸರಲ್ಲಿ ಹೆದರಿಸಿದ್ದು ತಪ್ಪು: ಅಲ್ಲಾಹು ಅಕ್ಬರ್ ಎಂದ ಮುಸ್ಕಾನ್‌ಗೆ RSS ಸಮರ್ಥನೆ!
ಈ ವೇಳೆ ಮಾಧ್ಯಮದವರು ಮತ್ತು ಪಾಲಕರ ನಡುವೆ ವಾಗ್ವಾದವಾಯಿತು. ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದ ಕ್ಯಾಮರಾಮೆನ್‌ಗಳನ್ನು ತಳ್ಳಾಡಿದ ಘಟನೆಯೂ ನಡೆಯಿತು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅಮರೇಶ ಬಿರಾದರ, ಬಿಇಒ ಉಮೇಶ ಪೂಜಾರ ಹಾಗೂ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದರು. ಅನಿವಾರ್ಯವಾಗಿ ವರದಿಗಾರರು ವಾಪಸ್ ಬರಬೇಕಾಯಿತು.
ಕ್ಲಾಸಿನಲ್ಲಿ ಹಿಜಾಬ್ ಧರಿಸಿಲ್ಲ: ಸ್ಪಷ್ಟನೆ
ಶಾಲಾ ಮೈದಾನಕ್ಕೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರೂ ಶಾಲಾ ಕೊಠಡಿಯೊಳಗೆ ಎಲ್ಲ ವಿದ್ಯಾರ್ಥಿಗಳು ಹಿಜಾಬ್ ತೆಗೆದಿರಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ತಿಳಿಸಿದ್ದಾರೆ. ಕೋರ್ಟ್ ಆದೇಶವನ್ನು ಪಾಲನೆ ಮಾಡಲು ಶಾಲಾ ಕೊಠಡಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ. ಹೀಗಾಗಿ, ನಮ್ಮಲ್ಲಿ ಎಲ್ಲಿಯೂ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಟ್ಟೆಚ್ಚರ:
ಜಿಲ್ಲೆಯಲ್ಲಿ ಫೆ. 16 ರಿಂದ ಕಾಲೇಜುಗಳು ಪ್ರಾರಂಭವಾಗುತ್ತಿರುವುದರಿಂದ ಕೇಸರಿ- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಂಡು ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾದ್ಯಂತ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಕ್ರಮ ವಹಿಸಲಾಗಿದೆ. ಆದರೆ, ಎಲ್ಲೆಲ್ಲಿ ಎಷ್ಟು ಸಿಬ್ಬಂದಿ ನಿಯೋಜನೆ ಎನ್ನುವ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡಿಲ್ಲ.
ಅವಶ್ಯವಿರುವ ಕಡೆ ನಿಷೇಧಾಜ್ಞೆ ಜಾರಿ:
ಫೆ. 16 ರಿಂದ ಕಾಲೇಜುಗಳು ಪ್ರಾರಂಭವಾಗುತ್ತಿ ರುವುದರಿಂದ ನ್ಯಾಯಾಲಯ ಆದೇಶ ಪಾಲನೆಗಾಗಿ ಅಗತ್ಯವಿರುವ ಕಡೆ ನಿಷೇದಾಜ್ಞೆ ಜಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ತಿಳಿಸಿದ್ದಾರೆ.
