ಮಂಗಳೂರು(ಫೆ.14): ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರ ತನಿಖೆ ಚುರುಕುಗೊಳ್ಳುತ್ತಿದ್ದಂತೆ ವ್ಯಾಪಾರಿಯೇ ಬಂಗಾರವನ್ನು ಠಾಣೆಗೆ ತಂದೊಪ್ಪಿಸಿದ ಸ್ವಾರಸ್ಯಕರ ಘಟನೆಯೊಂದು ವಿಟ್ಲ ಠಾಣೆಯಲ್ಲಿ ನಡೆದಿದ್ದು, ಕಾನೂನಿನ ದುರ್ಬಳಕೆ ಮಾಡಲು ಯತ್ನಿಸಿದ ದೂರುದಾರರ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿ ಬಂಧಿಸುವಲ್ಲಿ ಬಂಟ್ವಾಳದ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂದು ವೈದ್ಯರ ಮೇಲೆ ರೌಡಿ ಅಟ್ಟಹಾಸ!

ಕುಳ ಗ್ರಾಮದ ಕಾರ್ಯಾಡಿ ಕ್ವಾಟ್ರಸ್‌ ನಿವಾಸಿ ನಿಜಾಮುದ್ದೀನ್‌ (26) ಬಂಧಿತ ಆರೋಪಿಯಾಗಿದ್ದಾನೆ. ಅಳಿಕೆ ಗ್ರಾಮದ ಕಾಂತಡ್ಕ ನಿವಾಸಿ ಶಾಕಿರಾ (21) ಡಿ.30ರಂದು ಮನೆಗೆ ಬೀಗ ಹಾಕಿ ಪೇಟೆಗೆ ಹೋಗಿ ಹಿಂದಿರುಗುವ ಸಮಯ ಮನೆಯ ಹಿಂದಿನ ಬಾಗಿಲು ತೆರೆದಿದ್ದು, ಮನೆಯಲ್ಲಿದ್ದ ಸುಮಾರು 28 ಗ್ರಾಂ ಚಿನ್ನಾಭರಣ ಸೇರಿ 3 ಸಾವಿರ ನಗದನ್ನು ಕಳವು ಮಾಡಲಾಗಿತ್ತೆಂದು ವಿಟ್ಲ ಠಾಣೆಗೆ ದೂರು ನೀಡಿದ್ದರು.

ಹುಬ್ಬಳ್ಳಿಯಲ್ಲಿ ಬೃಹತ್‌ ಹೂಡಿಕೆದಾರರ ಸಮಾವೇಶ, 10000 ಕೋಟಿ ಬಂಡವಾಳ ನಿರೀಕ್ಷೆ!

ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಬಂಗಾರದ ವ್ಯಾಪಾರಿಯೊಬ್ಬ ಠಾಣೆಗೆ ಬಂದು ಬಂಗಾರವನ್ನು ಹಿಂದಿರುಗಿಸಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಶಾಕಿರಾಗಳಿಗೆ ಆರ್ಥಿಕ ಸಮಸ್ಯೆಯಾಗಿದ್ದು, ನಿಜಾಮುದ್ದೀನ್‌ ಹಾಗೂ ಜಲೀಲ್‌ ಜತೆಗೆ ಕಳ್ಳತನದ ದೂರುದಾರೆ ಶಾಕಿರಾ ಬಂದು ಬಂಗಾರವನ್ನು ಡಿ.20ರಂದೇ ತನಗೆ ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದಾನೆನ್ನಲಾಗಿದೆ.

ಬಂಗಾರವನ್ನು ಮಾರಾಟ ಮಾಡಿ ಬಳಿಕ ಸುಳ್ಳು ದೂರು ನೀಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.