Asianet Suvarna News Asianet Suvarna News

ಹುಬ್ಬಳ್ಳಿ: ರಷ್ಯಾದ ಬಾಲಕನಿಗೆ ಕಾಶಿ ಗುರುಗಳಿಂದ ಇಷ್ಟಲಿಂಗ ದೀಕ್ಷೆ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಹಿಂದೆ ವೀರಶೈವ ಧರ್ಮ ಸಿದ್ಧಾಂತ ಸ್ವೀಕರಿಸಿ ಇಷ್ಟಲಿಂಗ ದೀಕ್ಷೆ ಹೊಂದಿದ್ದ ರಷ್ಯಾದ ಪಾರ್ವತಿ ಎಂಬುವವರು ನಿತ್ಯವೂ ಅವರ ಮನೆಯಲ್ಲಿ ಇಷ್ಟಲಿಂಗ ಪೂಜೆ ಸಾಂಗಾವಾಗಿ ನೆರವೇರಿಸುತ್ತಿದ್ದು, ಇದರಿಂದ ಪ್ರಭಾವಿತನಾದ ಬಾಲಕ ಆ್ಯಂಡ್ರೆ, ತನಗೂ ಇಷ್ಟಲಿಂಗ ದೀಕ್ಷೆ ಬೇಕೆಂದು ಉತ್ಕಟ ಇಚ್ಚೆ ತೋರಿದ್ದರಿಂದ ಪಾಲಕರು ಕಾಶಿ ಪೀಠದಲ್ಲೇ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ. 

Ishtalinga Deeksha for Russian Boy by Kashi Guru grg
Author
First Published Sep 27, 2023, 6:30 AM IST

ಹುಬ್ಬಳ್ಳಿ(ಸೆ.27):  ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರಪ್ರದೇಶದ ಕಾಶಿ ಜ್ಞಾನಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರಿಂದ ರಷ್ಯಾದ ಮಾಸ್ಕೋ ನಿವಾಸಿ ಪಾರ್ವತಿ ಎಂಬುವವರ ಪುತ್ರ ಆ್ಯಂಡ್ರೆ ಎಂಬ 8 ವರ್ಷದ ಬಾಲಕ ಸೋಮವಾರ ಕಾಶಿಯಲ್ಲಿ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿ ಗಮನ ಸೆಳೆದಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಹಿಂದೆ ವೀರಶೈವ ಧರ್ಮ ಸಿದ್ಧಾಂತ ಸ್ವೀಕರಿಸಿ ಇಷ್ಟಲಿಂಗ ದೀಕ್ಷೆ ಹೊಂದಿದ್ದ ರಷ್ಯಾದ ಪಾರ್ವತಿ (ಹೆಸರು ಬದಲಿಸಿದೆ) ಎಂಬುವವರು ನಿತ್ಯವೂ ಅವರ ಮನೆಯಲ್ಲಿ ಇಷ್ಟಲಿಂಗ ಪೂಜೆ ಸಾಂಗಾವಾಗಿ ನೆರವೇರಿಸುತ್ತಿದ್ದು, ಇದರಿಂದ ಪ್ರಭಾವಿತನಾದ ಬಾಲಕ ಆ್ಯಂಡ್ರೆ, ತನಗೂ ಇಷ್ಟಲಿಂಗ ದೀಕ್ಷೆ ಬೇಕೆಂದು ಉತ್ಕಟ ಇಚ್ಚೆ ತೋರಿದ್ದರಿಂದ ಪಾಲಕರು ಕಾಶಿ ಪೀಠದಲ್ಲೇ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ. 

ಕಾಶಿಯಲ್ಲಿ ಜಗಣ್ಣ; ಮಹಾಮಂತ್ರ ದೀಕ್ಷೆ ನೀಡಿದ ಗುರುವರ್ಯರು!

ಇದೇ ವೇಳೆ ಬಾಲಕ ಆ್ಯಂಡ್ರೆಗೆ ಡಾ.ಚಂದ್ರಶೇಖರ ಶಿವಾಚಾರ್ಯರು ‘ಗಣೇಶ’ ಎಂದು ಮರು ನಾಮಕರಣ ಮಾಡಿದರು.

Follow Us:
Download App:
  • android
  • ios