ಮಂಗಳೂರು(ಡಿ.07): ಬಿಜೆಪಿಗರ ಮನಸ್ಥಿತಿ ನೋಡಿ, ಹೇಳಿದ್ರೆ ಮಹಿಳೆಯರು, ಮಾತೆಯರು ಅಂತ ಮಾತನಾಡ್ತಾರೆ. ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಬಗ್ಗೆ ಸಚಿವ ಈಶ್ವರಪ್ಪ ಹೀಗೆ ಮಾತನಾಡೋದು ಎಷ್ಟು ಸರಿ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

"

ಒಂದು ಐಶ್ವರ್ಯ ರೈಯನ್ನ ಎಷ್ಟು ಜನರಿಗೆ ಕೊಡೋದು ಎಂಬ ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಐವನ್ ಡಿಸೋಜಾ ಅವರು,  ಒಬ್ಬ ಮಹಿಳೆಯನ್ನ ಒಂದು ವಸ್ತುವಿಗೆ ಹೋಲಿಕೆ ಮಾಡಿದ್ದಾರೆ. ಇವರಿಗೆ ಬಾಯಿ ಮತ್ತು ತಲೆಗೆ ಬ್ಯಾಲೆನ್ಸ್ ಸರಿ ಇದೆಯಾ?ಎಲ್ಲಿಯಾದ್ರೂ ಕಾಂಬಿನೇಷನ್ ಸರಿಯಿಲ್ವಾ ಅನ್ನೋದು ನನ್ನ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಐಶ್ವರ್ಯ ರೈ ಅವರ ಬಗ್ಗೆ ಹೀಗೆ ಮಾತನಾಡಿದ್ದು ಸರಿಯಲ್ಲ, ಕೂಡಲೇ ಈಶ್ವರಪ್ಪ ಈ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ನೀವು ಯಾರಿಗೆ ಬೇಕಾದ್ರೂ ಮಂತ್ರಿ ಕೊಡಿ ನಮ್ಮದೇನು ತಕರಾರಿಲ್ಲ. ಆದ್ರೆ ಹೋಲಿಕೆ ಯಾರಿಗೆ ಮಾಡಿದ್ರೀ ಅನ್ನೋದ್ರ ಮೇಲೆ ನಿಮ್ಮ ಮನಸ್ಥಿತಿ ಗೊತ್ತಾಗುತ್ತೆ ಎಂದು ಈಶ್ವರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.