ಮೇಲಾಧಿಕಾರಿ ಲಂಚಕ್ಕೆ ಬೇಡಿಕೆ: ಬಸ್ ಚಾಲಕ ಆತ್ಮಹತ್ಯೆಗೆ ಯತ್ನ
ಲಂಚ ಪಡೆಯಬಾರದು ಎಂದು ಎಷ್ಟೇ ಕಾನೂನು ಬಲಪಡಿಸಿದರೂ ಮೇಲಧಿಕಾರಿಗಳ ಕಾಟ ಮಾತ್ರ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂಬಂತಹ ಘಟನೆ ಮಂಡ್ಯದಲ್ಲಿ ನಡೆದಿದೆ. ವರ್ಗಾವಣೆ ಮಾಡೋದಕ್ಕೆ ಲಂಚ ಕೇಳಿದ್ರು ಅಂತ ಚಾಲಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ನಡೆದಿದೆ.
ಮಂಡ್ಯ(ಸೆ.28): ವರ್ಗಾವಣೆ ಮಾಡಲು ಮೇಲಾಧಿಕಾರಿಗಳು ಲಂಚ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ, ಹಣಕೊಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾರಿಗೆ ಚಾಲಕ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಟ್ಟಣದ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರದ ಆವರಣದಲ್ಲಿ ನಡೆದಿದೆ.
ಪಟ್ಟಣದ ಎನ್‌ಇಎಸ್‌ನಲ್ಲಿ ವಾಸವಾಗಿರುವ ಶಿವಕುಮಾರ್ ಆತ್ನಹತ್ಯೆಗೆ ಯತ್ನಿಸಿದ ಚಾಲಕ. ಮೇಲಾಧಿಕಾರಿಗಳಾಗಿರುವ ಸಿ.ಬಿ ಸಂತೋಷ್ ಕುಮಾರ್, ವಿ.ಹರೀಶ್, ವಿದ್ಯಾ ಎಂಬುವವರು ಉದ್ದೇಶ ಪೂರ್ವಕವಾಗಿಯೇ ಏಕಾಏಕಿ ಮೈಸೂರು ವಿಭಾಗಕ್ಕೆ ವರ್ಗವಣೆ ಮಾಡಿದ್ದಾರೆ.
ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ
ವರ್ಗಾವಣೆಯನ್ನು ರದ್ದು ಪಡಿಸಲು ಹಣವನ್ನು ಕೇಳಿದ್ದಾರೆ. ನನ್ನಲ್ಲಿ ಅವರಿಗೆ ಹಣಕೊಡಲು ಸಾಧ್ಯವಾಗದಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶಿವಕುಮಾರ್ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ವಿಷ ಕುಡಿದ ಸುದ್ದಿ ತಿಳಿದ ತಕ್ಷಣವೇ ತರಬೇತಿದಾರರು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಮಂಗಳೂರು: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ದಂಡ..!
[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]