ಟೊಯೋಟಾ ಕಿರ್ಲೋಸ್ಕರ್‌ ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಮುಖಂಡರ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಲಾಗಿದೆ| ಅಮಾನತುಗೊಂಡಿದ್ದ 60 ಕಾರ್ಮಿಕರನ್ನು ವಾಪಸ್‌ ಕೆಲಸಕ್ಕೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ: ಜಗದೀಶ್‌ ಶೆಟ್ಟರ್‌| 

ಬೆಂಗಳೂರು(ಮಾ.17): ಬಿಡದಿಯ ಟೊಯೋಟಾ ಕಿರ್ಲೋಸ್ಕರ್‌ ಕಂಪನಿಯಲ್ಲಿನ ಸಮಸ್ಯೆ ಬಗೆಹರಿದಿದ್ದು, ಅಮಾನತುಗೊಳಿಸಿದ್ದ ಕಾರ್ಮಿಕರನ್ನು ವಾಪಸ್‌ ಕೆಲಸಕ್ಕೆ ಪಡೆಯಲು ಸೂಚಿಸಲಾಗಿದೆ. ಆಡಳಿತ ಮಂಡಳಿ ಯಾವುದೇ ತಪ್ಪು ಎಸಗಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟೊಯೋಟಾ ಕಿರ್ಲೋಸ್ಕರ್‌ ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಮುಖಂಡರ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಲಾಗಿದೆ. ಅಮಾನತುಗೊಂಡಿದ್ದ 60 ಕಾರ್ಮಿಕರನ್ನು ವಾಪಸ್‌ ಕೆಲಸಕ್ಕೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಚಿವ ಹೆಬ್ಬಾರ್‌ ಮಧ್ಯಪ್ರವೇಶ: ಟೊಯೋಟಾ ಬಿಕ್ಕಟ್ಟು ಸುಖ್ಯಾಂತ್ಯ

ಪ್ರಕಾಶ್‌ ರಾಥೋಡ್‌ ಮಾತನಾಡಿ, ಕಂಪನಿಯಲ್ಲಿ ಕಾರ್ಮಿಕರು ವಾಪಸ್‌ ಕೆಲಸಕ್ಕೆ ಹಾಜರಾಗಿದ್ದರೂ 10 ಜನ ಮಾಡುವ ಕೆಲಸವನ್ನು 7 ಜನಕ್ಕೆ ನೀಡುತ್ತಿರುವ ಆರೋಪವಿದೆ. ಇದರಿಂದ, ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದರು.