ಬೆಂಗಳೂರು [ಆ.21]: ನಗರದ ಮೈಸೂರು ರಸ್ತೆ ಜಗಜೀವನ್‌ರಾಮ್‌ ನಗರದಲ್ಲಿ ಇರುವ ಬಿಬಿಎಂಪಿಯ ವಿದ್ಯುತ್‌ ಚಿತಾಗಾರವನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ನಾಲ್ಕು ತಿಂಗಳು ಸ್ಥಗಿತಗೊಳಿಸಲಾಗುತ್ತಿದೆ. 

ಚಿತಾಗಾರದ ಕಾಮಗಾರಿಗೆ 120 ದಿನ ಅವಶ್ಯಕತೆ ಇದೆ. ಹಾಗಾಗಿ, ಚಿತಾಗಾರದ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಸಹಕರಿಸಬೇಕೆಂದು ಬಿಬಿಎಂಪಿಯ ಪಶ್ಚಿಮ ವಲಯದ ಕಾರ್ಯಪಾಲ ಎಂಜಿನಿಯರ್‌ ಮನವಿ ಮಾಡಿದ್ದಾರೆ.

ಮೇಲ್ದರ್ಜೆಗೆ ಏರಿಸಿದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳಿಸಿ ಶೀಘ್ರವೇ ಆರಂಭವಾಗಲಿದೆ ಎಂದು ಹೇಳಿದ್ದಾರೆ.